ಮೊಹರಂ ತಿಂಗಳು ಮತ್ತು ಕರ್ಬಲಾದ ಕಮಲ, ಸೂಫಿಗಳ ಕಣ್ಮಣಿ ಹ. ಇಮಾಮ್ ಹುಸೇನ್(ರ)
(vknews.in): ಪ್ರವಾದಿವರ್ಯರ ಮೊಮ್ಮಗನೇ ಹ. ಇಮಾಮ್ ಹುಸೇನ್(ರ). ಇಸ್ಲಾಂ ಧರ್ಮದಲ್ಲಿ ತನ್ನ ಕಲೀಫರನ್ನು ಜನರು
ಆರಿಸುತ್ತಿದ್ದರು. ರಾಜನ ಮಗ ರಾಜನಾಗಬೇಕು ಎಂಬ ಕಾನೂನು ಇಲ್ಲ. ರಾಜ್ಯದ ಅಥವಾ ಸಾಮ್ರಾಜ್ಯದ ಉಸ್ತುವಾರಿ
ನೋಡಿಕೊಳ್ಳಲು (ಮಜ್ಲಿಸ್-ಎ-ಷೂರ) ಎಂಬ ಶರಿಅತ್ ವಿದ್ವಾಂಸರು ಇರುತ್ತಾರೆ. ಕಲೀಫ ಶರಿಅತ್ ಕಾನೂನಿನ
ಚೌಕಟ್ಟಿನಲ್ಲಿ ಆಡಳಿತ ನಡೆಸಬೇಕು. ಮುಸ್ಲಿಂ ದೇಶದಲ್ಲಿ ಯಾವುದೇ ತೀರ್ಮಾನ ಕಲೀಫ ತೆಗೆದುಕೊಳ್ಳಬೇಕಾದರೆ
ಮಜ್ಲಿಸ್-ಎ-ಷೂರ ಸಮಿತಿಯಿಂದ ಅಪ್ಪಣೆ ಪಡೆದುಕೊಳ್ಳಬೇಕಾಗುತ್ತದೆ. ತಾನು ಇಚ್ಛಿಸಿದ ಹಾಗೆ ನಡೆಯುವ ಹಾಗಿಲ್ಲ.
ಪ್ರವಾದಿವರ್ಯರು ಹ. ಅಬೂಬಕ್ಕರ್ರವರನ್ನು(ರ) ಮೊದಲ ಕಲೀಫರನ್ನಾಗಿ ನೇಮಿಸಿದರು. ಅವರ ನಂತರ ಹ.
ಉಮರ್(ರ), ಅವರ ನಂತರ ಹ. ಉಸ್ಮಾನ್(ರ) ಮತ್ತು ಅವರ ನಂತರ ಹ. ಅಲಿರವರು(ರ) ಕಲೀಫರಾದರು.
ಹ. ಉಮರ್(ರ) ಇಸ್ಲಾಮ್ ಸಾಮ್ರಾಜ್ಯವನ್ನು ಬಹಳ ದೂರದ ದೇಶಗಳವರೆಗೂ ಹರಡಿಸಿದರು. ತಾವು ಒಬ್ಬರೇ ಇಡೀ
ಸಾಮ್ರಾಜ್ಯದ ಆಗು ಹೋಗುಗಳನ್ನು ನೋಡಿಕೊಳ್ಳುವುದು ಕಷ್ಟಕರವಾಗಿತ್ತು. ಆಗ ಅವರು ಇಸ್ಲಾಂ ಸಾಮ್ರಾಜ್ಯವನ್ನು
ಹಲವು ಭಾಗಗಳಾಗಿ ವಿಂಗಡಿಸಿ, ಪ್ರತಿ ಒಂದು ಭಾಗಕ್ಕೆ ಗೌರ್ನರ್ಗಳನ್ನು ನೇಮಿಸಿದರು. ಎಲ್ಲಾ ಪ್ರಾಂತ್ಯಗಳಲ್ಲೂ
ಶರಿಅತ್ ಕಾನೂನನ್ನು ಸುಸಜ್ಜಿತವಾಗಿ ಸ್ಥಾಪಿಸಿ ಶಾಂತಿ ನೆಲೆಸಲು ಪ್ರಯತ್ನಿಸಿದರು.
ಹ. ಉಮರ್ ಒಬ್ಬ ದಕ್ಷ ಆಡಳಿತಗಾರ. ಇಡೀ ಸಾಮ್ರಾಜ್ಯದ ಕಲೀಫರಾಗಿದ್ದರೂ ಮನಸ್ಸಿನಲ್ಲಿ ಕಿಂಚಿತ್ತೂ ಅಹಂ ಭಾವನೆ
ಇರಲಿಲ್ಲ. ಸದಾ ಪ್ರಜೆಗಳ ಒಳಿತನ್ನೇ ಬಯಸುತ್ತಿದ್ದರು. ದೇವರ ಭಯದಿಂದ ಗಡಗಡ ನಡುಗುತ್ತಿದ್ದರು. ಬಹಳ ಸರಳ
ಜೀವಿ. ಪ್ರವಾದಿವರ್ಯರ ಸಂಗತಿ ಅವರನ್ನು ಸಂಪೂರ್ಣವಾಗಿ ಬದಲಿಸಿತ್ತು. ಅವರು ಎಂಥಹ ಮಹಾನುಭಾವರು ಎಂದು
ಈ ಒಂದು ಸಣ್ಣ ಉದಾಹರಣೆಯಿಂದ ತಿಳಿಯುತ್ತದೆ. ರಾತ್ರಿಯ ನಮಾಜ್ ಆದಾಕ್ಷಣ ಅವರು ಪ್ರಜೆಗಳ ತೊಂದರೆಗಳನ್ನು
ತಿಳಿದುಕೊಳ್ಳಲು ಗುಪ್ತವಾಗಿ ರಾತ್ರಿಯಲ್ಲಿ ಬೀದಿ ಬೀದಿಯಲ್ಲಿ ಅಲೆದು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಹೀಗೆ ಒಂದು
ರಾತ್ರಿ ಗಸ್ತು ಮಾಡುತ್ತಿರುವಾಗ ಒಂದು ಮನೆಯಿಂದ ಮಕ್ಕಳು ಅಳುವ ಶಬ್ದ ಕೇಳಿಸಿತು. ಹ. ಉಮರ್ ಆ ಮನೆಯತ್ತ
ಹೋದರು. ಅಲ್ಲಿ ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ಆ ಮನೆಯ ಒಡತಿ ಒಲೆಯ ಮೇಲೆ ನೀರು ಕಾಯಿಸಲು
ಇಟ್ಟಿದ್ದಾಳೆ. ಹ. ಉಮರ್(ರ) ಆಕೆಯನ್ನು ವಿಚಾರಿಸಿದಾಗ- “ಮಕ್ಕಳು, ನಮ್ಮ ತಾಯಿ ಏನೋ ಅಡುಗೆ ಮಾಡುತ್ತಿದ್ದಾರೆ
ಎಂಬ ಊಹೆಯಲ್ಲಿರಲಿ, ಹಾಗೆಯೇ ಅವರು ನಿದ್ದೆಗೆ ಹೊರಟು ಹೋಗುತ್ತಾರೆ. ಕೇವಲ ಅವರಿಗೆ ಸಮಾಧಾನ ಪಡಿಸಲು
ಹೀಗೆ ಮಾಡುತ್ತಿದ್ದೇನೆ. ಮನೆಯಲ್ಲಿ ತಿನ್ನಲು ಏನೂ ಇಲ್ಲ ಎಂದಳು.” ಹ. ಉಮರ್(ರ) ಆಕೆಯನ್ನು ತಮ್ಮ ಜೊತೆ
ಕರೆದೊಯ್ದು 'ಬೈತುಲ್ಮಾಲ್'ನಿಂದ (ಬಡಬಗ್ಗರಿಗಾಗಿ, ಜನರ ಸೇವೆಗಾಗಿ ಸ್ಥಾಪಿಸಲಾಗಿರುವ ಉಗ್ರಾಣ) ಚೀಲದಲ್ಲಿ
ಹೊಟ್ಟು ಮತ್ತು ಖರ್ಜೂರಗಳನ್ನು ತುಂಬಿಕೊಂಡು, ಸ್ವತಃ ತಾವೇ ಅದನ್ನು ಹೊತ್ತುಕೊಂಡು ಆಕೆಯ ಮನೆಗೆ ಹೋಗಿ, ಆ
ಮಕ್ಕಳನ್ನು ನಾನು ಅಳುತ್ತಾ ನೋಡಿದೆ. ಈಗ ನಗುತ್ತಾ ನೋಡಬೇಕು ಎಂದರು. ಆಕೆ ಆ ಹಿಟ್ಟಿನಿಂದ (ಹಸಿಟ್ಟು)
ಚಪಾತಿಗಳನ್ನು ಮಾಡಿ ಮಕ್ಕಳಿಗೆ ಉಣಬಡಿಸಿದಳು. ಮಕ್ಕಳು ಸಂತೋಷದಿಂದ ತಿಂದು ನಕ್ಕರು. ನಮ್ಮ ಕಲೀಫರು ಇಷ್ಟು
ಸಹಾಯ ಮಾಡಲಿಲ್ಲ, ನೀವು ನಮಗಾಗಿ ಇಷ್ಟೊಂದು ಸಹಾಯ ಮಾಡಿದಿರಿ ಎಂದಳು. ಆಗ ಹ. ಉಮರ್(ರ) ಮುಗುಳ್ನಗೆ
ಬೀರಿ ನಾನೇ ಕಲೀಫ ಎಂದರು. ಆಕೆ ಗಾಬರಿಗೊಂಡಳು. ಭಯ ಪಡಬೇಡ ನನ್ನ ಕರ್ತವ್ಯ ಪಾಲನೆ ಮಾಡಿದೆ ಅಷ್ಟೆ ಎಂದು
ಹೇಳಿ ಅಲ್ಲಿಂದ ಹೊರಟರು.
