ಉಡುಪಿ (www.vknews.in) : ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಶಂಕರಪುರ ಸಮೀಪದ ಸರ್ಕಾರಿಗುಡ್ಡೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಸರ್ಕಾರಿಗುಡ್ಡೆ ನಿವಾಸಿ ಕಾರ್ತಿಕ್ ಪೂಜಾರಿ (18) ಮೃತಪಟ್ಟ ಯುವಕ.
ಕಾಪು ಹಾಗೂ ಕಟಪಾಡಿ ವಲಯದ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘದ ಅಧ್ಯಕ್ಷ, ಸಮಾಜಸೇವಕ ಚಂದ್ರ ಪೂಜಾರಿ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶಾಲಿನಿಚಂದ್ರ ದಂಪತಿಗಳ ಪುತ್ರರಾದ ಕಾರ್ತಿಕ್ ಅವರು ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಳಿಗ್ಗೆ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.