ವಿಟ್ಲ (www.vknews.in) : ಸಂವಿಧಾನವನ್ನು ಗೌರವಿಸುವುದರ ಮೂಲಕ ಗಣರಾಜ್ಯ ದಿನವನ್ನು ಅರ್ಥಪೂರ್ಣಗೊಳಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಭಾರ ಮುಖ್ಯ್ಯೋಪಾಧ್ಯಯನಿ ಸೆಕಿನಾ ರವರು ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಡಿತ್ತಡ್ಕದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಿಕ್ಷೆಯಿಂದ ಶಿಕ್ಷಣವಲ್ಲ ರಕ್ಷೆಯಿಂದ ಶಿಕ್ಷಣ ಮಾತಂತೆ ಬಂಡಿತ್ತಡ್ಕ ಶಾಲೆಯಲ್ಲಿ ಗಣರಾಜ್ಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರವನ್ನು ಸಂಭ್ರಮದಿಂದ ನಡೆಸಲಾಯಿತು. ಕನ್ನಡ ಶಾಲೆ ಉಳಿಯಬೇಕಾದರೆ ಪೋಷಕರೆಲ್ಲರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಹಾಗೂ ಸರ್ಕಾರಿ ಶಾಲೆಯು ಉತ್ತಮ ಶಿಕ್ಷಣವನ್ನು ನೀಡುತ್ತಿವೆ ಎಂದು ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್ ರವರು ಹೇಳಿದರು. ಕಾರ್ಯಕ್ರಮದಲ್ಲಿ ಕನ್ಯಾನ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್ , ಗ್ರಾಮ ಪಂಚಾಯಿತಿಯ ಸದಸ್ಯರಾದ ಮೊಯ್ದು ಕುಂಞಿ .ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಮರುನ್ನೀಸ ಹಾಗೂ ಸದಸ್ಯರು, ಆಶಾ ಕಾರ್ಯಕರ್ತರು , ಹಳೆ ವಿದ್ಯಾರ್ಥಿಗಳು, ಊರದಾನಿಗಳು, ಹಾಗೂ ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
ಸದರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿ ಕುಮಾರಿ ಹರ್ಷಿತ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಪ್ರಭಾರ ಮುಖ್ಯ ಶಿಕ್ಷಕಿಯಾದ ಸೇಕಿನ ಮೇಡಂ ಸ್ವಾಗತಿಸಿದರು. ಸಹ ಶಿಕ್ಷಕರಾದ ರಾಜೇಂದ್ರ ವೈ ಅವರು ನಿರೂಪಣೆಯನ್ನು ಮಾಡಿದರು . ಶಾರದ ಮೇಡಂ ವಂದನಾರ್ಪಣೆ ಮಾಡಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.