ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಕರಿಪುರದಿಂದ ರಿಯಾದ್ಗೆ ತೆರಳುತ್ತಿದ್ದ ವಿಮಾನದಲ್ಲಿ ಪಾಸ್ಪೋರ್ಟ್ ಮರೆತಿದ್ದ ಕೇರಳದ ಪ್ರಯಾಣಿಕರೊಬ್ಬರು ರಿಯಾದ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 321ರಲ್ಲಿ ರಿಯಾದ್ ಗೆ ತೆರಳುತ್ತಿದ್ದ ಮಲಪ್ಪುರಂನ ಚೆಮ್ಮಾಡ್ ವೆಲಿಮುಕ್ ಮೂಲದ ಸಕೀನಾ ಅಹ್ಮದ್ ಅವರು ವಿಮಾನದಲ್ಲಿ ಪಾಸ್ ಪೋರ್ಟ್ ಮರೆತಿದ್ದಾರೆ.
ರಿಯಾದ್ ಏರ್ಪೋರ್ಟ್ನಲ್ಲಿರುವ ಇಮಿಗ್ರೇಷನ್ ಕೌಂಟರ್ಗೆ ಬಂದಾಗ ಪಾಸ್ಪೋರ್ಟ್ ಮರೆತು ಹೋಗಿರುವುದು ಗೊತ್ತಾಗಿದೆ. ಮಂಗಳವಾರ ರಾತ್ರಿ 11.18ಕ್ಕೆ ವಿಮಾನ ಲ್ಯಾಂಡ್ ಆಗಿತ್ತು. ಪ್ರಯಾಣಿಕ ಪಾಸ್ಪೋರ್ಟ್ ಮರೆತಿರುವುದು ತಿಳಿದು ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಆದರೆ ವಿಮಾನದ ಒಳಗಿನ ಸೀಟುಗಳನ್ನು ಹುಡುಕಿದಾಗ ಪಾಸ್ಪೋರ್ಟ್ ಪತ್ತೆಯಾಗಿಲ್ಲ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಬ್ಬಂದಿ ತಿಳಿಸಿದ್ದಾರೆ. ವಿವರವಾದ ತಪಾಸಣೆ ನಡೆಸುವ ಮೊದಲು ವಿಮಾನವು ಪ್ರಯಾಣಿಕರೊಂದಿಗೆ ಕೋಝಿಕ್ಕೋಡ್ಗೆ ಮರಳಿತು.
ಮಾಹಿತಿ ತಿಳಿದ ಪುತ್ರ ಕರಿಪುರ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಬಳಿಕ ಸಕೀನಾ ಅವರ ಪಾಸ್ಪೋರ್ಟ್ ಕೂಡ ಪತ್ತೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.