ಪ್ರಾಂತ್ಯಗಳ ಗೌರ್ನರ್ ಪದ್ಧತಿ ಹ. ಅಲಿರವರ(ರ) ಕಾಲದಲ್ಲೂ ಜಾರಿಯಲ್ಲಿತ್ತು. ಮುಆವಿಯಾ(ರ) ಎಂಬುವರು ಸಿರಿಯಾದ
ಗೌರ್ನರ್ ಆಗಿದ್ದರು. ಅವರ ಮತ್ತು ಹ. ಅಲಿರವರ(ರ) ನಡುವೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿ ಯುದ್ಧ ನಡೆದು
ಮುಕ್ತಗೊಂಡಿತು. ಒಳ ಒಳಗೆ ಇಸ್ಲಾಂ ಸಾಮ್ರಾಜ್ಯವನ್ನು ಛಿದ್ರಗೊಳಿಸಲು ಸಂಚುಗಳು ನಡೆಯಲಾರಂಭಿಸಿದವು.
ಹ. ಅಲಿರವರನ್ನು(ರ) ನಮಾಜ್ ಸ್ಥಿತಿಯಲ್ಲಿ ಕೊಲ್ಲಲಾಯಿತು. ಅವರು ಅಮರ ಮರಣ ಹೊಂದಿದ ನಂತರ, ಜನರ ಇಚ್ಛೆಯ
ಮೇರೆಗೆ ಹ. ಇಮಾಮ್ ಹುಸೇನ್(ರ) ಕಲೀಫರಾದರು. ರಕ್ತಪಾತ ಮಾಡುವುದು ಬೇಡ ಎಂದು ಹ. ಇಮಾಮ್
ಹುಸೇನ್(ರ) ಹ. ಮುಆವಿಯಾ(ರ) ರವರೊಂದಿಗೆ ಒಪ್ಪಂದ ಮಾಡಿಕೊಂಡರು. ಮುಆವಿಯಾ(ರ) ಸಿರಿಯಾದ ಗೌರ್ನರ್
ಆಗಿಯೇ ಉಳಿದರು. ನನ್ನ ನಂತರ ನನ್ನ ಮಗ ಯಜೀದ್ I ರಾಜನಾಗುವನು ಎಂದು ಘೋಷಿಸಿ ಇಸ್ಲಾಂ ಧರ್ಮದ ಕಲೀಫ
ಪದ್ಧತಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆ ಜನರಿಗೂ ಇಷ್ಟವಿರಲಿಲ್ಲ ಮತ್ತು ಹ. ಇಮಾಮ್ ಹುಸೇನ್ರವರಿಗೂ(ರ)
ಇಷ್ಟವಿರಲಿಲ್ಲ.
ಮುಆವಿಯಾ(ರ) ಇಸವಿ 680 ಅಇರಲ್ಲಿ ತೀರಿಕೊಂಡರು. ಮಗ ರಾಜನಾಗಿ ವಂಶಪಾರಂಪರೆ ರಾಜಪದ್ಧತಿಯನ್ನು
ಜಾರಿಗೊಳಿಸಿ ಕಿಲಾಫತ್ ಪದ್ಧತಿಯನ್ನು ಮುರಿದನು. ಹ. ಹುಸೇನ್(ರ) ಪ್ರವಾದಿವರ್ಯರ ಮೊಮ್ಮಗನಾದ್ದರಿಂದ, ಜನರ
ಒಲವಿಗೆ ಪಾತ್ರನಾಗಿದ್ದರಿಂದ ಜನ ಎಲ್ಲಿ ಇವರನ್ನು ನನ್ನ ರಾಜ್ಯದ ವಿರುದ್ಧ ದಂಗೆ ಏಳುವಂತೆ ಮಾಡಿಬಿಡುತ್ತಾರೋ ಎಂಬ
ಭಯದಿಂದ, ತಾನೇ ಅಧಿಪತಿಯಾಗಿರಬೇಕು ಎಂಬ ದುರಾಸೆಯಿಂದ ಹ. ಇಮಾಮ್ ಹುಸೇನ್ರವರನ್ನು(ರ) ನನ್ನ
ಕೈಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ನನ್ನನ್ನು ಕಲೀಪನೆಂದು ಪರಿಗಣಿಸಿ ಎಂದು, ಮದೀನಾದ ಗವರ್ನರ್
ವಲೀದ್ನನ್ನು ಕಳುಹಿಸಿ, ಹ. ಇಮಾಮ್ ಹುಸೇನ್(ರ)ರವರ ಮೇಲೆ ಒತ್ತಡ ಹೇರಿದನು.
ಯಜೀದ್ I ಶರಿಅತ್ ಕಾನೂನಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದನು. ಮದ್ಯಪಾನ, ಜೂಜು, ವ್ಯಭಿಚಾರ, ಸುಲಿಗೆ,
ಅಣ್ಣ ತಂಗಿ ಮದುವೆಯಾಗಬಹುದೆಂಬ ನಿಲುವು, ಪ್ರವಾದಿವರ್ಯರ ಮಸೀದಿಯಲ್ಲಿ ಕುದುರೆಗಳನ್ನು ಕಟ್ಟಿ, ಅವುಗಳ
ಲದ್ದಿಯಿಂದ ಮಸೀದಿಯನ್ನು ಮಲಿನಗೊಳಿಸುವುದು, ಸರ್ವಾಧಿಕಾರ, ದುರಾಡಳಿತ, ಹೆಣ್ಣಿನ ಹುಚ್ಚು- ಇಂತಹ ಅನೇಕ
ಪಾಪಗಳಿಂದ ಆತನ ಕೊಡ ತುಂಬಿತ್ತು.
ಪ್ರಾಣ ಹೋದರೂ ಇಂತಹ ಕಿಲಾಫತ್ತನ್ನು ಹ. ಹುಸೇನ್ ಒಪ್ಪಲು ಸಿದ್ಧವಿರಲಿಲ್ಲ. ಎರಡು ದಿನ ಅವರ ಮೇಲೆ ಭಾರಿ
ಒತ್ತಡವನ್ನು ಹೇರಲಾಗಿತ್ತು. ಆಗ ಅವರು ಮಕ್ಕಾಗೆ ಹೋಗಿ ವಾಸಿಸತೊಡಗಿದರು.
ಅವರು ಮಕ್ಕಾದಲ್ಲಿದ್ದಾಗ ಕೂಫಾ ಪಟ್ಟಣದಿಂದ, ಅಲ್ಲಿಯ ಜನರಿಂದ ಅನೇಕ ಪತ್ರಗಳು ಬಂದವು. “ನೀವು ಕೂಫಾಗೆ
ಬಂದು ನೆಲೆಸಿ, ನಮಗೆ ಸನ್ಮಾರ್ಗ ನೀಡಿ” ಎಂಬುದು ಪತ್ರಗಳ ಸಾರಂಶವಾಗಿತ್ತು. ಆಗ ಹ. ಹುಸೇನ್ರವರು(ರ)
ನಿಜಾಂಶ ತಿಳಿದುಕೊಳ್ಳಲು, ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ತಮ್ಮ ದೂತನನ್ನಾಗಿ ಕಳುಹಿಸಿದರು. ಅಲ್ಲಿಯ ಜನ
ಸಹೃದಯದಿಂದ ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ಬರಮಾಡಿಕೊಂಡರು. ಇದನ್ನು ಗಮನಿಸಿದ ಮುಸ್ಲಿಂ ಬಿನ್
ಅಖೀಲ್ರವರು(ರ) ಹ. ಇಮಾಮ್ ಹುಸೇನ್ರವರಿಗೆ(ರ) ಪತ್ರದ ಮೂಲಕ ಕೂಫಾದ ವಾತಾವರಣ ಉತ್ತಮವಾಗಿದೆ
ಎಂದು ತಿಳಿಸಿದರು. ಆದರೆ ಉಬೇದುಲ್ಲಾ ಇಬ್ನ್ ಜಿಯಾದ್ ಕೂಫಾದ ಹೊಸ ಗವರ್ನರ್ ಆದ ನಂತರ ಇಡೀ
ವಾತಾವರಣ ಬದಲಾಗಿಹೋಯಿತು. ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ಕೊಲೆ ಮಾಡಿಸಲಾಯಿತು. ಅಮ್ರ್ ಬಿನ್
ಸಾಅದ್ ಬಿನ್ ಆಸ್ ಎಂಬ ಸೇನಾಪತಿಯನ್ನು ನೇಮಿಸಿ, ಯಜೀದ್ ಮಕ್ಕಾಗೆ ದೌಡಾಯಿಸಿ, ಹಜ್ ಯಾತ್ರೆಯಲ್ಲಿ ಹ.
