ಬಂಟ್ವಾಳ (www.vknews. in) : ಚಾಲಕನ ನಿಯಂತ್ರಣ ಮೀರಿದ ಬೈಕ್ ರಸ್ತೆಗೆ ಬಿದ್ದು ಸಹಸವಾರಿಣಿ ತಾಯಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಸವಾರ ಮಗ ಸಣ್ಣ ಪುಟ್ಟ ಗ್ರಾಯಗಳೊಂದಿಗೆ ಪಾರಾದ ಘಟನೆ ನಾವೂರು ಗ್ರಾಮದ ಫರ್ಲಾ ಚರ್ಚ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.
ಗಾಯಾಳು ಸಹಸವಾರಿಣಿಯನ್ನು ಹರಿಣಾಕ್ಷಿ ಎಂದು ಹೆಸರಿಸಲಾಗಿದ್ದು, ಪಾರಾದ ಚಾಲಕನನ್ನು ಅವರ ಪುತ್ರ ಕಿರಣ್ ಎಂದು ಹೆಸರಿಸಲಾಗಿದೆ. ಕಿರಣ್ ತನ್ನ ತಾಯಿಯನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ತೆರಳುತ್ತಿದ್ದ ವೇಳೆ ಫರ್ಲಾ ಚರ್ಚ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಬಿದ್ದಿದೆ. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ಸಹಸವಾರಿಣಿ ಹರಿಣಾಕ್ಷಿ ಅವರಿಗೆ ಗಾಯವಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ನವೀನ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.