(www.vknews.in) ಬಾಗೇಪಲ್ಲಿ:- ಪಟ್ಟಣದ ಪ್ರಜಾ ಸಂಘ ಸಂಘರ್ಷ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಪಿ ಎಸ್ ಎಸ್ ಕಾರ್ಯಕರ್ತರ ರಾಜಕೀಯ ಸಮಾವೇಶದಲ್ಲಿಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರು ಹಾಗೂ ಪಕ್ಷೇತರ ಅಭ್ಯರ್ಥಿ ಆರ್.ಮಿಥುನ್ ರೆಡ್ಡಿ ರವರಿಗೆ ದಿವಂಗತ ಕಾಮ್ರೇಡ್ ಜಿ.ವಿ ಶ್ರೀರಾಮರೆಡ್ಡಿ ಅವರ ಪಿ.ಎಸ್.ಎಸ್ ಪಕ್ಷವು ಬುದವಾರ ಸರ್ವಸಮ್ಮತದಿಂದ ಪಕ್ಷೇತರ ಅಭ್ಯರ್ಥಿ ಆರ್.ಮಿಥುನ್ ರೆಡ್ಡಿ ರವರಿಗೆ ಬೆಂಬಲ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಮಿಥುನ್ ರೆಡ್ಡಿರವರು ಮಾತನಾಡಿದಿವಂಗತ ಕಾಮ್ರೇಡ್ ಶ್ರೀ ರಾಮ್ ರೆಡ್ಡಿ ಅವರ ಪಕ್ಷದ ಸಿದ್ದಾಂತಗಳೆ ಬೇರೆಯಾಗಿತ್ತು . ಅವರ ಸೇವೆ ಅಪಾರವಾದದ್ದು ಹಾಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಗಳನ್ನು ಮಾಡಿರುತ್ತಾರೆ ತದನಂತರ ಯಾವ ರಾಜಕಾರಣಿಗಳು ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವುದು ಕಂಡಿಲ್ಲ ಶ್ರೀರಾಮ ರೆಡ್ಡಿ ಅವರ ಆಶೆಯನ್ನು ನಾವು ಒಗ್ಗಟಿನಿಂದ ಈಡೇರಿಸಲು ಮುಂದೆ ನಿಲ್ಲುತ್ತೇನೆ ಹಾಗೂ ಮುಂದಿನ 2023 ರ ವಿಧಾನಸಭೆ ಚುನಾವಣೆಗೆ ಬೆಂಬಲ ಘೋಷಣೆ ಮಾಡಿರುವುದು ನಮ್ಮ ಬಳಗಕ್ಕೆ ಪಕ್ಷೇತರ ಅಭ್ಯರ್ಥಿ ಆರ್.ಮಿಥುನ್ ರೆಡ್ಡಿಗೆ ದಿವಂಗತ ಕಾಮ್ರೇಡ್ ಜಿ.ವಿ ಶ್ರೀರಾಮರೆಡ್ಡಿ ಅವರ ಪಿ.ಎಸ್.ಎಸ್ ಪಕ್ಷದ ಬೆಂಬಲ ಘೋಷಣೆ*ಆನೆ ಬಲ ಬಂದಂತಾಗಿದೆ, ಶ್ರೀರಾಮರೆಡ್ಡಿ ಅವರ ಸಿದ್ದಾಂತಗಳನ್ನು ಪಾಲಿಸುತ್ತಾ ಅವರ ಆದರ್ಶಗಳನ್ನು, ಆಶಯಗಳನ್ನು ಈಡೇರಿಸಲು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನರಿಗಾಗಿ ಹೋರಾಡಲು ಉತ್ತಮ ಆಡಳಿತ ನೀಡಲು ನಾನು ಶ್ರಮ ವಹಿಸುತ್ತೇನೆ ಎಂದರು.
ತದನಂತರ ಪಿ.ಎಸ್.ಎಸ್ ಪಕ್ಷದ ಚೆನ್ನರಾಯಪ್ಪ, ರವರು ಮಾತನಾಡಿ ಪ್ರಜಾ ಸಂಘ ಸಮಿತಿ ಹಾಗೂ ಸಮಾಜಸೇವಕ ಮಿಥುನ್ ರೆಡ್ಡಿ ನೇತೃತ್ವದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಿಎಸ್ಎಸ್ ಪಕ್ಷವು ಬೆಂಬಲ ನೀಡುತ್ತಿದ್ದೇವೆ, ಪಿಎಸ್ಎಸ್ ಎನ್ನುವುದು ಒಂದು ಸಂಘಟನೆಯಾಗಿದ್ದು ಈ ಸಂಘಟನೆಯು ದಿವಂಗತ ಜೀವಿ ಶ್ರೀರಾಮ್ ರೆಡ್ಡಿ ಅವರ ಹಾದಿಯಲ್ಲಿ ಸಾಗುತ್ತಿದ್ದು , ಈಗ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಹೋಗುತ್ತಾನೆ ಎಂಬ ಭರವಸೆಯನ್ನು ಮಿಥುನ್ ರೆಡ್ಡಿ ಅವರು ನೀಡಿರುತ್ತಾರೆ ಆದ್ದರಿಂದ ನಮ್ಮ ಸಂಘಟನೆಯವರು ಎಲ್ಲಾ ಸೇರಿ ಮಿಥುನ್ ರೆಡ್ಡಿ ಅವರಿಗೆ ಬೆಂಬಲ ಘೋಷಣೆ ಮಾಡುತ್ತಿದ್ದೇವೆ ಎಂದರುಈ ಸಂದರ್ಭದಲ್ಲಿ ಪಿ.ಎಸ್.ಎಸ್ ಪಕ್ಷದ ಹಿರಿಯ ನಾಯಕರು ಹಾಗೂ, ಜಿ.ವಿ ಶ್ರೀರಾಮರೆಡ್ಡಿ ಅವರ ಅಭಿಮಾನಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ ಅಲ್ತಾಫ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.