ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) ; ಬಾಳಿ ಬದುಕಬೇಕೆಂಬ ಸುಂದರ ಕನಸುಗಳನ್ನು ಹೆಣೆಯುವ ಸಮಯದಲ್ಲಿ ವಿಧಿಯಾಟಕ್ಕೆ ಸಿಲುಕಿ ತನ್ನ ಬಲಗಾಲುಗಳನ್ನ ಕಳಕೊಂಡ ನತದೃಷ್ಟ ಬಾಲೆ ಭಾಗ್ಯಲಕ್ಷ್ಮಿ (16) ಬೆಟ್ಟಂಪಾಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ (ವಾಣಿಜ್ಯ ವಿಭಾಗ) ಓದುತ್ತಿದ್ದು, ಫೆ.3ರಂದು ತನ್ನ ಹುಟ್ಟುಹಬ್ಬಕ್ಕೆ ತಿಂಡಿ ತರಲೆಂದು ತನ್ನ ಸಂಬಂಧಿಕನ್ನೊಂದಿಗೆ ಸ್ಕೂಟಿಯಲ್ಲಿ ಪುತ್ತೂರಿಗೆ ಹೋಗಿ ಹಿಂತಿರುಗುವಾಗ ಸಂಪ್ಯ ಎಂಬಲ್ಲಿ ರಾತ್ರಿ 7.30ರ ಸಮಯಕ್ಕೆ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಲಾರಿ ಅವಳ ಬಲಗಾಲ ಮೇಲೆ ಹರಿದು ತೊಡೆಭಾಗದಿಂದ ಕಾಲು ತುಂಡಾದರೆ ಅವಳ ಎಡ ಕೈ ಲಾರಿಯ ವೀಲ್ ಗೆ ಸಿಲುಕಿ ಸ್ವಲ್ಪ ದೂರ ಎಳೆದು ಕೊಂಡು ಹೋಗಿದ್ದ ಪರಿಣಾಮವಾಗಿ ಕೈ ಹಾಗು ಎಡ ಕಾಲು ಮುಕ್ಕಾಲು ಭಾಗ ನಜ್ಜುಗುಜ್ಜಾಗಿದೆ.
ಮುಂದಿನ ಬೈಕ್ ನಲ್ಲಿ ಅವಳ ಅಣ್ಣಂದಿರು ಇದ್ದು, ಅವರು ಕೂಡಲೇ ಭಾಗ್ಯಲಕ್ಷ್ಮಿಯನ್ನು ಮಂಗಳೂರಿನ ಎಜೆ ಆಸ್ವತ್ರೆ ಗೆ ಕರೆದುಕೊಂಡು ಬಂದು ದಾಖಲಿಸಿದರು. ಆಸ್ವತ್ರೆ ಗೆ ದಾಖಲಾಗಿ ಇಂದಿಗೆ ಹನ್ನೆರಡು ದಿನವಾಗಿದೆ, ಆದರೆ ಅವಳ ಬಲಗಾಲನ್ನು ಮರು ಜೋಡಣೆ ಮಾಡಲಾಗಲಿಲ್ಲ. ಹಾಗೆ ಎಡ ಕೈ ಹಾಗು ಎಡ ಗಾಲನ್ನು ಶಸ್ತೃಚಿಕಿತ್ಸೆ ಮಾಡಲಾದ ಡಾ. ಸನತ್ ಭಂಡಾರಿ ಹೆತ್ತವರಿಗೆ ಧೈರ್ಯ ತುಂಬಿದ್ದಾರೆ. ಭಾಗ್ಯಲಕ್ಷ್ಮಿ ಏನೇ ಕೆಲಸ ಮಾಡುತ್ತಿದ್ದರು ಹೆಚ್ಚಾಗಿ ಎಡಕೈಯನ್ನೇ ಹೆಚ್ಚು ಬಳಸುತ್ತಿದ್ದಳಂತೆ.
ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಾಯಕ ಅರ್ಚಕರಾಗಿ 36ವರ್ಷದಿಂದ ದುಡಿಯುತ್ತಿದ್ದ ಹರಿನಾರಾಯಣ (51) ಹಾಗು ತ್ರಿವೇಣಿ (40)ದಂಪತಿಗಳ ಮೂರನೆಯ ಮುದ್ದಿನ ಏಕೈಕ ಹೆಣ್ಣು ಮಗಳು ಭಾಗ್ಯಲಕ್ಷ್ಮಿ. ಗಂಡು ಮಕ್ಕಳಿಬ್ಬರು ಕಾಲೇಜು ಓದುತ್ತಿದ್ದು, ಹರಿನಾರಾಯಣ ಅವರು ತಮ್ಮ ಅರ್ಚಕ ವೇತನದಿಂದ ತಮ್ಮ ಸಂಸಾರವನ್ನು ನಿಭಾಯಿಸುತ್ತಿದ್ದರು. ಮೂರು ವರ್ಷದ ಹಿಂದೆ ಇವರ ಪತ್ನಿಗೂ ಉಷಾರಿಲ್ಲದೆ 2ಲಕ್ಷ ಖರ್ಚಾಗಿತ್ತು. ಅದರ ಎಡೆಯಲ್ಲಿ ಈಗ ಮೂರು ತಿಂಗಳ ಹಿಂದೆ ಇವರಿಗೂ ಪಿತ್ತಕೋಶ, ಲಿವರ್ ಕಿಡ್ನಿಯಲ್ಲಿ ಕಲ್ಲಾಗಿದ್ದು ಈಗ ತಾನೆ ಚೇತರಿಸಿ ರುವವರು. 4ತಿಂಗಳ ಹಿಂದೆ ಇವರ ತಾಯಿಯು ತೀರಿ ಹೋಗಿದ್ದು, ಈ ಸಂಸಾರದ ಪಾಡು ತುಂಬಾ ಕಷ್ಟದಲ್ಲಿದೆ.
ಈ ಎಲ್ಲಾ ನೋವಿನ ನಡುವೆ ಮಗಳ ಈ ಸ್ಥಿತಿಯನ್ನು ನೆನೆದು ದಂಪತಿಗಳು ಇಂದು ಕಣ್ಣೀರು ಮಿಡಿಯುತ್ತಿದ್ದಾರೆ. ಮಗಳ ವೈದ್ಯಕೀಯ ವೆಚ್ಚಕ್ಕೆ ಸುಮಾರು 15 ಲಕ್ಷ ತಗಲಬಹುದೆಂದು ವೈಧ್ಯರು ಹೇಳಿದ್ದು, ಅಷ್ಟು ಹಣ ಭರಿಸಲು ಇವರಿಂದು ಅಶಕ್ತರು. ಆದ್ದರಿಂದ ದಾನಿಗಳಿಂದ ಇವರಿಂದು ನೆರವನ್ನು ಕೋರಿದ್ದಾರೆ.
ದಯವಿಟ್ಟು ಈ ಹೆಣ್ಣು ಮಗಳಿಗೆ ತಮ್ಮ ಕೈಲಾದಷ್ಟು ನೆರವನ್ನು ನೀಡಬೇಕಾಗಿ ವಿನಂತಿಸುತ್ತಿದ್ದೇವೆ. ನಿಮ್ಮ ನೆರವು ಒಂದು ಹೆಣ್ಣು ಮಗಳ ಜೀವವನ್ನು ರಕ್ಷಿಸುವುದರೊಂದಿಗೆ ಆ ತಂದೆ ತಾಯಿಗೆ ಮಗಳನ್ನು ಉಳಿಸಿಕೊಟ್ಟ ಪುಣ್ಯ ನಿಮಗೆ ಸಿಗಲಿದೆ.
ಕೃಷ್ಣ ಕುಮಾರ್ (ಸಹೋದರ) ಅಕೌಂಟ್ ನಂಬರ್: 70750100006156 ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಪುತ್ತೂರು ಐಎಫ್ಎಸ್ ಕೋಡ್: ಬಿಎಆರ್ ಬಿ0ವಿಜೆಬಿಇಪಿಎ
ಗೂಗಲ್ ಪೇ: 7022950749(ಸಹೋದರ) ತಂದೆ ಮೊಬೈಲ್ ನಂಬರ್ : 9449594658(ಹರಿನಾರಾಯಣ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.