ಹುಸೇನ್ರವರನ್ನು(ರ) ಕೊಲ್ಲುವಂತೆ ಆಜ್ಞೆ ಮಾಡಿದನು. ಹ. ಹುಸೇನ್ರವರು(ರ) ಹಜ್ನಿಂದ ಒಂದು ದಿನ ಮುಂಚೆ
ಜನರಿಗೆ ಉಪದೇಶ ಮಾಡಿ ಈ ಪವಿತ್ರ ಸ್ಥಳದಲ್ಲಿ ರಕ್ತಪಾತ ನಡೆಯುವುದು ಬೇಡ ಎಂದು ಮಕ್ಕಾ ಬಿಟ್ಟು ತೆರಳಿದರು. ಹ.
ಇಮಾಮ್ ಹುಸೇನ್ರವರು(ರ) ಕೂಫಾ ಪಟ್ಟಣಕ್ಕೆ ಹೋಗುವ ನಿರ್ಧಾರ ಬಲ ಪಡಿಸಿಕೊಂಡರು. ಹೊರಡುವ ಮುನ್ನ ತನ್ನ
ಹಿತೈಷಿಗಳಾದ ಅಬ್ದುಲ್ಲಾ ಇಬ್ನ್ ಅಬ್ಬಾಸ್(ರ) ಮತ್ತು ಅಬ್ಲುಲ್ಲಾ ಇಬ್ನು ಜುಬೇರ್(ರ)ರವರೊಂದಿಗೆ ಮಾತುಕತೆ
ನಡೆಯಿತು. ದಯವಿಟ್ಟು ನೀವು ಕೂಫಾ ಪಟ್ಟಣಕ್ಕೆ ಹೋಗಬೇಡಿ ಎಂದು ಇಬ್ಬರೂ ಬೇಡಿಕೊಂಡರು. ನಿಮ್ಮ ನಿರ್ಧಾರ
ಹೋಗಲೇಬೇಕೆಂದಿದ್ದರೆ, ಸಂಸಾರದ ಜೊತೆ ಹೋಗಬೇಡಿರಿ ಎಂದರು. ಆದರೂ ಹ. ಹುಸೇನ್(ರ) ತಮ್ಮ ಸಂಸಾರದ
ಸಮೇತ ಹೊರಟೇಬಿಟ್ಟರು.
ಕೂಫಾದ ದಾರಿಯಲ್ಲಿ ಯಾತ್ರಿಗಳಿಂದ ತಿಳಿಯಿತು- ಹ. ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ಕೊಲ್ಲಿಸಲ್ಪಟ್ಟಿದ್ದಾರೆ. ಆಗಲೂ
ಹ. ಹುಸೇನ್(ರ) ಹಿಂತಿರುಗಲಿಲ್ಲ. ವಿಷಯ ತಿಳಿದುಕೊಳ್ಳಲು ಖೈಸ್ ಇಬ್ನ್ ಮುಸಹ್ಹರಲ್ ಸೈದವಿ(ರ) ಎಂಬುವರನ್ನು
ಕಳುಹಿಸಿದರು. ಅವರನ್ನು ಸಹ ಕೊಲ್ಲಿಸಲಾಯಿತು.
ಕರ್ಬಲಾದ ಯುದ್ಧ
ಕೂಫಾ ತಲುಪಲು ಇನ್ನೂ ಎರಡು ದಿನದ ಪ್ರಯಾಣ ಬೆಳೆಸಬೇಕಾಗಿತ್ತು. ಅಷ್ಟರಲ್ಲಿ ಹುರ್ ಇಬ್ನ್ ರಿಯಾಹಿ ಎಂಬುವನ
ನೇತೃತ್ವದಲ್ಲಿ 1,000 ಸೈನಿಕರ ಒಂದು ತುಕಡಿ ಹ. ಇಮಾಮ್ ಹುಸೇನ್ರವರನ್ನು(ರ) ಘೇರಾವು ಹಾಕಿತು. ಹುಸೇನ್(ರ)
ಕೇಳಿದರು, ನಮ್ಮ ಜೊತೆಯೋ ಅಥವಾ ನಮ್ಮ ವಿರುದ್ಧವೋ?
ಅವರು ಉತ್ತರಿಸಿದರು – ಖಂಡಿತವಾಗಿಯೂ ನಿಮ್ಮ ವಿರುದ್ಧವೇ.
ನನಗೆ ಬಂದ ಪತ್ರಗಳಿಂದ ನೀವು ಭಿನ್ನವಾಗಿದ್ದರೆ, ನಾನು ಎಲ್ಲಿಂದ ಬಂದಿದ್ದೆ ಅಲ್ಲಿಗೆಯೇ ಮರಳಿ
ಹೊರಟುಹೋಗುವೆನು – ಎಂದು ಹುಸೇನ್(ರ) ಹೇಳಿದರು. ಮದೀನಾಗೆ ಹಿಂತಿರುಗಲು ಹುರ್ ಬಿಡಲಿಲ್ಲ. ಮೊಹರಂ
ತಿಂಗಳ 2ನೇ ದಿನ (ಔಛಿಣ 2, 680 ಅಇ) ಪ್ರವಾದಿವರ್ಯರ ಮನೆತನ ಕರ್ಬಲಾ ಎಂಬ ಪ್ರದೇಶಕ್ಕೆ ಕಾಲಿಟ್ಟಿತು. ಆ
ಬರಡು ಒಣ ಪ್ರದೇಶದಲ್ಲಿಯೇ ಡೇರೆಗಳನ್ನು ಹಾಕುವಂತೆ ಸೈನ್ಯ ಹುಸೇನ್ರವರನ್ನು(ರ) ಒತ್ತಾಯಿಸಿತು. ಆಗ ಆ
ಮೈದಾನದಲ್ಲೇ ಪಡಾವುಗಳನ್ನು ಹಾಕಲಾಯಿತು.
ಉಮರ್ ಇಬ್ನ್ ಸಾದ್ ಎಂಬಾತನಿಗೆ ಸೈನ್ಯದ ನೇತೃತ್ವ ವಹಿಸಿ ಕರ್¨ಲಾಗೆ ಹೋಗಿ ಹ. ಹುಸೇನ್ರವರೊಂದಿಗೆ ಯುದ್ಧ
ಮಾಡುವಂತೆ ಜಿಯಾದ್ಗೆ ಆದೇಶಿಸಿದನು. ಸಆದ್ ನಿರಾಕರಿಸಿದಾಗ ನಿನ್ನ ಗವರ್ನರ್ಗಿರಿಯನ್ನು ಕಿತ್ತುಕೊಳ್ಳುತ್ತೇನೆ,
ನಿನ್ನ ಸ್ಥಾನವನ್ನು ಶಿಮ್ರ್ ಇಬ್ನ್ ಜಿಲ್ ಜಾಶಾನ್ ಎಂಬುವನಿಗೆ ಕೊಟ್ಟುಬಿಡುತ್ತೇನೆ ಎಂದು ಜಿಯಾದ್ ಬೆದರಿಕೆ ಹಾಕಿದಾಗ,
ಸಆದ್ ತನ್ನ ಸ್ಥಾನಮಾನ ಉಳಿಸಿಕೊಳ್ಳಲು 10,000 (ಹತ್ತು ಸಾವಿರ) ಸೈನ್ಯದೊಂದಿಗೆ ಕರ್ಬಲಾ ಎಂಬ ಮೈದಾನಕ್ಕೆ
ಬಂದನು.
ಯುದ್ಧ ಮೈದಾನಕ್ಕೆ ಜಿಯಾದ್ನು ಸಆದ್ನ ಹೆಸರಲ್ಲಿ ಒಂದು ಪತ್ರವನ್ನು ಕಳುಹಿಸುತ್ತಾನೆ. ಅದರಲ್ಲಿ ಹುಸೇನ್ರವರ(ರ)
ಕುಟುಂಬಕ್ಕೆ ಒಂದು ತೊಟ್ಟು ನೀರು ಸಹ ಸಿಗದಹಾಗೆ ನೋಡಿಕೊಳ್ಳಿ ಎಂದು ತಿಳಿಸಲಾಗುತ್ತದೆ. ಆಗ ಇಬ್ನ್ ಸಆದ್ 5,000
ಕುದುರೆ ಸವಾರರನ್ನು ಯುಫ್ರಟಿಸ್ ನದಿಯನ್ನು ಕಾಯಲು ಬಿಟ್ಟು, ಪ್ರವಾದಿವರ್ಯರ ಕುಟುಂಬದವರಿಗೆ ನೀರು ಸಿಗದಹಾಗೆ
ಕ್ರಮ ಕೈಗೊಳ್ಳುತ್ತಾನೆ. ಯುದ್ಧದ ಕೊನೆಯ ದಿನದವರೆಗೂ ನೀರು ಪ್ರವಾದಿವರ್ಯರ ಕುಟುಂಬಕ್ಕೆ ಸಿಗುವುದಿಲ್ಲ.
ತಕ್ಷಣ ಯುದ್ಧ ಪ್ರಾರಂಭ ಮಾಡುವಂತೆ 9ನೇ ದಿನದಂದು ಜಿಯಾದನು ಇಬ್ನು ಸಆದ್ಗೆ ಸಂದೇಶ ಕಳುಹಿಸುತ್ತಾನೆ. ಸೈನ್ಯ
ಪಡಾವುಗಳತ್ತ ಮುನ್ನಡೆಯುತ್ತದೆ. ಆಗ ಹುಸೇನ್ರವರು(ರ) ಒಂದು ದಿನ ಅವಕಾಶ ಕಲ್ಪಿಸಿಕೊಡಿ, ನಾವೆಲ್ಲಾ ಈ ರಾತ್ರಿ
ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತೇವೆ ಎಂದು ಅಬ್ಬಾಸ್ ಇಬ್ನ್ ಅಲಿ(ರ) ರವರಿಂದ ಹೇಳಿ ಕಳುಹಿಸುತ್ತಾರೆ. ಇಬ್ನ್ ಸಆದ್
ಒಪ್ಪಿಕೊಳ್ಳುತ್ತಾನೆ.
