ಬಂಟ್ವಾಳ (www.vknews.in) : ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಿಂದ ನ.23ರಂದು ನಾಪತ್ತೆಯಾಗಿದ್ದ ಯುವ ಜೋಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಜಿಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರಿ ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಪುತ್ರ ಮುಹಮ್ಮದ್ ಸಿನಾನ್ (23) ಮನೆಯಿಂದ ಕಾಣೆಯಾಗಿದ್ದರು.
ಇವರಿಬ್ಬರು ನೆರೆಕರೆಯ ನಿವಾಸಿಗಳಾಗಿದ್ದರು. ನ.26ರಂದು ಎರಡು ಮನೆಯವರ ಪೋಷಕರು ಬಂಟ್ವಾಳ ನಗರ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಬಳಿಕ ಠಾಣಾಧಿಕಾರಿ ಎಸ್ಸೈ ರಾಮಕೃಷ್ಣ ತಂಡವು ನಾಪತ್ತೆಯಾದ ಯುವ ಜೋಡಿಯನ್ನು ಕೇರಳ ರಾಜ್ಯದ ಕಾಂಞಗಾಡ್ ನಲ್ಲಿ ಪತ್ತೆ ಹಚ್ಚಿದ್ದು, ನ.28ರಂದು ಅವರನ್ನು ಬಂಟ್ವಾಳ ನಗರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಯುವಕ ಮತ್ತು ಯುವತಿ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಯುವತಿಯನ್ನು ಯುವಕನ ಜೊತೆಗೆ ಕಳುಹಿಸಿಕೊಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.