(www.vknews. in) ;ಉಳ್ಳಾಲ ಕೋಟೆಕಾರ್ ಪ್ರವಾದಿ ಇಬ್ರಾಹಿಂ (ರ ಅ) ಅವರ ತ್ಯಾಗ, ಬಲಿದಾನದ ದ್ಯೋತಕವಾಗಿ ಬಕ್ರೀದ್ (ಈದುಲ್ ಅಝ್ಹಾ) ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್, ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್, ತಲಪಾಡಿ ಬಿಲಾಲ್ ಜುಮಾ ಮಸ್ಜಿದ್, ಅಜ್ಜಿನಡ್ಕ ಬದ್ರಿಯಾ ಜುಮಾ ಮಸ್ಜಿದ್, ಕೆ ಸಿ ನಗರ ಅಲ್ ಹುಧಾ ಜುಮಾ ಮಸ್ಜಿದ್, ಎಸ್ ಉಚ್ಚಿಲ 407 ಜುಮಾ ಮಸ್ಜಿದ್, ಹಾಗೂ ಪರಿಸರಧ ಹಲವಾರು ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಜ್, ಆಯಾ ಮಸೀದಿ ಧರ್ಮ ಗುರುಗಳಿಂದ ಈದ್ ಸಂದೇಶ ಮತ್ತು ಪ್ರವಚನ, ಪರಸ್ಪರ ಈದ್ ಶುಭಾಶಯ ವಿನಿಮಯ ನಡೆಯಿತು.
ಈದ್ನ ಸಂದೇಶ ನೀಡಲಾಯಿತು. ನಮಾಝ್ನ ಬಳಿಕ ಎಲ್ಲರೂ ಹಸ್ತಲಾಘವ, ಆಲಿಂಗನದ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಮನೆಗಳಲ್ಲೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿಯರು ಕಿರಿಯರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.