(ವಿಶ್ವ ಕನ್ನಡಿಗ ನ್ಯೂಸ್) : ಡಿಸೆಂಬರ್ 10 ಮಾನವ ಹಕ್ಕುಗಳ ದಿನವಾಗಿದ್ದು, ದೇಶದ ಇಂದಿನ ಸನ್ನಿವೇಶದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದು ಕಂಡು ಬರುತ್ತಿರುವುದು ವಿಷಾದನೀಯ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ . 1948ರ ನಂತರ ಪ್ರಪಂಚದಾದ್ಯಂತ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳ ಕುರಿತು ವಿಶ್ವದಲ್ಲಿ ಪ್ರಪ್ರಥಮವಾಗಿ ಧ್ವನಿ ಎತ್ತಿ ಮಾನವನ ಹಕ್ಕುಗಳ ಬಗ್ಗೆ ಸವಿಸ್ತರವಾಗಿ ಸಾರಿ ಹೇಳಿದ್ದು ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ ) ಆಗಿದ್ದಾರೆ.
ತನ್ನ ಜೀವನದ ಕೊನೆಯ ಹಜ್ಜ್ ಸಂದರ್ಭದಲ್ಲಿ ಅರಫಾ ದಿನದಂದು ಲಕ್ಷಕ್ಕಿಂತ ಮಿಗಿಲಾದ ಸ್ವಹಾಬಿ ವರ್ಯರ ಮುಂದೆ ಅಂತ್ಯ ದಿನದವರೆಗೆ ಬರುವ ಮಾನವ ಕುಲಕ್ಕೆ ಮನುಷ್ಯನ ಹಕ್ಕುಗಳ ಬಗ್ಗೆ ಸಾರಿ ಹೇಳಿದರು. ಯಾವೊಬ್ಬ ವ್ಯಕ್ತಿಯೂ ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕಿ ಸ್ವಾಭಿಮಾನಕ್ಕೆ ದಕ್ಕೆ ತರುವಂತ ಕೆಲಸ ಮಾಡಬಾರದು. ಇತರರೊಂದಿಗಿರುವ ವೈಯಕ್ತಿಕ ಸಂಬಂಧಗಳು, ಆರ್ಥಿಕ ವ್ಯವಹಾರಗಳು,ಇವುಗಳಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು.ದೇಶದಲ್ಲಿ ಇಸ್ಲಾಂ ವಿರೋಧಿ ಕಾನೂನು ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದಾಯ ವ್ಯಕ್ತಿ ಜೀವನ ಹಾಗೂ ಕೌಟುಂಬಿಕ ಜೀವನಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವುದರಲ್ಲಿ ಭದ್ಧರಾಗಿರಬೇಕು. ಅಲ್ಲಾಹನೊಂದಿಗಿರುವ ನಮ್ಮ ಸಂಬಂಧವನ್ನು ನಾವು ಸರಿಪಡಿಸಿದರೆ ನಾವು ಯಾವುದೇ ಸಂದರ್ಭದಲ್ಲಿ ಭಯ ಪಡುವ ಅಗತ್ಯ ಇಲ್ಲ.
ಓರ್ವ ಮುಸ್ಲಿಂ ಎಂದರೆ ಕೇವಲ ಹೆಸರು ಮಾತ್ರ ಅಲ್ಲ. ಆತನ ನಾಲಗೆ ಹಾಗೂ ಇತರ ಚಟುವಟಿಕೆಗಳಿಂದ ಇತರರಿಗೆ ತೊಂದರೆ ನೀಡದೆ, ನನ್ನ ವ್ಯಕ್ತಿತ್ವಕ್ಕೆ ಸಂಬಂಧವಿಲ್ಲದ ವಿಚಾರಗಳಲ್ಲಿ ಅನಾವಶ್ಯಕವಾಗಿ ಕೈ ಹಾಕದೆ ವ್ಯಕ್ತಿ ಜೀವನವನ್ನು ಇಲಾಹೀ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಗೆ ಆತನ ಅತಿದೊಡ್ಡ ಸಂಪತ್ತು ಆತನ ಅಭಿಮಾನವಾಗಿದ್ದು ಆತನ ಅಭಿಮಾನಕ್ಕೆ ಧಕ್ಕೆ ತರುವ ಪ್ರವೃತ್ತಿ ನಮ್ಮಿಂದ ಉಂಟಾಗಬಾರದು. ಇತರರ ಕ ನ್ಯೂನತೆಗಳನ್ನು ಯಾವುದೇ ಕಾರಣಕ್ಕೂ ಪ್ರಚಾರಪಡಿಸದೆ ಇತರರ ವ್ಯಕ್ತಿತ್ವಕ್ಕೆ ಘಾಸಿಗೊಳಿಸದೆ ಸರ್ವರನ್ನು ಗೌರವಿಸಲು ನಾವೆಲ್ಲರೂ ತಯಾರಾಗಬೇಕು. ಮಾನವ ಹಕ್ಕುಗಳ ಸಂರಕ್ಷಣೆಯಾದರೆ ಮನುಕುಲದ ಸಂರಕ್ಷಣೆ ಸಾಧ್ಯ.
ಸರ್ವರಿಗೂ ಒಳ್ಳೆಯದನ್ನು ಬಯಸಿದರೆ ಮಾತ್ರ ಒಬ್ಬ ಉತ್ತಮ ಮುಸ್ಲಿಮ್ ಆಗಲು ಸಾಧ್ಯ . ಮೊಹಲ್ಲಾ ನಿವಾಸಿಗಳ ಮಧ್ಯೆ ಅನೈಕ್ಯತೆ ಉಂಟಾಗದಂತೆ ಜಾಗರೂಕರಾಗಬೇಕಾಗಿದ್ದು. ವೈಯಕ್ತಿಕ ಧಾರ್ಮಿಕ ಮತ್ತು ರಾಜಕೀಯ ಇನ್ನಿತರ ಹೆಸರಿನಲ್ಲಿ ಪರಸ್ಪರ ಕಚ್ಚಾಟಗಳು ನಡೆಯದಿರುವುದಂತೆ ನಾವು ಮೊದಲು ಜಾಗ್ರತೆ ಆಗಬೇಕು. ಎಂದು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಖತೀಬರಾದ ಅಶ್ರಫ್ ಫೈಝಿ ಕೊಡಗು ಇವರು ಶುಕ್ರವಾರದ ಜುಮಾ ನಮಾಜ್ ಬಳಿಕ ಹಿತವಚನವನ್ನು ನುಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.