(ವಿಶ್ವ ಕನ್ನಡಿಗ ನ್ಯೂಸ್) : ತನ್ನ ಮಧುರ ಕಂಠದಿಂದ ಹಾಡಿದ ಸಾವಿರಾರು ಗೀತೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದು ದೇಶದ ಎಲ್ಲಾ ತರಹದ ಪ್ರಶಸ್ತಿಗಳಿಗೆ ಭಾಜನರಾಗಿ ಲಕ್ಷಾಂತರ ಅನುಯಾಯಿಗಳನ್ನು ಪಡೆದು, ಕೋಟ್ಯಾಂತರ ಮನಸ್ಸಿನಲ್ಲಿ, ಹ್ರದಯದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವ ಸುಮಧರ ಕಂಠದ ಮಹಾರಾಣಿಯ ಅಗಲಿಕೆಯು ಇಡೀ ವಿಶ್ವದ ಚಿತ್ರಲೋಕ ಅಲ್ಲದೇ ಮಿಲಿಯನ್ ಗಟ್ಟಲೆ ಲಲಿತಕಲಾ ಪ್ರೇಮಿಗಳ ಬಾಳಲ್ಲಿ ಈ ದಿನ ಅತ್ಯಂತ ದುಃಖತಪ್ತವಾಗಿದೆ ಎಂದು ಲತಾ ಮಂಗೇಶ್ಕರ್ ಅವರ ಅನುಯಾಯಿ, ಸಂಗೀತ ಪ್ರೇಮಿ, ಕಲಾ ಪ್ರೇಮಿ, ಕಾರ್ನಾಡ್ ಫೌಂಡೇಶನ್(ರಿ) ಇದರ ಸಂಸ್ಥಾಪಕಾಧ್ಯಕ್ಷ ಅಶ್ಫಾಕ್ ಎ. ಕಾರ್ನಾಡ್ ಸಂತಾಪವನ್ನು ಸೂಚಿಸಿದ್ದಾರೆ.
ಇಂತಹ ಮಹಾನ್ ಚೇತನರ ಅಗಲಿಕೆಯು ಸಮಾಜ, ಕಲಾಮಾಧ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಅಲ್ಲದೇ ಅಪಾರ ಅನುಯಾಯಿಗಳ ಮನಸ್ಸಿಗೆ ಆಳವಾದ ನೋವು ಹಾಗೂ ಬಹಳ ಘಾಸಿಯನ್ನುಂಟು ಮಾಡಿತು. ಅವರ ಅಗಲಿಕೆಯ ದುಃಖವನ್ನು ಸಹಿಸಲು ಅವರ ಕುಟುಂಬ, ಅಪಾರ ಅನುಯಾಯಿಗಳಿಗೆ ಅ ಸರ್ವಶಕ್ತನು ಶಕ್ತಿಯನ್ನು ನೀಡಿ ಕರುಣಿಸಲಿ ಎಂದು ಇದೇ ಸಂಧರ್ಬದಲ್ಲಿ ಹಾರೈಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.