ಬೆಳ್ತಂಗಡಿ (www.vknews.in) : “ಹೃದಯ ಹಾಗೂ ಮನಸ್ಸಿನಿಂದ ನಾವೆಲ್ಲ ಒಂದಾಗೋಣ, ಯಾರೂ ನಮ್ಮನ್ನು ಮುರಿಯಲು ಬಿಡದಿರೋಣ, ಆಗ ಮಾತ್ರ ನಾವು ಸ್ವಾತಂತ್ರ್ಯರು ಎಂದು ಅನಿಸಿಕೊಳ್ಳುವುದು”. ತತ್ವದ ಅಡಿಯಲ್ಲಿ ಮನ್ ಶರ್ ವಿದ್ಯಾ ಸಂಸ್ಥೆ ಗೇರುಕಟ್ಟೆ ಇಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳ ಪರೇಡ್ ಮುಖೇನ ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಆದ ಹೈದರ್ ಮರ್ದಾಳ ಇವರು ಧ್ವಜಾರೋಹಣವನ್ನು ನೆರವೇರಿಸಿ, ಭಾರತ ಗಣರಾಜ್ಯದ ಸಂಪೂರ್ಣ ಸವಿವರವನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೌಸರ್ ಪಲ್ಲಾದೆ ಇವರು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಕಾರ್ಯವನ್ನು ನಿರ್ವಹಿಸಿದರು. ಹಾಗೆಯೇ ಪುಟಾಣಿ ಮಕ್ಕಳಿಂದ ಕಲರವಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಉಷಾ ನೆರವೇರಿಸಿದರೆ, ವಂದನಾರ್ಪಣಾ ಭಾಷಣವನ್ನು ಕೌಸರ್ ಪಲ್ಲಾದೆ ನಿರ್ವಹಿಸಿದರು. ಹಾಗೆಯೇ ಈ ಕಾರ್ಯಕ್ರಮದುದ್ದಕ್ಕೂ ಪಿಯುಸಿ ಉಪನ್ಯಾಸಕರಾದ ಹಂಸಶ್ರೀ ಬಿ.ಆರ್ ನಿರೂಪಣಾ ಕಾರ್ಯವನ್ನು ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.