ಹ. ಹುಸೇನ್ರವರು(ರ) ತಮ್ಮ ಕುಟುಂಬದವರನ್ನೆಲ್ಲಾ ಕರೆದು, ಮಧ್ಯರಾತ್ರಿ ಎಲ್ಲರೂ ಹೊರಟುಹೋಗಿ, ನನ್ನ
ಜೊತೆಗಿದ್ದರೆ ಸಾವನ್ನು ನೋಡಬೇಕಾಗುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಯಾರೂ ಒಪ್ಪುವುದಿಲ್ಲ. ಎಲ್ಲರೂ ಸೇರಿ ಇಡೀ
ರಾತ್ರಿ ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.
ಯುದ್ಧದ ದಿನ
ಹುಸೇನ್ರವರು(ರ) ತನ್ನ ಕುಟುಂಬದೊಂದಿಗೆ ಬೆಳಗಿನ ಫಜರ್ ನಮಾಜ್ ಮಾಡಿ ಯುದ್ಧಕ್ಕೆ ಸನ್ನದ್ಧರಾಗುತ್ತಾರೆ. 32
ಕುದುರೆ ಸವಾರರು, 40 ಕಾಲುಸವಾರರು. ಮಕ್ಕಳು ಮತ್ತು ಹೆಂಗಸರು ಪಡಾವುಗಳಲ್ಲೇ ಇರುತ್ತಾರೆ. ಹ. ಹುಸೇನ್(ರ)
ತಮ್ಮ ಕುದುರೆ ಜುಲ್ಜಿನಾಹ್ವನ್ನು ಏರುತ್ತಾರೆ.
ತಮ್ಮ ಸುತ್ತಲ ಸೈನ್ಯಕ್ಕೆ ಹ. ಹುಸೇನ್(ರ) ಹೇಳುತ್ತಾರೆ- “ಪ್ರವಾದಿವರ್ಯರ ಕುಟುಂಬ ಕಾಪಾಡಲು ನನ್ನೊಂದಿಗೆ
ಸೇರಿಕೊಳ್ಳಿ.'' ಹುರ್ ಇಬ್ನ್ ಯಜೀದ್ ಅಲ್ ರಿಯಾಹಿಯ ಮನಸ್ಸು ಕರಗಿ ತನ್ನ ಕುದುರೆಯನ್ನು ಹ. ಹುಸೇನ್(ರ)ರವರ
ಸೈನ್ಯಕ್ಕೆ ಸೇರಿಕೊಳ್ಳುತ್ತಾನೆ.
ಯಜೀದ್ I ಸೈನ್ಯದ ಸೇನಾಪತಿಯಾಗಿದ್ದ ಉಮರ್ ಬಿನ್ ಸಆದ್ ಬಿನ್ ಯಜೀದ್ನನ್ನು ನೇತೃತ್ವದಿಂದ
ಪದಚ್ಯುತಗೊಳಿಸಿ, ಶಿಮ್ರ್ ಎಂಬಾತನನ್ನು ನೇಮಿಸುತ್ತಾನೆ. ತನ್ನ ಮಗ ಮತ್ತು ಹುರ್ ಹ. ಹುಸೇನ್ರವರ(ರ)
ಪರವಾಗಿರುವುದು ಆತನಿಗೆ ಮಧ್ಯಾಹ್ನದ ವೇಳೆಯೊಳಗೆ ತಿಳಿದುಹೋಗುತ್ತದೆ.
ಹ. ಹುಸೇನ್(ರ) ಕುಟುಂಬ ಕಡು ಬಿಸಿಲಲ್ಲಿ ಒಂದು ಹನಿ ನೀರಿಲ್ಲದೆ ಬಳಲುತ್ತಿದ್ದಾರೆ. ಹೆಂಗಸರ ಮಕ್ಕಳ ಗೋಳು
ನೋಡುವುದಕ್ಕೆ ಆಗುತ್ತಿಲ್ಲ. ಇತ್ತ ಒಂದು ಮುಷ್ಟಿ ಜನ, ಅತ್ತ ಸಾವಿರಾರು. ಶತ್ರು ಸೈನ್ಯಕ್ಕೆ ಕಿಂಚಿತ್ತೂ ಕರುಣೆ ಇಲ್ಲ. ಇತ್ತ
ಸತ್ಯ ಉಳಿಸಿಕೊಳ್ಳಲು ಹೋರಾಟ. ಅತ್ತ ಕೇವಲ ದುರಾಸೆ, ದುರಾಡಳಿತ, ದುರ್ಮಾರ್ಗ. ಇತ್ತ ಸತ್ಯಕ್ಕಾಗಿ ಕಂದಮ್ಮಗಳು
ಪ್ರಾಣ ಕೊಡಲೂ ಸಿದ್ಧ. ಅತ್ತ ಕ್ರೂರ ಸೈನಿಕರು. ಒಟ್ಟಾರೆ ರಕ್ತಕಣ್ಣೀರಿನ ಸನ್ನಿವೇಶ. ಇಂದಿಗೂ ಹ. ಇಮಾಮ್
ಹುಸೇನ್(ರ)ರವರ ಹೆಸರು ಅಮರ. ಆ ಅಮರ ಮರಣ, ಸತ್ಯಕ್ಕಾಗಿ ತ್ಯಾಗ, ಬಲಿದಾನಗಳ ಪಾಠ ನಮ್ಮ ಎದೆಗಳಲ್ಲಿ
ಅಚ್ಚಳಿಯದೆ ಉಳಿದಿದೆ.
ಯುದ್ಧ ಪ್ರಾರಂಭ
ಇಬ್ನ್ ಸಆದ್ ಹುಸೈನ್(ರ) ಸೈನ್ಯದ ಮೇಲೆ ಬಾಣ ಬಿಟ್ಟು ಯುದ್ಧ ಪ್ರಾರಂಭಿಸಿದನು. ಮೊಹರಂ 10ನೇ ದಿನ. ಚಿಕ್ಕ ಸೈನ್ಯ
ಕೆಲವೇ ಗಂಟೆಗಳಲ್ಲಿ ಚರಿತ್ರೆಯ ಪುಟಗಳಲ್ಲಿ ತನ್ನ ದಾಖಲಾತಿಯನ್ನು ಮಾಡಿಬಿಟ್ಟಿತು. ಹ. ಹುಸೇನ್ರವರ(ರ) ಸೋಲು
ಸೋಲಲ್ಲ. ಅದು ಸತ್ಯದ ಗೆಲುವು. ಹ. ಹುಸೇನ್ರವರು(ರ) ಅಧಿಕಾರಕ್ಕಾಗಿ ಯುದ್ಧ ಮಾಡಲಿಲ್ಲ. ಅಧಿಕಾರಕ್ಕಾಗಿ ಯುದ್ಧ
ಮಾಡುವವರು ಯಾರೂ ತನ್ನ ಕುಟುಂಬದ ಹೆಂಗಸರನ್ನು ಮತ್ತು ಮಕ್ಕಳನ್ನು ಯುದ್ಧ ಮೈದಾನಕ್ಕೆ ಕರೆದುಕೊಂಡು
ಹೋಗುವುದಿಲ್ಲ. ಸತ್ಯವನ್ನು ಕಾಪಾಡಲು ತನ್ನ ಕುಟುಂಬವನ್ನೇ ಬಲಿದಾನ ಮಾಡಿಬಿಟ್ಟರು. ಯಜೀದನ ಕಿಲಾಪತ್ತನ್ನು
ಒಪ್ಪಿಕೊಂಡು ಸುಖವಾಗಿ ಜೀವನ ನಡೆಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಕೊನೆಗೆ ತಮ್ಮ ಪ್ರಾಣವನ್ನೇ
ತ್ಯಾಗ ಮಾಡಿಬಿಟ್ಟರು. ಹ. ಹುಸೇನ್(ರ) ನಿಮ್ಮ ಸಹನೆಯ ನಿಲುವಿಗೆ, ತ್ಯಾಗ, ಬಲಿದಾನಗಳಿಗೆ ನನ್ನ ಕೋಟಿ ಕೋಟಿ
ಸಲಾಮು.
ಕರ್ಬಾಲದ ಮೈದಾನದಲ್ಲಿ 72 (72 ಜನರಲ್ಲಿ 19 ಜನ ಸ್ವಂತ ಪ್ರವಾದಿ ಕುಟುಂಬದವರಾಗಿದ್ದರು.) ಜನರೂ ಸಹ ತಮ್ಮ
ಪ್ರಾಣ ಕೊಡುತ್ತಾರೆ. ಕೊನೆಗೆ ಉಳಿಯುವುದು ಒಂದೇ ಮಗು ಹ. ಜೈನುಲ್ ಆಬಿದೀನ್(ರ) ಅವರು ಅನಾರೋಗ್ಯದಿಂದ
ಹಾಸಿಗೆಯಲ್ಲಿ ಬಳಲುತ್ತಿರುತ್ತಾರೆ. ಉಳಿದ ಮಕ್ಕಳೆಲ್ಲಾ ನಗು ನಗುತ್ತಾ ತಮ್ಮ ಪ್ರಾಣವನ್ನು ಕೊಡುತ್ತಾರೆ.
