(www.vknews. in) ; “ತನ್ಮೀಯ ಆನ್ಲೈನ್ ವುಮೆನ್ಸ್ ಇಸ್ಲಾಮಿಕ್ ಕೋರ್ಸ್” ಜೂನ್ 26 ಸಮಸ್ತ ಸ್ಥಾಪಕ ದಿನ ಪೋಸ್ಟರ್ ಸ್ಪರ್ಧೆಗೆ ಆಹ್ವಾನ
ಸ್ಪರ್ಧಾ ನಿಯಮಗಳು ಇಂತಿವೆ. •ಸ್ಪರ್ಧೆಯು ಮಹಿಳೆಯರಿಗೆ ಮಾತ್ರ ಸೀಮಿತವಾಗಿರುತ್ತದೆ… • ಕೋರ್ಸ್ನ ಹೊರಗಿನ ಮಹಿಳೆಯರು ಸಹ ಭಾಗವಹಿಸಬಹುದು.. •(ಮಲಯಾಳಂ, ಕನ್ನಡ, ಇಂಗ್ಲಿಷ್, ಅರೇಬಿಕ್) ಭಾಷೆಗಳಲ್ಲಿ,ನಿಮಗೆ ಪೋಸ್ಟರ್ ಕಳುಹಿಸಬಹುದು.. • Views ಮತ್ತು share ಗಳನ್ನು ಅಂಕಗಳಲ್ಲಿ ಪರಿಗಣಿಸಲಾಗುತ್ತದೆ.. • ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ.. •ಪೋಸ್ಟರಿನ ಕೊನೆಯಲ್ಲಿ ತನ್ಮೀಯ ಆನ್ಲೈನ್ ವುಮೆನ್ಸ್ ಶರೀಯತ್ ಕೋರ್ಸ್ ಎಂದು ಬರೆಯಬೇಕಾಗುತ್ತದೆ.. •26 ಜೂನ್ 8 ಗಂಟೆಯ ವರೆಗೂ ಕಳುಹಿಸಬಹುದು.. •917902930532 ಎಂಬ ನಂಬರಿನಲ್ಲಿ ವಾಟ್ಸಪ್ ಮುಖಾಂತರ ತಮ್ಮ ಪೋಸ್ಟರ್ ಗಳನ್ನು ಕಳುಹಿಸಿ… •ಸಂಶಯಗಳನ್ನು ಈ ನಂಬರಿನಲ್ಲಿ ನಿವಾರಿಸಬಹುದು…
“ಈದ್ ಮಿಲಾದ್ ಸ್ಪರ್ಧಾ ವಿಶೇಷ” ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ *”ಈದ್ ನಿಲಾವ್”* ಎಂಬ ಹೆಸರಿನಲ್ಲಿ ಈದ್ ವಿಶೇಷ ಕಾರ್ಯಕ್ರಮ ದಿನಾಂಕ 16.6.2024 ರಂದು ವಾಟ್ಸಾಪ್ ನಲ್ಲಿ ವಾಯ್ಸ್ ಕಳುಹಿಸುವುದರ ಮೂಲಕ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಕುರಿತಾದ ಭಾಷಣ ಹಾಗೂ ಹಾಡು ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ತನ್ಮೀಯ ಆನ್ಲೈನ್ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಭಾಷಣ ಸ್ಪರ್ಧೆಯಲ್ಲಿ ಮುನೀರಾ ಟಿ.ಎಂ ಕೊಡಗು ಪ್ರಥಮ ಸ್ಥಾನ ಇರ್ಶಾನ ಸುಳ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಾಡು ಸ್ಪರ್ಧೆಯಲ್ಲಿ ಮಾಶಿತಾ ಮಿಶ್ಕ್ ಪಟ್ಟಿಕಾಡ್ ಪ್ರಥಮ, ಫಾತಿಮಾ ಸ್ವಾಲಿಹ ಹಾದಿಯ ತೆನ್ನಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳು ವಿಜೇತರಿಗೆ ಅಭಿನಂದನೆಯನ್ನು ತನ್ಮೀಯ ಆಡಳಿತ ಮಂಡಳಿ ತಿಳಿಸಿದೆ.ಸಮಸ್ತ ಸ್ಥಾಪನೆ ದಿನವಾದ ಜೂನ್ 26 ರಂದು ವಿಶೇಷ ಪೋಸ್ಟರ್ ಡಿಸೈನ್ ಅನಾವರಣಗೊಳ್ಳಲಿದೆ. ಈದ್ ನಿಲಾವ್ ಮತ್ತು ಪೋಸ್ಟರ್ ಡಿಸೈನ್ ವಿಜೇತರಿಗೆ ಬಹುಮಾನ ಈ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ತನ್ಮೀಯ ಡೈರೆಕ್ಟರ್ ಆದಂ ದಾರಿಮಿ ತೆಕ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.