(www.vknews.in
. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ತನ್ನ ಸಂಸ್ಕೃತಿ,ಪರಂಪರೆ,ಆಚರಣೆ ಮತ್ತು ಸಂಪ್ರದಾಯಗಳ ಮೂಲಕ ವಿಶ್ವದ ಗಮನ ಸೆಳೆಯುವ ಒಂದು ಲೋಹದ ಚುಂಬಕದಂತೆ ನಮ್ಮ ಭಾರತ. ಇಲ್ಲಿ ದಾಸರು,ಶರಣರು,ಸಂತರು, ಪವಾಡ ಪುರುಷರು, ಸಮಾಜ ಸುಧಾರಕರ ಸ್ಪರ್ಷ ಈ ಮಣ್ಣ ಕಣದಲ್ಲಿದೆ, ಒಬ್ಬ ವ್ಯಕ್ತಿಯನ್ನು ಇಡೀ ವಿಶ್ವವೇ ಮಹಾತ್ಮ ಎಂದು ಒಪ್ಪಿಕೊಳ್ಳುವುದು ಎಂದರೆ ಅದು ಸುಲಭದ ಮಾತಲ್ಲ ಅಂತಹ ಒಬ್ಬ ಮಹಾನ್ ಚೇತನ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರು ಎಂಬುದು ನಮ್ಮ ಭಾರತ ದೇಶದ ಹೆಮ್ಮೆ ಮೋಹನ್ದಾಸ್ ಕರಮ್ಚಂದ್ ಗಾಂಧಿಯವರು ಮಹಾತ್ಮ ಗಾಂಧೀಜಿಯವರಾದದ್ದು ಕೂಡ ಒಂದು ಯುಗಪುರಷನ ರೀತಿ ಯುಗ ಪುರುಷರುಗಳು ಯುಗಗಳಿಗೊಮ್ಮೆ ಜನಿಸುತ್ತಾರಂತೆ ಹೌದು ಈ ನುಡಿ ಅಕ್ಷರಶಃ ಸತ್ಯ ಸ್ವಾತಂತ್ರ್ಯ ಭಾರತಾನಂತರ ಮಹಾತ್ಮ ಗಾಂಧೀಜಿಯವರನ್ನು ಮೀರಿಸುವಂತಹ ಒಬ್ಬರನ್ನೂ ಕೂಡ ಕಾಣಲು ಸಾಧ್ಯವಾಗಿಲ್ಲ ಗಾಂಧೀಜಿಯವರು ಇಲ್ಲವೆಂಬುದನ್ನು ಇಂದಿಗೂ ಯಾರು ಒಪ್ಪಿಕೊಳ್ಳಲಾಗದು ಆ ವ್ಯಕ್ತಿತ್ವಕ್ಕೆ ಸಾವೆಂಬುದೆ ಇಲ್ಲ ಅದೊಂದು ಅನಂತ ಚೇತನ ಪ್ರಸಕ್ತ ದಿನಗಳಲ್ಲಿ ಇಡೀ ವಿಶ್ವವೇ ಗಾಂಧೀಜಿಯವರ ತತ್ವ ಆದರ್ಶಗಳಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಬಹುದು, ಹೌದು ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸಾ, ಸರಳತೆ ಮತ್ತು ಧರ್ಮಶ್ರದ್ದೆ ಈ ತತ್ವಾದರ್ಶಗಳುಳ್ಳ ಗಾಂಧಿವಾದಿಗಳ ರೂಪದಲ್ಲಿ ಇಂದಿಗೂ ಗಾಂಧೀಜಿಯವರನ್ನು ಅನವರತಗೊಳಿಸಿವೆ. ಮಹಾತ್ಮ ಗಾಂಧೀಜಿಯವರ ಬಗ್ಗೆ ವಿದೇಶದ ಖ್ಯಾತನಾಮರಾದ ಅಲ್ಬರ್ಟ್ ಐನ್ಸ್ಟೀನ್ನ ಒಂದು ಉದ್ಗಾರ ಹೀಗಿದೆ:–
“ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’.” -ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ.