ಮೊದಲನೆಯದಾಗಿ ಹ. ಹುಸೇನ್ರವರ(ರ) ಸುಪುತ್ರ ಹ. ಅಲಿ ಅಕ್ಬರ್ ಯುದ್ಧ ಮೈದಾನಕ್ಕೆ ಹೋಗುತ್ತಾರೆ. ನಂತರ
ಒಬ್ಬರಾದ ಮೇಲೆ ಒಬ್ಬರು ಮೈದಾನಕ್ಕೆ ಹೋಗಿ ಎಲ್ಲರೂ ಅಮರ ಯೋಧರ ಸಾಲಲ್ಲಿ ಸೇರಿಕೊಳ್ಳುತ್ತಾರೆ. ತನ್ನ ಮಕ್ಕಳು,
ತನ್ನ ಕುಟುಂಬ, ಸಹೋದರ, ಸಹೋದರಿಯರ ಮಕ್ಕಳು ಎಲ್ಲರೂ ವಿಧಿವಶವಾಗಿ ಹೋಗುತ್ತಾರೆ.
ಅಬ್ಬಾಸ್ ಇಬ್ನೆ ಅಲಿ(ರ)
ಪಡಾವಿನಲ್ಲಿ ಹ. ಹುಸೇನ್ರವರ(ರ) ಮಗು ಸಕೀನ ಮತ್ತು ಇತರರು ನೀರಿನ ದಾಹದಿಂದ ತತ್ತರಿಸಿಹೋಗಿದ್ದರು.
ಸಕೀನಾಳ ಗೋಳು ನೋಡಲು ಆಗದೆ ಆಕೆಯ ಚಿಕ್ಕಪ್ಪ ಕುದುರೆ ಏರಿ ನೀರು ತರಲು ನದಿಯ ಕಡೆಗೆ ಹೊರಟರು. ಇಬ್ನ್
ಸಆದ್ನ ಸೈನ್ಯವನ್ನು ಛೇದಿಸುತ್ತ ಬಾಣಗಳ ಮಳೆಯಲ್ಲಿ ಬಹಳ ಹಿಂಸೆ ಸಹಿಸಿ ಕೊನೆಗೆ ನದಿಯ ಬಳಿಗೆ ಬಂದರು. ನೀರಿನ
ಚೀಲವನ್ನು ತುಂಬಿಕೊಂಡರು. ತಾವು ಅಲ್ಲಿಯೇ ನದಿಯ ನೀರು ಕುಡಿಯಬಹುದಾಗಿತ್ತು. ಅವರ ಗುಣ ನೋಡಿ, ಮೊದಲು
ಮಕ್ಕಳಿಗೆ ಕುಡಿಸಿ ನಂತರ ತಾವು ಕುಡಿಯೋಣವೆಂದು ಕುದುರೆ ಏರಿ ಪುನಃ ಮರಳಿ ಬರುವಾಗ ಬಾಣಗಳ ಸುರಿಮಳೆ.
ಸಆದ್ ತನ್ನ ಸೈನಿಕರ ಮೇಲೆ ಕೂಗಾಡಿದನು- ಅವರು ನೀರನ್ನು ಪಡಾವುಗಳಿಗೆ ತಲುಪಿಸುವಲ್ಲಿ ಸಫಲರಾದರೆ ಅವರನ್ನು
ಸೋಲಿಸಲು ಬಹಳ ಸಮಯ ಬೇಕಾಗುತ್ತದೆ. ಆಗ ಆತನ ಸೈನಿಕರ ದಂಡು ಅಬ್ಬಾಸ್(ರ) ಕುದುರೆಯನ್ನು ಗೆರಾವು
ಹಾಕಿದರು. ಅಬ್ಬಾಸ್ ನೀರಿನ ಚೀಲವನ್ನು ಬಲ ಭುಜಕ್ಕೆ ತೂಗುಹಾಕಿಕೊಂಡಿದ್ದರು. ಕ್ರೂರಿಗಳು ಅವರ ಆ ಕೈಯನ್ನು
ಕತ್ತರಿಸಿದರು. ರಕ್ತ ಹರಿಯುತ್ತಿದೆ. ಅಬ್ಬಾಸ್ ಧೈರ್ಯ ಕಳೆದುಕೊಳ್ಳದೆ ನೀರನ್ನು ಎಡಗೈಯಲ್ಲಿ ಹಿಡಿದು ಶತ್ರು ಸೈನ್ಯದಿಂದ
ಪಾರಾಗಲು ಪ್ರಯತ್ನಿಸುತ್ತಿದ್ದಾಗ ಅವರ ಆ ಕೈಯನ್ನೂ ಸಹ ಕತ್ತರಿಸಲಾಯಿತು. ಆಗಲೂ ಸಹ ಅವರು ಹಿಂಜರಿಯಲಿಲ್ಲ.
ನೀರಿನ ಚೀಲವನ್ನು ತಮ್ಮ ಹಲ್ಲುಗಳಿಂದ ಹಿಡಿದು ಮುಂದುವರೆಯಲು ಪ್ರಯತ್ನಿಸಿದರು. ಬಾಣಗಳ ಸುರಿಮಳೆಯಲ್ಲಿ ಒಂದು
ಬಾಣ ನೀರಿನ ಚೀಲವನ್ನು ಛಿದ್ರ ಮಾಡಿತು. ಆಗ ಅಬ್ಬಾಸ್ ಶತ್ರುಗಳ ಮುಂದೆ ರಣರಂಗದಲ್ಲಿ ರಣಧೀರರಾಗಿ ನಿಂತರು.
ಒಂದು ಬಾಣ ಬಂದು ಅವರ ಕಣ್ಣುಗಳಿಗೆ ಹೊಡೆಯಿತು. ಒಬ್ಬ ಅವರ ತಲೆಗೆ ಆಯುಧದಿಂದ ಹೊಡೆದನು. ಹ. ಅಬ್ಬಾಸ್(ರ)
ಕುದುರೆ ಮೇಲಿಂದ ಬಿದ್ದರು. ಜೀವನದ ಕೊನೆಯ ಕ್ಷಣಗಳಲ್ಲಿ ತಮ್ಮ ಕಣ್ಣುಗಳಿಂದ ಚಿಮ್ಮುತ್ತಿರುವ ರಕ್ತವನ್ನು ಒರೆಸುತ್ತಾ ಹ.
ಹುಸೇನ್ರವರನ್ನು ಕೊನೆಯ ಬಾರಿ ನೋಡಲು ಪ್ರಯತ್ನಿಸುತ್ತಿದ್ದರು. 'ನಾನು ನೀರು ತರುವೆನೆಂದು ಮಕ್ಕಳಿಗೆ ಭರವಸೆ
ನೀಡಿದ್ದೆ, ಸಕೀನಾಳ ಮುಖವನ್ನು ನಾನು ಬರಿಗೈಯಲ್ಲಿ ಹೋಗಿ ಹೇಗೆ ನೋಡಲಿ, ದಯವಿಟ್ಟು ನನಗೆ ಈ ಸ್ಥಿತಿಯಲ್ಲಿ
ಪಡಾವುಗಳಿಗೆ ತೆಗೆದುಕೊಂಡು ಹೋಗಬೇಡಿ- ಎಂದು ಹ. ಅಬ್ಬಾಸ್(ರ) ಹೇಳಿದರು. ಹುಸೇನ್ರವರಿಗೆ(ರ) ಸಹೋದರಾ
ಎಂದು ಕೂಗಿದರು. “ನಿಮ್ಮ ಸಾವು ನನ್ನ ಸೊಂಟ ಮುರಿದ ಹಾಗೆ” ಎಂದು ಹ. ಇಮಾಮ್ ಹುಸೇನ್(ರ) ಹೇಳಿದರು.
ಮೈದಾನದಲ್ಲಿ ತಮ್ಮ ಕುಟುಂಬದ ಸದಸ್ಯರ ವೀರಶವಗಳು ಅಲ್ಲಲ್ಲಿ ಬುದ್ದಿದ್ದವು. ಹ. ಹುಸೇನ್(ರ) ತಮ್ಮ ಕೈಯಾರೆ ತಮ್ಮ
ಕರುಳಿನ ಕುಡಿಗಳ ಶವಗಳನ್ನು ಎತ್ತಿತರುತ್ತಿದ್ದರು. ಶತ್ರು ಸೈನ್ಯದವರಿಗೆ ಎಳ್ಳಷ್ಟೂ ಕನಿಕರವಿಲ್ಲ. ಕ್ರೂರಿ ಸೈನ್ಯ
ಹಿಂಸೆಯನ್ನು ಮುಂದುವರೆಸುತ್ತಲೇ ಇತ್ತು. ಮಡಿಲ ಮಗುವನ್ನೂ ಸಹ ಬಿಡಲಿಲ್ಲ. ಶತ್ರುಗಳು ಅವರನ್ನು ಒಂದು ಹನಿ
ನೀರೂ ಸಹ ಕೊಡದೆ ಬರ್ಬರವಾಗಿ ಕೊಂದರು. ಆ ಅಗ್ನಿ ಪರೀಕ್ಷೆಯಲ್ಲಿ ಹ. ಅಬ್ಬಾಸ್ ಗೆದ್ದರು ಎಂಬ ಸಾಕ್ಷಿಗಾಗಿಯೇ
ದೇವರು ಅದೇ ಸ್ಥಳದಲ್ಲಿ ನೀರಿನ ಒಂದು ಚಿಲುಮೆಯನ್ನು ಜಾರಿಗೊಳಿಸಿದನು. ಹ. ಅಬ್ಬಾಸ್ರವರ(ರ) ಸಮಾಧಿಯ ಬಳಿ
ಅಂದು ಕಾರಂಜಿಯಂತೆ ಚಿಮ್ಮಿದ ನೀರು ಇಂದಿಗೂ ಹರಿಯುತ್ತಿದೆ. ದೇವರ ಈ ಚಮತ್ಕಾರ ನೋಡಿ ಮೈ `ಝುಂ
ಎನ್ನುತ್ತದೆ. ಅವರ ಸತ್ಯಮಾರ್ಗ ಎಷ್ಟು ಸತ್ಯವಾಗಿತ್ತು ಎಂದು ನಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಇರಾಕ್ಗೆ
ಹೋದರೆ ನೀವು ನೋಡಬಹುದು ಅಥವಾ ಯೂಟ್ಯೂಬ್ನಲ್ಲೂ ಸಹ ನೋಡಬಹುದು.
