ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಪಟ್ಟಣ ಪಂಚಾಯತ್ ವ್ಯಾಪ್ತಿಯ 16 ನೇ ವಾರ್ಡ್ ಮುಳ್ಳುಗುಡ್ಡೆ ಜಂಕ್ಷನ (ಹಿದಾಯತ್ ನಗರ) ಎಂಬಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ನಿಧಿಯಿಂದ ಸುಮಾರು 1 ಲಕ್ಷದ 25 ಸಾವಿರ ರೂಪಾಯಿ ವೆಚ್ಚದಲ್ಲಿ ಹೈ ಮಾಸ್ಟ್ ದೀಪವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ 16ನೇ ವಾರ್ಡ್ ಕೌನ್ಸಿಲರ್ ಜುಲೇಖಾ ಬಶೀರ್ ಹೈ ಮಾಸ್ಟ್ ದೀಪವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಪಿಐ. ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಕಿನ್ಯಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೋಡಿಜಾಲ್, ಎಸ್ಡಿಪಿಐ. ಅಜ್ಜಿನಡ್ಕ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ, ಉಪಾಧ್ಯಕ್ಷರಾದ ಬಶೀರ್ ಅಜ್ಜಿನಡ್ಕ, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಇಸ್ಮಾಯಿಲ್ ಟಿ ಹಾಗೂ ಊರಿನ ನಾಗರಿಕರು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.