ತುರುವೇಕೆರೆ (ವಿಶ್ವ ಕನ್ನಡಿಗ ನ್ಯೂಸ್) : ಸುಮಾರು 20 ವರ್ಷಗಳಿಂದ ತುರುವೇಕೆರೆ ತಾಲೂಕಿನ ಮೂಲೆ ಮೂಲೆಗಳಲ್ಲಿ ಸಾವನ್ನಪ್ಪಿದ ಅನಾಥ ಶವಗಳಿಗೆ ಮುಕ್ತಿ ದೊರಕಿಸಿ ಅವುಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತಿದ್ದಾರೆ ತುರುವೇಕೆರೆ ಪಟ್ಟಣದ ವಿನೋಬ ನಗರದ ನಿವಾಸಿಯಾದ ಆಟೋ ಚಾಲಕ 40 ವರ್ಷದ ಖಲೀಲ್ ಬಿನ್ ಮೋಹಿಯುದ್ದೀನ್ ಸಾಬ್.
ಇವರು ಯಾವುದೇ ಮತ ಭೇದವಿಲ್ಲದೆ ಅನಾಥ ಶವಗಳನ್ನು ತನ್ನ ಆಟೋ ಮೂಲಕ ಸಾಗಿಸುತ್ತಾರೆ. ಶವ ಕೊಳೆತ ಸ್ಥಿತಿಯಲ್ಲಿಇದ್ದರೂ ಯಾವುದೇ ಬೇಸರವಿಲ್ಲದೆ, ಅಳುಕು ಅಂಜಿಕೆ ಇಲ್ಲದೆ ಅದನ್ನು ತಾನೇ ಎತ್ತಿಕೊಂಡು ಬಂದು ಸಾಗಿಸುವ ಮೂಲಕ ಇವರು ಮಾನವೀಯತೆ ಮೆರೆಯುತ್ತಾರೆ. ಕಾಯಕವೇ ಕೈಲಾಸ ಎಂಬಂತೆ, ಎಲೆಮರೆ ಕಾಯಂತೆ, ತನ್ನ ಕೆಲಸವನ್ನು ಯಾರಿಗೂ ತೋರಿಸಿಕೊಳ್ಳದೆ, ಪ್ರಚಾರ ಪಡೆಯದೇ, ಖಲೀಲ್ ತನ್ನ ಕಾಯಕ ಮಾಡುತ್ತಿದ್ದಾರೆ.
ಖಲೀಲ್ ತಮ್ಮದೇ ಆದ ರೀತಿಯಲ್ಲಿ ಸಹಾಯವನ್ನು ಮಾಡುತ್ತಾ ಕೊಟ್ಟಷ್ಟು ಹಣವನ್ನು ತೆಗೆದುಕೊಂಡು ಕಡು ಬಡತನದಲ್ಲಿ ಜೀವನ ನಿರ್ವಹಣೆಯನ್ನು ಮಾಡಿಕೊಂಡು ಹಾಗೂ ಈ ಮಧ್ಯದಲ್ಲಿ ಆಟೋ ಚಾಲನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕವನ್ನು ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಹಲವಾರು ಸಂಘ-ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.