(www.vknews.in) ; ರಾಷ್ಟ್ರೀಯ ಆಹಾರ ಹಕ್ಕು ಕಾಯ್ದೆಯ ಪ್ರಕಾರ ರೇಶನ್ ಅಂಗಡಿ, ಅಂಗನವಾಡಿ, ಶಾಲೆಗಳಲ್ಲಿ ಕೊಡುವಂತಹ ಬಿಸಿಯೂಟ,ಹಾಗೂ ಅದನ್ನು ಕೊಡುವಲ್ಲಿ ಆಗುತ್ತಿರುವ ಕುಂದು ಕೊರತೆಗಳ ಬಗೆಗಿನ ವಸ್ತು ಸ್ಥಿತಿ ಅರಿಯಲು ಹಾಗೂ ಕುಂದು ಕೊರತೆಗಳು ಇದ್ದಾಗ ಸಾರ್ವಜನಿಕರು ದೂರು ದಾಖಲಿಸಿದರೆ ಅದನ್ನು ಇಲಾಖಾ ಮಟ್ಟದಲ್ಲಿ ಯಾವ ರೀತಿಯಲ್ಲಿ ಬಗೆಹರಿಸಲು ಸಾದ್ಯ ಇದೆ, ಹಾಗೂ ಈಗ ಯಾವ ರೀತಿಯಲ್ಲಿ ಸಾರ್ವಜನಿಕರ ಕುಂದು ಕೊರತಗಳನ್ನು ಬಗೆಹರಿಸಲು ಇಲಾಖಾ ಮಟ್ಟದಲ್ಲಿ ವ್ಯವಸ್ಥೆಗಳು ಇದೆ ಎನ್ನುವ ಬಗ್ಗೆ ತಿಳಿದು ಕೊಳ್ಳಲು ಮಗು ಮತ್ತು ಕಾನೂನಿನ ಕೇಂದ್ರ ಬೆಂಗಳೂರಿನ ಪ್ರತಿನಿಧಿಗಳು, ರಾಷ್ಟ್ರ ಮಟ್ಟದ ಅಧ್ಯಯನದ ಭಾಗವಾಗಿ ದ.ಕ.ಜಿಲ್ಲೆಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳನ್ನು ಕಂಡು ವಸ್ತು ಸ್ಥಿತಿಯ ಅಧ್ಯಯನ ಮಾಡಲು ದ.ಕ.ಜಿಲ್ಲೆಯ ಜಿಲ್ಲಾಧಿಕಾರಿ ಗಳ ಬಳಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಮಗು ಮತ್ತು ಕಾನೂನು ಕೇಂದ್ರದ ಕುಮಾರ ಸ್ವಾಮಿ ಶೃಂಗೇರಿ,ಸುಧಾ ಎಸ್ ರೆಡ್ಡಿ ಬೆಂಗಳೂರು, ಮೊಯ್ದಿನ್ ಕುಟ್ಟಿ ಎಸ್ಡಿಎಂಸಿ ಸಮನ್ವಯ ವೇದಿಕೆ ಮತ್ತು ಸಲೀಂ ಮಾಯಂಗಲ ಎಸ್ಸಡಿಎಂಸಿ ನರಿಮೊಗರು ಶಾಲೆ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.