ಕರ್ಬಲಾದ ಸುಲ್ತಾನ ವೀರ ಪುರುಷೋತ್ತಮ ಹ. ಹುಸೇನ್ ರವರ(ರ) ಅಮರ ಮರಣ
ಹಳೆಯ ಯುದ್ಧ ಪದ್ಧತಿಯ ಪ್ರಕಾರ ಒಬ್ಬ ಎದುರಾಳಿಗೆ ಒಬ್ಬ ಎದುರಾಳಿ ಬರುವ ಹಾಗೆ ಇಮಾಮ್ ಹುಸೇನ್ ಕೇಳಿದರು.
ಕ್ರೂರಿ ಸೈನ್ಯ ಒಪ್ಪಿತು. ಹ. ಹುಸೇನ್(ರ) ಧೈರ್ಯದಿಂದ ಹೋರಾಡಿದರು. ಒಬ್ಬ ಸೈನಿಕ ಹುಸೇನ್(ರ) ರವರಿಗೆ ಕಲ್ಲಿನಿಂದ
ತಲೆಗೆ ಹೊಡೆದ. ರಕ್ತ ಚಿಮ್ಮಿತು. ಅವರು ರಕ್ತ ಒರೆಸುವಷ್ಟರಲ್ಲಿ ಒಂದು ಬಾಣ ಬಂದು ಎದೆಗೆ ತಾಕಿತು. ಹ. ಹುಸೇನ್(ರ)
ಆಕಾಶಕ್ಕೆ ತಲೆ ಎತ್ತಿ ಹೇಳಿದರು- “ಓ ದೇವರೇ! ಪ್ರವಾದಿ ಮುಹಮ್ಮದರ(ಸ) ಮಗಳ ಮಗುವನ್ನು ಇವರು ಕೊಲ್ಲುತ್ತಿದ್ದಾರೆ
ನನ್ನನ್ನು ಸ್ವೀಕರಿಸು.”
ಹುಸೇನ್ರವರು(ರ) ರಕ್ತಸ್ರಾವದಿಂದ ಬಹಳ ಬಲಹೀನರಾಗಿರುವುದನ್ನು ನೋಡಿ ಒಬ್ಬ ಸೈನಿಕ ಬಂದು ಅವರ ತಲೆಯ
ಮೇಲೆ ಕತ್ತಿಯಿಂದ ಹೊಡೆದನು. ಸೈನಿಕರೆಲ್ಲಾ ಹ. ಹುಸೇನ್ರವರನ್ನು(ರ) ಗೆರಾವು ಹಾಕಿಕೊಂಡರು. ಅಷ್ಟರಲ್ಲಿ
ಪಡಾವಿನಿಂದ ಹ. ಹುಸೇನ್ರವರ ಸಹೋದರ ಇಮಾಮ್ ಹಸನ್ರವರ(ರ) ಮಗ ಅಬ್ದುಲ್ಲಾ ಓಡಿಬಂದು ಹ.
ಹುಸೇನ್ರವರನ್ನು ಕಾಪಾಡಲು ಪ್ರಯತ್ನಿಸಿದನು. ಹ. ಹುಸೇನ್ರವರಿಗೆ(ರ) ಬೀಳುತ್ತಿದ್ದ ಕತ್ತಿಯ ಪೆಟ್ಟನ್ನು ತಡೆಯಲು
ತನ್ನ ಕೈ ಕೊಟ್ಟನು. ಶತ್ರುಗಳು ಆ ಮುಗ್ಧ ಹುಡುಗನ ಕೈ ಕತ್ತರಿಸಿದರು. ಹ. ಹುಸೇನ್ರವರು(ರ) ಮಗುವನ್ನು
ತಬ್ಬಿಕೊಂಡರು. ಆದರೆ ಆಗಲೇ ಮಗುವಿಗೆ ಬಾಣ ತಗುಲಿತ್ತು.
ಖೊವಾಲಿ ಇಬ್ನ್ ಯಜೀದ್ ಅಲ್ ಅಸ್ಬಹಿ ಎಂಬಾತನಿಗೆ ಉಮರ್ ಇಬ್ನು ಸಆದ್ ಹ. ಹುಸೇನ್ರವರ ಕತೆ ಮುಗಿಸಲು
ಹೇಳಿದನು. ಆತ ಹೆದರಿ ಮುಂದಾಗಲಿಲ್ಲ. ಆಗ ಶಿಮ್ರ್ ಇಬ್ನ್ ಧಿಲ್ಜೌಶಾನ್ ಎಂಬುವನು ಹ. ಹುಸೇನ್ರವರ(ರ) ಕತ್ತನ್ನು
ಕತ್ತಿಯಿಂದ ಕತ್ತರಿಸಿದನು. ಹ. ಹುಸೇನ್ರವರ(ರ) ಕತ್ತು ಕತ್ತರಿಸುವ ಮುನ್ನ ಹ. ಹುಸೇನ್(ರ) ಶಿಮ್ರ್ಗೆ ಕೇಳಿದರು-
“ಇವತ್ತು ನೀನು ಪ್ರಾರ್ಥನೆ ಸಲ್ಲಿಸಿದೆಯಾ?” ಇಂತಹ ಪರಿಸ್ಥಿತಿಯಲ್ಲಿ ಇಂತಹ ಪ್ರಶ್ನೆಯನ್ನು ಕೇಳಿ ಶಿಮ್ರ್ ಚಕಿತಗೊಂಡನು.
“ನೀವು ಪ್ರವಾದಿವರ್ಯರ ಮೊಮ್ಮಗ, ಒಳ್ಳೇ ತಂದೆ-ತಾಯಿಯ ಸುಪುತ್ರ, ದೇವರಾಣೆ ನನಗೆ ಗೊತ್ತಿದ್ದರೂ ನಿಮ್ಮ
ಶಿರಚ್ಛೇದನ ಮಾಡುತ್ತಿದ್ದೇನೆ” ಎಂದು ಶಿಮ್ರ್ ಹೇಳಿ ಕ್ರೂರತನದಿಂದ ತಲೆಯನ್ನು ಶರೀರದಿಂದ ತೆಗೆದೇಬಿಟ್ಟ.
ಸೈನಿಕರೆಲ್ಲಾ ಹ. ಹುಸೇನ್ರವರ(ರ) ಎಲ್ಲಾ ವಸ್ತುಗಳನ್ನೂ ಲೂಟಿ ಮಾಡಿಕೊಂಡರು.
[ಕೆಲ ಚರಿತ್ರಕಾರರು ಹ. ಹುಸೇನ್ರವರು(ರ) ನಮಾಜ್ ಮಾಡಲು ತಲೆ ತಗ್ಗಿಸಿದಾಗ ಶಿರಚ್ಛೇದನ ಮಾಡಲಾಯಿತು
ಎನ್ನುತ್ತಾರೆ. ಒಟ್ಟಿನಲ್ಲಿ ಬಹಳ ಕ್ರೂರ ವರ್ತನೆಯಿಂದ ತಲೆಯನ್ನು ತೆಗೆಯಲಾಯಿತು. ಚರಿತ್ರೆ ಮರೆಯುವಂಥ
ಘಟನೆಯಲ್ಲ. ಪ್ರತೀ ಮೊಹರಂ ತಿಂಗಳು ಬಂದಾಗ ಅವರ ನೆನಪು ಕಾಡುತ್ತದೆ. ಸೂಫಿ ಸಂತರಲ್ಲದೆ ಸಾಮಾನ್ಯ ಜನರೂ
ಸಹ ಯಾವುದೇ ಜಾತಿಯ ಭೇದವಿಲ್ಲದೆ ಹ. ಹುಸೇನ್ರವರ(ರ)ನ್ನು ಬಹಳ ವ್ಯಥೆಯ ಮನಸ್ಸಿನಿಂದ
ನೆನಪಿಸಿಕೊಳ್ಳುತ್ತಾರೆ.]
ಸಆದ್ ಸೈನ್ಯ ಪಡಾವುಗಳತ್ತ ನುಸುಳುತ್ತದೆ. ಹೆಂಗಸರನ್ನು ಹೊರಹಾಕಿ ಪಡಾವುಗಳಿಗೆ ಬೆಂಕಿ ಇಡಲಾಗುತ್ತದೆ.
“ದಯವಿಟ್ಟು ನಮ್ಮನ್ನು ಹ. ಹುಸೇನ್ರವರು(ರ) ಕೊಲೆಗೊಂಡ ಜಾಗಕ್ಕೆ ಕರೆದುಕೊಂಡು ಹೋಗಿ ಎಂದು
ಬೇಡಿಕೊಳ್ಳುತ್ತಾರೆ.” ಅಮರ ಯೋಧನನ್ನು ನೋಡಿ ಸಕೀನಾ ಬಿಕ್ಕಿ ಬಿಕ್ಕಿ ಅಳುತ್ತಾಳೆ. ತಂದೆಯ ಶರೀರವನ್ನು
ತಬ್ಬಿಕೊಳ್ಳುತ್ತಾಳೆ. ಕೆಲ ಜನರು ಆಕೆಯನ್ನು ಎಳೆದುಕೊಳ್ಳುವವರೆಗೂ ತಂದೆಯ ಶರೀರವನ್ನು ಬಿಡುವುದೇ ಇಲ್ಲ.
ಉಮರ್ ಇಬ್ನ್ ಸಆದ್ ಹುಸೇನ್ರವರ(ರ) ಶರೀರವನ್ನು ಎಳೆಯುವಂತೆ ಆದೇಶಿಸುತ್ತಾನೆ. ಆಗ 10 ಕುದುರೆ ಸವಾರರು
ಹ. ಹುಸೇನ್ರವರ ಎದೆ ಭೂವಿಗೆ ತಾಕುವಂತೆ ಎಳೆದುಕೊಂಡು ಹೋಗುತ್ತಾರೆ.
ಹ. ಹುಸೇನ್ರವರ(ರ) ಕುಟುಂಬದ ಎಲ್ಲಾ ಸದಸ್ಯರ ತಲೆಗಳನ್ನು ಶರೀರದಿಂದ ಬೇರೆ ಮಾಡಿ ಉದ್ದನೆಯ ಭರ್ಜಿಗಳಿಗೆ
ಸಿಕ್ಕಿಸಿ ಕೂಫಾ ಪಟ್ಟಣಕ್ಕೆ ಮೆರವಣಿಗೆ ಮಾಡಲು ಕಳುಹಿಸಲಾಗುತ್ತದೆ. ಹ. ಹುಸೇನ್ರವರ(ರ) ತಲೆಯನ್ನು ಕ್ರೂರಿ
ಜಿಯಾದ್ ಮುಂದೆ ಹಾಜರು ಪಡಿಸಲಾಗುತ್ತದೆ.
ತಲೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ರಾತ್ರಿ ಒಂದು ಚರ್ಚ್ ಬಳಿ ಪಡಾವುಗಳನ್ನು ಹಾಕುತ್ತಾರೆ. ಚರ್ಚಿನ ಪಾದ್ರಿ
ಶಬ್ದವನ್ನು ಕೇಳಿ ಹೊರಬರುತ್ತಾನೆ. ಯಾರು ನೀವು ಎಲ್ಲಿಂದ ಬಂದಿದ್ದೀರ? ಈ ತಲೆಗಳೆಲ್ಲ ಯಾರವು ಎಂದು ಕೇಳುತ್ತಾನೆ.
ಆಗ ಆ ತಲೆಗಳು ಪ್ರವಾದಿ ಮುಹಮ್ಮದ್(ಸ) ಮನೆತನದವರದು ಎಂದು ಹೇಳುತ್ತಾರೆ. ಆತ ಕಣ್ಣೀರು ಸುರಿಸುತ್ತಾನೆ.
ಇದು ಯಾರ ಶಿರ ಎಂದು ಕೇಳುತ್ತಾನೆ. ಹುಸೇನ್ರವರದು(ರ) ಎಂಬ ಉತ್ತರ ಸಿಗುತ್ತದೆ. ದಯವಿಟ್ಟು ಒಂದು ರಾತ್ರಿ ಈ
ಶಿರವನ್ನು ನನಗೆ ಕೊಡಿ ನಾಳೆ ಬೆಳಗ್ಗೆ ಹಿಂತಿರುಗಿಸಿ ಬಿಡುತ್ತೇನೆ ಎನ್ನುತ್ತಾನೆ. ಹತ್ತು ಸಾವಿರ ದೀನಾರಗಳನ್ನು
ಕೊಡುತ್ತೇನೆ, ಬೆಳಗಿನವರೆಗೂ ಈ ಶಿರವನ್ನು ನಾನು ಇಟ್ಟುಕೊಳ್ಳುತ್ತೇನೆ ಎಂದು ಪುನಃ ಬೇಡುತ್ತಾನೆ. ಆಗ ಆ ಜನ ಒಂದು
ರಾತ್ರಿಗಾಗಿ ಹ. ಹುಸೇನ್ರವರ(ರ) ಶಿರವನ್ನು ಪಾದ್ರಿಗೆ ಒಪ್ಪಿಸುತ್ತಾರೆ. ಆ ಪಾದ್ರಿ ಹ. ಹುಸೇನ್ರವರ(ರ) ಶಿರವನ್ನು
ಸುಗಂಧದ ನೀರಿನಿಂದ ತೊಳೆದು ಶುದ್ಧ ಮಾಡಿ ಇಡೀ ರಾತ್ರಿಯೆಲ್ಲಾ ಮುಖವನ್ನೇ ನೋಡುತ್ತಿರುತ್ತಾನೆ. ಪ್ರವಾದಿವರ್ಯರು
ಮುದ್ದಾಡಿದ ಈ ಮುಖಕ್ಕೆ ಈ ಜನ ಇಷ್ಟು ಕ್ರೂರವಾಗಿ ಹಿಂಸಿಸಿದ್ದಾರಲ್ಲಾ ಎಂದು ಕೊರಗುತ್ತಾನೆ. ಬೆಳಗಾಗುತ್ತಲೇ ಆ
ಮುಖಕ್ಕೆ ಮುತ್ತಿಟ್ಟು ಸಕಲ ಮರ್ಯಾದೆಗಳಿಂದ ಶಿರವನ್ನು ಆ ಕ್ರೂರಜನರಿಗೆ ಒಪ್ಪಿಸಿಬಿಡುತ್ತಾನೆ.
ಮೊಹರಂ ತಿಂಗಳ 10ನೇ ದಿನ ಮಧ್ಯಾಹ್ನ ಹ. ಹುಸೇನ್ರವರ(ರ) ಶಿರವನ್ನು ಕ್ರೂರಿ ಜಿಯಾದ್ನ ಮುಂದೆ ಹಾಜರು
ಪಡಿಸಲಾಗುತ್ತದೆ. ಅಲ್ಲಿ ಶಿರದ ಅವಮಾನ ಮಾಡಲಾಗುತ್ತದೆ. ಹ. ಹುಸೇನ್ರವರ(ರ) ಸಹೋದರಿ ಜೈನಬ್(ರ) ಕೂಫಾ
ಜನರಿಗೆ ನೀವು ನಂಬಿಕೆ ದ್ರೋಹ ಮಾಡಿದ್ದು ಸರಿಯೇ? ಎಂದು ಗೋಳಾಡುತ್ತಾರೆ. ಹ. ಹುಸೇನ್ರವರ(ರ) ಕುಟುಂಬದ
ಹೆಂಗಸರಿಗೆ ಕರ್ಬಾಲಾದಿಂದ ಕೂಫಾದವರೆಗೆ ಬರಿಗಾಲಲ್ಲಿ, ಬಿಸಿಲಿನಲ್ಲಿ, ಪರ್ದೆ ಇಲ್ಲದೆಯೇ ಕ್ರೂರವಾಗಿ ನಡೆಸಿಕೊಂಡು
ಬಂದಿದ್ದರಿಂದ ಅವರ ಪರಿಸ್ಥಿತಿ ನೋಡಲಾರದಂತೆ ಆಗಿರುತ್ತದೆ. ಹ. ಜೈನುಲ್ ಆಬಿದೀನ್ ಸ್ಥಿತಿಯೂ ಸಹ
ಚಿಂತಾಜನಕವಾಗಿರುತ್ತದೆ.
ಕರ್ಬಲಾದಿಂದ ಕೂಫಾ, ಕೂಫಾದಿಂದ ಡಮಾಸ್ಕಸ್(ಸಿರಿಯಾ)ಗೆ ಬರುವವರೆಗೂ ಯಜೀದ್ನ ದುರಾಡಳಿತದ ಬಗ್ಗೆ
ಹುಸೇನ್ರವರ ಸಹೋದರಿ ಜೈನಬ್(ರ) ಮತ್ತು ಉಮ್ಮೆ ಕುಲ್ಸುಂ ಹಾಗೂ ಮಗ ಹ. ಜೈನುಲ್ ಆಬಿದೀನ್ರವರು(ರ)
ಜನರಿಗೆ ಎಲ್ಲಾ ವಿಷಯಗಳನ್ನು ತಿಳಿಸುತ್ತಾ ಬರುತ್ತಾರೆ. [ಮಗು ಸಕೀನಾ ತಂದೆಯ ನೆನಪಿನಲ್ಲೇ ತೀರಿಕೊಳ್ಳುತ್ತಾಳೆ.]