ನಮಗೆ ನಂಬಲಿಕ್ಕೆ ಅಸಾಧ್ಯವೆನಿಸಬಹುದು ಆದರೆ ಇದು ಸತ್ಯ ಈ ಮಣ್ಣ ಕಣ ಕಣದಲ್ಲಿಯೂ ಗಾಂಧೀಜಿಯವರ ತತ್ವಾದರ್ಶಗಳಿವೆ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಹಬಾಳ್ವೆಯ ಸಮರಸದ ಸಂದೇಶಗಳು ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳಲ್ಲಿ ಇಂದಿಗೂ ಜೀವಂತವಾಗಿ ಹುದುಗಿದೆ. ದೇಶ ವಿದೇಶಗಳು ಹಾಗೂ ಇಡೀ ವಿಶ್ವವೇ ಈ ಧೀಮಂತ ವ್ಯಕ್ತಿತ್ವವನ್ನು ಒಪ್ಪಿಕೊಂಡಿವೆಯಾದರೂ ನಮ್ಮ ದೇಶದಲ್ಲಿಯೇ ಇರುವ ಕೆಲವೊಬ್ಬರು ಗಾಂಧೀಜಿಯವರ ಬಗ್ಗೆ ತಾತ್ಸಾರ ಭಾವದಿಂದ ಮಾತನಾಡುವುದು ವಿಪರ್ಯಾಸದ ಸಂಗತಿ! ಗಾಂಧೀಜಿಯವರನ್ನು ಗಾಂಧೀಜಿಯವರ ತತ್ವಾದರ್ಶಗಳನ್ನು ವಿರೋಧಿಸುವವರು ಎಂದಿಗೂ ಗಾಂಧೀಜಿಯವರ ಭಾವಚಿತ್ರವಿರುವ ನೋಟನ್ನು ತಿರಸ್ಕರಿಸಲಾರರು ಒಂದಲ್ಲ ಒಂದು ರೀತಿಯಲ್ಲಿ ಇಡೀ ದೇಶಕ್ಕೆ ದೇಶವೆ ಗಾಂಧೀಜಿಯವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿದೆಯೆಂದರೆ ಬಹುಶಃ ತಪ್ಪಗಲಾರದು ವಿರೋಧಿಗಳ ಎದೆಯಲ್ಲಿಯೂ ನೆಲೆಸುವ ಶಾಂತಿಯ ಮಂತ್ರವ ಪಡಿಸುವಂತೆ ಮಾಡಿಸಬಲ್ಲ ಛಾಪು ನಮ್ಮ ಬಾಪುವಿನಲ್ಲಿದೆ.
ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿಯವರ ಕೊಡುಗೆ ಅಗಣಿತ ವಿದೇಶಗಳ ಕೆಲವೊಂದು ಅನಿಷ್ಟ ಪದ್ದತಿಗಳ ಹೋರಾಟಗಳಿಗೂ ನಮ್ಮ ಭಾಪೂಜಿಯೇ ಮುನ್ನುಡಿದಾತ ಬ್ರಿಟಿಷರ ಎದೆಯಲ್ಲಿಯೂ ಶಾಂತಿ, ಸತ್ಯ & ಅಹಿಂಸೆಗಳ ಮೂಲಕ ನಡುಕ ಹುಟ್ಟಿಸಿ ಶಾಂತಿ ಮಂತ್ರವ ಪಠಿಸಿದ ಭ್ರಾತೃತ್ವ ಸಹಬಾಳ್ವೆ ನಮ್ಮ ಬಾಪು. ನಮ್ಮ ದೇಶದಲ್ಲಿನ ಕೆಲವು ರೋಗಗ್ರಸ್ಥ ಸಂಪ್ರದಾಯಗಳ ವಿರುದ್ಧ ಸುಧಾರಣೆಯ ಆಂದೋಲನವನ್ನೇ ನಡೆಸಿದರು ಒಂದು ಮಾಹಿತಿಯ ಪ್ರಕಾರ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಮೇಲ್ಜಾತಿಯವರಿಗೆ ಸ್ವಚ್ಛತೆ & ಶ್ರಮದ ಕೆಲಸ ವಹಿಸಿದರೆ ಕೆಳಜಾತಿ ಅಥವಾ ಆಗಿನ ಕಾಲದಲ್ಲಿ ಅಸ್ಪೃಶ್ಯರು ಎಂದು ಶೋಷಣೆಗೊಳಗಾಗಿದ್ದವರನ್ನು ಅಡುಗೆ ಮನೆಯ & ದೇವರ ಮನೆಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿದ್ದರಂತೆ ಇದರರ್ಥ ಸಾಮಾಜಿಕ ನ್ಯಾಯ ಸಿದ್ದಾಂತಗಳ ತಕ್ಕಡಿಯಲ್ಲಿ ಎಲ್ಲರೂ ಸಮಾನರು ಮತ್ತು ಅಸ್ಪೃಶ್ಯತಾ ನಿವಾರಣೆಯಾಗಬೇಕಾದರೆ ಈ ರೀತಿಯಾದ ರಾಮಬಾಣಗಳು ಅತ್ಯವಶ್ಯಕ ಎಂಬುದು ಮತ್ತು ಅಸ್ಪೃಶ್ಯತಾ ನಿವಾರಣೆಗಾಗಿ ಈ ರೀತಿಯ ನಿಲುವು ಸ್ವಾಗತಾರ್ಹ ಪ್ರಸಕ್ತ ದಿನಮಾನಗಳಲ್ಲಿ ರಾಮ ಎಂದರೆ ಒಂದು ಪಕ್ಷದ ಸಿದ್ದಾಂತವಾಗಿಬಿಟ್ಟಿದೆ ಅಥವಾ ಬೇರೆಯ ಪಕ್ಷದವರು ರಾಮನ ವಿರೋಧಿಗಳು ಎಂದು ಬಿಂಬಿತವಾಗಿದೆ ನಿಮಗೆ ತಿಳಿದಿರಲಿ ಗಾಂಧೀಜಿಯವರಷ್ಟು ರಾಮನ ಪರಮ ಭಕ್ತ ಈ ದೇಶದಲ್ಲಿ ಇನ್ನೊಬ್ಬರಿಲ್ಲ ಒಂದು ಮಾಹಿತಿಯ ಪ್ರಕಾರ ಒಮ್ಮೆ ಗಾಂಧೀಜಿಯರ ಆರೋಗ್ಯ ಸರಿಯಿಲ್ಲದಿದ್ದಾಗ ಏನೆಲ್ಲಾ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಚೇತರಿಯಾಗದಿದ್ದಾಗ ಜಿಗುಪ್ಸೆಗೊಂಡಿದ್ದರಂತೆ ನಂತರ ರಾಮ, ರಾಮ ಎಂದು ಉಚ್ಛರಿಸಿದ ಕೆಲವೇ ಕ್ಷಣಗಳಲ್ಲಿ ಆರೋಗ್ಯದಲ್ಲಿ ಚೇತನ ಒಡಮೂಡಿತಂತೆ ಮತ್ತು ಗಾಂಧೀಜಿಯವರು ಕೊನೆ ಉಸಿರೆಳೆಯುವ ಕೊನೆಯ ಗಳಿಗೆಯಲ್ಲಿಯೂ ರಾಮ ಎಂದು ಉದ್ಗಾರವನ್ನೆತ್ತಿ ಹಸು ನೀಗಿದರಂತೆ ರಾಮನ ಪರಮ ಭಕ್ತ ಮಹಾತ್ಮ ಗಾಂಧೀಜಿಯವರು.
ಕೃತಕವಾದ ಸ್ವರ್ಗ ನಿಜವಾದ ಪೂರಕವಂತೆ & ಸತ್ಯ ಯಾವಾಗಲೂ ಏಕಾಂಗಿ ಅದಕ್ಕೆ ಯಾವ ಆಧಾರವೂ ಬೇಕಾಗಿಲ್ಲ ಮತ್ತು ಅಷ್ಟೇ ಕಠೋರ ಇಂತಹ ಸತ್ಯ ಅಹಿಂಸೆಯ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ನಮ್ಮ ಬಾಪೂಜಿಯವರ ಜಯಂತಿಯ ಶುಭಾಶಯಗಳು…….
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.