ಮಡಿಕೇರಿ (www.vknews.com): ವಿಶ್ವದಲ್ಲಿಯೇ ಸರಿಸಾಟಿಯಿಲ್ಲದಂತಹ ಉಲಮಾ ಸಂಘಟನೆ ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಇಂದು 95ರ ಹೊಸ್ತಿಲಲ್ಲಿದೆ. ಒಂಬತ್ತುವರೆ ದಶಕಗಳ ಜ್ಞಾನ ಪ್ರಸರಣೆಯ ನೆನಪುಗಳೊಂದಿಗೆ ಮತ್ತೊಂದು ಸ್ಥಾಪನಾ ದಿನ ನಮ್ಮೆಡೆಗೆ ಆಗಮಿಸಿದೆ. ಕೋವಿಡ್ ನಿಯಂತ್ರಣಗಳು ಜಾರಿಯಲ್ಲಿರುವ ಕಾರಣ ಆನ್ಲೈನ್ ಮೂಲಕ ಸ್ಥಾಪನಾ ದಿನ ಆಚರಿಸಲು SKSSF ಕೊಡಗು ಜಿಲ್ಲಾ ಸಮಿತಿಯು ತೀರ್ಮಾನಿಸಿದೆ.
ಆನ್ಲೈನ್ ಕಾರ್ಯಕ್ರಮವನ್ನು ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯರು, ಕೊಡಗು ಜಿಲ್ಲಾ ಉಪ ಖಾಝಿಯು ಆದ ಶೈಖುನಾ ಅಬ್ದುಲ್ಲಾ ಫೈಝಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯನ್ನು SKSSF ಕೇಂದ್ರ ಸಮಿತಿ ಸದಸ್ಯರಾದ ಉಸ್ತಾದ್ ಇಕ್ಬಾಲ್ ಮೌಲವಿ, ಅಶ್ರಫ್ ಮಿಸ್ಬಾಹಿ, ಜಂಶೀರ್ ವಾಫಿ ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ವಹಿಸಲಿದ್ದಾರೆ.
ನೌಶಾದ್ ಫೈಝಿ, ಸುಹೈಬ್ ಫೈಝಿ, ಹುಸೈನ್ ಫೈಝಿ, ಸಿದ್ದೀಕ್ ಹಾಜಿ ಇನ್ನೂ ಹಲವು ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ರಾತ್ರಿ 09:00 ಘಂಟೆಗೆ ಸರಿಯಾಗಿ ನಡೆಯುವ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಭಾಗವಹಿಸಲು ಝೂಮ್ ಐಡಿ 882 588 8984 ಹಾಗೂ ಪಾಸ್ವರ್ಡ್ SKSSF2021 ಅಥವಾ https://us02web.zoom.us/j/8825888984?pwd=WW5ublk4SEJ0TTJpeS95ZTAzQzVnQT09 ಈ ಲಿಂಕ್ ಅನ್ನು ಬಳಸಬಹುದು. ಸರ್ವ ಸಮಸ್ತ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ SKSSF ಕೊಡಗು ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.