ಇಸ್ಲಾಮಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ ಗುರುವಾರ ಸೋತ ನಂತರ ಪಾಕಿಸ್ತಾನ ತಂಡ ಮತ್ತು ಮ್ಯಾನೇಜ್ಮೆಂಟ್ ತೀವ್ರ ಟೀಕೆಗೆ ಒಳಗಾಗಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಟೀಮ್ ಇಂಡಿಯಾದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಭಾರತ ಉತ್ತಮ ತಂಡವಲ್ಲ ಮತ್ತು ಮುಂದಿನ ವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಹೊರಗುಳಿಯಲಿದೆ ಎಂದು ಅಖ್ತರ್ ಹೇಳಿದರು.
ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಪಾಕಿಸ್ತಾನದ ಸೋಲಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. “ಇದು (ಪಾಕಿಸ್ತಾನದ ಸೋಲು) ನಿಜವಾಗಿಯೂ ನಿರಾಶಾದಾಯಕವಾಗಿದೆ. ಈ ವಾರವೇ ಪಾಕಿಸ್ತಾನ ತಾಯ್ನಾಡಿಗೆ ಮರಳುತ್ತದೆ ಎಂದು ನಾನು ಈಗಾಗಲೇ ಹೇಳಿದ್ದೆ. ಸೆಮಿಫೈನಲ್ ಆಡಿದ ನಂತರ ಭಾರತ ತವರಿಗೆ ಮರಳಲಿದೆ. ಅವರು ಕೂಡ ಅಂತಹ ಉತ್ತಮ ತಂಡವಲ್ಲ, ಎಂದು ಅಖ್ತರ್ ಹೇಳಿದರು.
ನಾಯಕ ಬಾಬರ್ ಅಜಮ್ ಅವರಿಂದ ಹಿಡಿದು ಜಿಂಬಾಬ್ವೆ ವಿರುದ್ಧದ ಪಾಕಿಸ್ತಾನ ಸೋಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವರೆಗೂ ಅಖ್ತರ್ ತಂಡವನ್ನು ಟೀಕಿಸಿದ್ದಾರೆ. ತಂಡದಲ್ಲಿ ಅನರ್ಹ ಆಟಗಾರರನ್ನು ಸಹ ಮಂಡಳಿ ಆಯ್ಕೆ ಮಾಡಿದೆ ಎಂದು ಅಖ್ತರ್ ಆರೋಪಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಒಂದು ರನ್ ಅಂತರದಲ್ಲಿ ಸೋಲನುಭವಿಸಿತು. ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ನಂತರ ಪಾಕಿಸ್ತಾನದ ಸೆಮಿಫೈನಲ್ ಆಸೆ ಅನಿಶ್ಚಿತವಾಗಿದೆ. ಈ ಗುಂಪಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.
ಆದಾಗ್ಯೂ, ಸೆಮಿಫೈನಲ್ನಲ್ಲಿ ಸೋತ ನಂತರ ಭಾರತವು ತವರಿಗೆ ಮರಳುತ್ತದೆ ಎಂಬ ಅಖ್ತರ್ ಅವರ ಹೇಳಿಕೆಯನ್ನು ಭಾರತೀಯ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.