ಒಂದು ವರ್ಷ ಜೈಲುವಾಸ ಮುಗಿಸಿ ಮದೀನಾ ಪಟ್ಟಣಕ್ಕೆ ಹಿಂತಿರುಗುತ್ತಾರೆ. ಹ. ಹುಸೇನ್ರವರ(ರ) ಸತ್ಯಕ್ಕೆ ಮಾಡಿದ
ಹೋರಾಟದ ಬಗ್ಗೆ ಪ್ರಪಂಚಕ್ಕೆ ತಿಳಿಸುತ್ತಾರೆ.
ಹ. ಹುಸೇನ್ರವರ(ರ) 8 ವರ್ಷದ ಸುಪುತ್ರ ಜೈನುಲ್ ಆಬಿದೀನ್(ರ) ನಗುವುದನ್ನೇ ಮರೆತುಬಿಡುತ್ತಾರೆ. ಮದೀನಾದಲ್ಲಿ
ಪರರಿಗೆ ಸಹಾಯ ಮಾಡುತ್ತಾ ಪ್ರಾರ್ಥನೆಗಳಲ್ಲಿ ಕಾಲ ಕಳೆಯುತ್ತಾರೆ. ತನ್ನ ಕುಟುಂಬದ ನೆನಪು ಅವರಿಗೆ
ಕಾಡುತ್ತಿರುತ್ತದೆ. ತನ್ನ 57ನೇ ವಯಸ್ಸಿನಲ್ಲಿ ಅವರು ವಿಧಿವಶರಾಗುತ್ತಾರೆ.
ಹ. ಇಮಾಮ್ ಜೈನುಲ್ ಆಬಿದೀನ್(ರ) ತೀರಿದ ನಂತರ ಅವರ ಒಂಟೆ ಅವರ ಸಮಾಧಿಯ ಮೇಲೆ ತಲೆ ಇಟ್ಟು
ಅಳತೊಡಗಿತು. ಆಗ ಹ. ಇಮಾಮ್ ಬಾಖಿರ್ರವರು(ರ) ಅದನ್ನು ದೂರ ಸರಿಸಲು ಪ್ರಯತ್ನಿಸಿದರು. ಆದರೂ ಅದು
ಅಲ್ಲಿಂದ ಜರುಗಲಿಲ್ಲ. ಹ. ಬಾಖಿರ್ ಹೇಳಿದರು “ಇವಳು (ಒಂಟೆ) ಈ ಸ್ಥಳದಲ್ಲೇ ಪ್ರಾಣ ಬಿಡುತ್ತಾಳೆ.” ಆ ಒಂಟೆ ಹಾಗೆಯೇ
ಅದೇ ಸ್ಥಳದಲ್ಲಿ ಪ್ರಾಣ ಬಿಟ್ಟಿತು. (ಮಸಾಲಿಕು ಸ್ಸಾಲಿಕೀನ್ ಗಿoಟ. 1 Pg 207)
ಹ.ಹುಸೇನ್ ರವರ(ರ) ಬಗ್ಗೆ ಇತರರ ಹೇಳಿಕೆಗಳು
ಮಹಾತ್ಮ ಗಾಂಧಿ
“ಶೋಷಣೆಗೆ ಒಳಗಾಗಿಯೂ ಜಯವನ್ನು ಹೇಗೆ ಸಾಧಿಸುವುದು ಎಂಬುದನ್ನು ನಾನು ಹುಸೇನ್ರವರಿಂದ ಕಲಿತೆ.”
ರವೀಂದ್ರನಾಥ ಠಾಕೂರ್
“ನ್ಯಾಯ ಮತ್ತು ಸತ್ಯ ಕಾಪಾಡಲು ಸೈನ್ಯ ಮತ್ತು ಶಸ್ತ್ರಾಸ್ತ್ರಗಳು ಬೇಕಾಗಿಲ್ಲ, ಬದಲಾಗಿ ಇಮಾಮ್ ಹುಸೇನರಂತೆ
ಪ್ರಾಣಗಳನ್ನು ತ್ಯಾಗ ಮಾಡಿದರೆ ಜಯ ಸಾಧಿಸಬಹುದು.”
ಸರೋಜಿನಿ ನಾಯ್ಡು
“ನಾನು ಮುಸಲ್ಮಾನರಿಗೆ ಶುಭಾಶಯಗಳನ್ನು ಕೋರುತ್ತೇನೆ. ಅವರಲ್ಲಿ ಹುಸೇನ್ರಂತಹ ಮಹಾನ್ ವ್ಯಕ್ತಿ ಜನ್ಮ
ತಾಳಿದರು. ಅವರನ್ನು ಎಲ್ಲಾ ಸಮಾಜದವರೂ ಗೌರವಿಸುತ್ತಾರೆ.”
ಡಾ| ರಾಜೇಂದ್ರ ಪ್ರಸಾದ್
“ಇಮಾಮ್ ಹುಸೇನ್ರವರ ತ್ಯಾಗ ಕೇವಲ ಒಂದು ಸಮುದಾಯಕ್ಕೆ ಅಥವಾ ದೇಶಕ್ಕೆ ಸೀಮಿತವಲ್ಲ. ಅದು ಇಡೀ
ಮಾನವ ಕುಲಕ್ಕೆ ಬಾಂಧವ್ಯವಾಗಿದೆ.”
ಸ್ವಾಮಿ ಶಂಕರಾಚಾರ್ಯರು
“ಈ ಪ್ರಪಂಚದಲ್ಲಿ ಇಸ್ಲಾಂ ಹೆಸರು ಹೇಳಲು ಒಬ್ಬರೂ ಇರುತ್ತಿರಲಿಲ್ಲ. ಇಸ್ಲಾಂ ಜೀವಂತವಾಗಿ ಉಳಿದಿರಲು
ಹುಸೇನ್ರವರ ತ್ಯಾಗವೇ ಕಾರಣ.”
ಪಂಡಿತ್ ಜವಹರಲಾಲ ನೆಹರು
ಇಮಾಮ್ ಹುಸೇನ್ರವರ ತ್ಯಾಗ ಎಲ್ಲಾ ಪಂಗಡ ಮತ್ತು ಸಮುದಾಯದವರಿಗೆ ಒಂದು ಸನ್ಮಾರ್ಗದ ಉದಾಹರಣೆ.
ಥಾಮಸ್ ಕಾರ್ಲೈಲ್ (ಸ್ಕಾಟಿಷ್ ಚರಿತ್ರೆಕಾರ)
ಸತ್ಯ ಮತ್ತು ಅಸತ್ಯದ ಯುದ್ಧದಲ್ಲಿ ಸೈನ್ಯ ದೊಡ್ಡದು ಅಥವಾ ಚಿಕ್ಕದು ಎಂಬುದು ಪರಿಗಣಿಸಲಾಗುವುದಿಲ್ಲ. ದೇವರಲ್ಲಿ
ಹುಸೇನ್ ಮತ್ತು ಅವರ ಸಂಗಡಿಗರಿಗೆ ಅಪಾರವಾದ ನಂಬಿಕೆ ಇತ್ತು. ಇದೇ ನಮಗೆ ಕರ್ಬಾಲಾದ ಶೋಕಮಯ
ಘಟನೆಯಿಂದ ಸಿಗುವ ಪಾಠ. ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಹುಸೇನ್ರವರ ಗೆಲುವು ನನ್ನನ್ನು ಚಕಿತಗೊಳಿಸಿತು.
ಎಡ್ವರ್ಡ್ ಗಿಬ್ಬನ್ (ಆಂಗ್ಲ ಚರಿತ್ರಕಾರ)
“ಅಂತಹ ವಯಸ್ಸಿನಲ್ಲಿ, ಅಂತಹ ವಾತಾವರಣದಲ್ಲಿ, ಹುಸೇನ್ರವರ ಶೋಕ ಮರೆತು ಸಾವಿನ ಸನ್ನಿವೇಶ ಎಂತಹ
ಓದುಗನಲ್ಲೂ ಕರುಣೆಯನ್ನು ಜಾಗೃತಗೊಳಿಸುತ್ತದೆ.
ಚಾಲ್ರ್ಸ್ ಡಿಕೆನ್ಸ್, ಆನ್ಟೋಯಿನ್ ಬಾರ, ಡಾ| ಕೆ. ಶೆಲ್ಡ್ರೇಕ್, ಇಗ್ಲಾಜ್ ಗೋಲ್ಡ್ಜಿಹರ್, ಎಡ್ವಾರ್ಡ್ ಜಿ.
ಬ್ರೌನ್, ಸರ್.ವಿಲ್ಯಂ ಮುಯಿರ್, ರೆನಾಲ್ಡ್ ಅಲೈನ್ ನಿಕೊಲ್ಸನ್- ಮುಂತಾದ ಪ್ರಪಂಚದ ಮಹಾನ್ ಬರಹಗಾರರು
ಮತ್ತು ಚಿಂತಕರು ಹ. ಹುಸೇನ್ರವರ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬಹಳವಾಗಿ ಬರೆದಿದ್ದಾರೆ.
ಡಾ| ರಾಧಾಕೃಷ್ಣನ್
ಹುಸೇನ್ ತನ್ನ ಪ್ರಾಣ ಕೊಟ್ಟಿದ್ದು 1,300 ವರ್ಷಗಳ ಹಿಂದೆ, ಆದರೂ ಅವರ ಆತ್ಮ ಇಂದಿಗೂ ಜನರ ಹೃದಯಗಳನ್ನು
ಆಳುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.