(www.vknews.in) : ಇಂದು ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ಬಹು ದೊಡ್ಡ ಸವಾಲಾಗಿದೆ ಶೈಕ್ಷಣಿಕ ಪ್ರಗತಿ. ಇಸ್ಲಾಮ್ ಧರ್ಮವು ಕೂಡ ಶಿಕ್ಷಣಕ್ಕೆ ಬಹು ದೊಡ್ಡ ಮಹತ್ವವನ್ನು ನೀಡಿದೆ. ಇಂದು ಜಗತ್ತಿನಲ್ಲಿ ಖರೀದಿಸಲಾಗದ ವಸ್ತುವೊಂದಿದ್ದರೆ ಅದು ಶಿಕ್ಷಣ ವಾಗಿದೆ. ಓರ್ವ ವ್ಯಕ್ತಿಯ ಜೀವನ ಪದ್ದತಿಯು ಆತನ ಶಿಕ್ಷಣವನ್ನು ಅವಲಂಭಿಸಿರುತ್ತದೆ. ಶಿಕ್ಷಣ ದಿಂದ ಸುಂದರ ಸಮಾಜದ ಏಳಿಗೆ ಸಾಧ್ಯ. ಇಂದು ತಾಯಿನಾಡಿನಲ್ಲಿ ಹಲವಾರು ಶೈಕ್ಷಣಿಕ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು ಸುಂದರ ಸುಶಿಕ್ಷಿತ ನವ ಸಮುದಾಯವೊಂದರ ನಿರ್ಮಾಣಕ್ಕಾಗಿ ಪಣತೊಟ್ಟಿದೆ. ಅದಾಗಿದೆ ಇಂದು ದಾರುಲ್ ಹಸನಿಯಾ ಎಜುಕೇಶನ್ ಸೆಂಟರ್ ಸಾಲ್ಮರ ಸಂಸ್ಥೆಯ ಮುಖ್ಯ ಗುರಿ. ಇಂತಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಮೇಲಿನ ಕರ್ತವ್ಯವು ಕೂಡ ಆಗಿದೆ. ಪವಿತ್ರ ಖುರ್ಆನ್ ಕಂಠಪಾಠದೊಂದಿಗೆ ಮತ ಭೌದ್ಧಿಕ ವಿದ್ಯಾಭ್ಯಾಸ ವನ್ನು ನೀಡುತ್ತಿರುವ ಈ ಸಂಸ್ಥೆಯು ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ದಾರುಲ್ ಹಸನಿಯಾ ಎಜುಕೇಶನ್ ಸೆಂಟರ್ ಸಾಲ್ಮರ ಯು ಎ ಇ ಸಮಿತಿ ನಡೆಸಿದ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು.
ದುಬೈಯಲ್ಲಿ ನಡೆದ ಮೀಲಾದ್ ಸಮಾವೇಶದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿ ಸಂಸ್ಥೆಯ ಪ್ರಗತಿಯಲ್ಲಿ ಅನಿವಾಸಿ ದೀನೀ ಸ್ನೇಹಿಗಳು ಕೈಜೋಡಿಸುವಂತೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಶಾಹುಲ್ ಬಿಸಿರೋಡ್ ರವರು ಖಿರಾಅತ್ ಪಠಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ದಾರುಲ್ ಹಸನಿಯಾ ಸಾಲ್ಮರ ದುಬೈ ಸಮಿತಿ ಅಧ್ಯಕ್ಷರಾದ ಆರಿಫ್ ಕೂರ್ನಡ್ಕರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಥಿತಿಗಳನ್ನು ದಾರುಲ್ ಹಾಸನಿಯಾ ಹಿತೈಷಿಗಳನ್ನು ಸ್ವಾಗತಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಸಭಾ ಕಾರ್ಯಕ್ರಮವನ್ನು ರಫೀಕ್ ಹುದವಿ ಕೊಲಾರಿಯವರು ಉದ್ಘಾಟಿಸಿ ಮಾತನಾಡುತ್ತಾ ತಾಯಿನಾಡಿನಲ್ಲಿ ಇಂದು ಹಲವಾರು ಶೈಕ್ಷಣಿಕ ಕೇಂದ್ರಗಳಿದ್ದು , ಮತ ಭೌದ್ಧಿಕ ವಿಧ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ. ಹಲವಾರು ವರ್ಷಗಳ ಹಿಂದೆ ಭೌದ್ಧಿಕ ವಿದ್ಯಾಸಕ್ಕೆ ಹೆಚ್ಚಿನ ಮಹತ್ವ ವನ್ನು ನೀಡುತ್ತಿದ್ದ ಪೋಷಕರು ಇಂದು ಧಾರ್ಮಿಕ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಂದಿನ ಯುವ ಸಮೂಹವು ಧಾರ್ಮಿಕ ಕಟ್ಟಲೆ ಗಳನ್ನೂ ಮೀರಿ ಅನಿಸ್ಲಾಮಿಕ , ಚಟುವಟಿಕೆಗಳತ್ತ ಆಕರ್ಷಿಸುತ್ತಿರುವುದು ನಮ್ಮ ಸಮುದಾಯಕ್ಕೆ ಬಹು ದೊಡ್ಡ ಸವಾಲಾಗಿದೆ. ಆದ್ದರಿಂದ ಇಂತಹುಗಳನ್ನು ಸಂಪೂರ್ಣವಾಗಿ ಸಮಾಜದಿಂದ ಕಿತ್ತೊಗೆಯಲು ಮತ ಭೌದ್ಧಿಕ ಸಮನ್ವಯ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು , ತಮ್ಮ ಸಹಕಾರ ದಾರುಲ್ ಹಸನಿಯಾದಂತಹ ಸಂಸ್ಥೆಗಳೊಂದಿಗೆ ಸದಾ ಮುಂದುವರಿಯಲಿ ಎಂದು ವಿನಂತಿಸಿಕೊಂಡರು.
