ಜೆದ್ದಾ(www.vknews.in):ಸತತ ಮೂರು ತಿಂಗಳ ಲಾಕ್ ಡೌನ್ ಬಳಿಕ ಮರುಭೂಮಿ ನಾಡು ಸಹಜ ಸ್ಥಿತಿಗೆ ಮರಳ ತೊಡಗಿದ್ದು, ಎರಡು ತಿಂಗಳ ಬಳಿಕ ದಿನೇದಿನೇ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣಗಳು ದಾಖಲಾಗುತ್ತಿದೆ. ರೇಗಮುಕ್ತಿ ಸಂಖ್ಯೆಯು ಶೇ80ದಾಟಿದ್ದು, ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿಯಲ್ಲಿ 2476 ಹೊಸ ಕೊವಿಡ್ ಪ್ರಕರಣಗಳು, 4000 ರೋಗಮುಕ್ತಿ ಹಾಗೂ 34 ಬಲಿಗಳು ದಾಖಲಾಗಿದೆ. ಇದುವರೆಗೂ ಪತ್ತೆಯಾದ ಒಟ್ಟು 255825 ಕೊವಿಡ್ ಸೋಂಕಿತರ ಪೈಕಿ 207259 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 48566 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆೆ. ಇವರಲ್ಲಿ 2199 ಮಂದಿಯ ಸ್ಥಿತಿ ಚಿಂತಾಜನಕವಾಗಿದೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.