ನಂತರ ಸಂಸ್ಥೆಯ ಕುರಿತು , ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ರೀತಿ ನೀತಿ, ಆಡಳಿತ ಸಮಿತಿ , ಹಾಗು ಸಂಸ್ಥೆಗೆ ಬೆನ್ನೆಲುಬಾಗಿ ಸಹಕರಿಸುತ್ತಾ ಬಂದಿರುವ ದಾರುಲ್ ಹಾಸನಿಯಾ ಯು ಎ ಇ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ಬದ್ರುದ್ದೀನ್ ಹೆಂತಾರ್ ರವರು ಸಾಂಧರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅನೀಸ್ ಪುರುಷರಕಟ್ಟೆಯವರು ಮಾತನಾಡಿ, ಸಾಲ್ಮರ ಪ್ರದೇಶದಲ್ಲಿ ಅತೀ ಚಿಕ್ಕ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ಉತ್ತಮ ಆಡಳಿತ ಸಮಿತಿಯೊಂದಿಗೆ ಹಲವಾರು ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಇದೀಗ ಸಂಸ್ಥೆಗೆ ಸ್ಥಳವೊಂದನ್ನು ಖರೀದಿಸಿದ್ದು ಮುಂದೆ ಕಟ್ಟಡ ಕಾಮಗಾರಿ ಗಳನ್ನೊಳಗೊಂಡು ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದ್ದು ದೀನೀ ಸ್ನೇಹಿಗಳು ಸಮಿತಿಯೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡರು.
ಸಭಾ ಕಾರ್ಯಕ್ರಮದಲ್ಲಿ ಝಕರಿಯಾ ದಾರಿಮಿ ಉಸ್ತಾದ್ ರವರು ಪ್ರವಾದಿ ಪ್ರೇಮ, ಪ್ರವಾದಿಯವರ ಜೀವನ ಚರಿತ್ರೆ ,ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಷರೀಫ್ ಕಾವು , ಹಮೀದ್ ಮುಸ್ಲಿಯಾರ್ ನೀರ್ಕಜೆ ,ಶಂಸುದ್ದೀನ್ ಸೂರಲ್ಪಾಡಿ , ನಿಝರ್ ಪರ್ಲಡ್ಕ , ಶಾಕಿರ್ ಕೂರ್ನಡ್ಕ ,ಅನೀಸ್ ಪುರುಷರಕಟ್ಟೆ , ಬದರುಲ್ ಮುನೀರ್ ಫೈಝಿ , ಇಸಾಕ್ ಮಖ್ದೂಮಿ ಬೆಳ್ಳಾರೆ, ಇಸಾಕ್ ಹಾಜಿ ತೋಡಾರ್ , ಇಸಾಕ್ ಕೌಸರಿ ಪಲೊಟ್ಟು , ನವಾಝ್ ಬಿ ಸಿ ರೋಡ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು .
ಕಾರ್ಯಕ್ರಮದ ಪ್ರಾರಂಭದಲ್ಲಿ ಮೌಲೂದ್ ಮಜ್ಲಿಸ್ ಹಾಗು ಸಫ್ವಾನ್ ಮತ್ತು ತಂಡದವರಿಂದ ಆಕರ್ಷಣೀಯ ಬುರ್ಧಾ ಆಲಾಪನೆ ನಡೆಯಿತು.ಇದೆ ಸಂಧರ್ಭದಲ್ಲಿ ದಾರುಲ್ ಹಸನಿಯಾ ಸಂಸ್ಥೆಯ ವತಿಯಿಂದ ರಫೀಕ್ ಹುದವಿ ಕೋಲಾರಿಯವರನ್ನು ಸನ್ಮಾನಿಸಲಾಯಿತು. ಹಫೀಝ್ ಉಪ್ಪಿನಂಗಡಿ ಹಾಗು ಜಾಬೀರ್ ಬಪ್ಪಲಿಗೆಯವರು ಕಾರ್ಯಕ್ರಮ ನಿರೂಪಿಸಿ ಅಸೀಫ್ ಮರೀಲ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.