ಬಂಟ್ವಾಳ (www.vknews. in): ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು ಜಾನುವಾರು ಸಹಿತ ಮೂವರನ್ನು ದಸ್ತಗಿರಿ ಮಾಡಿದ ಘಟನೆ ಕನ್ಯಾನ ಗ್ರಾಮದ ಶಿವಶಕ್ತಿ ಬಾರ್ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಬಂಧಿತ ಆರೋಪಿಗಳನ್ನು ಪಿಕಪ್ ಚಾಲಕ ಮೊಹಮ್ಮದ್, ಪುರುಷೋತ್ತಮ ಹಾಗೂ ಯೋಗೀಶ್ ಎಂದು ಹೆಸರಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ್ ನೇತೃತ್ವದ ಪೊಲೀಸರು ಬುಧವಾರ ಸಂಜೆ ಕನ್ಯಾನ ಗ್ರಾಮದ ಕನ್ಯಾನ ಶಿವಶಕ್ತಿ ಬಾರ್ ಬಳಿ ದೇಲಂತಬೆಟ್ಟು ಕಡೆಯಿಂದ ಸಂಶಯಾಸ್ಪದವಾಗಿ ಬಂದ ಮಹೇಂದ್ರ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಚಾಲಕ ಮೊಹಮ್ಮದ್ ಎಂಬಾತ ಪುರುಷೋತ್ತಮ್ಮ ಹಾಗೂ ಯೋಗೀಶ್ ಎಂಬವರೊಂದಿಗೆ ಸೇರಿ ಹೋರಿಯೊಂದನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಧೆಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ, ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಮೂವರು ಆರೋಪಿಗಳನ್ನು, ಕೃತ್ಯಕ್ಕೆ ಬಳಸಿದ ವಾಹನ ಮತ್ತು ಜಾನುವಾರಿನೊಂದಿಗೆ ವಶಕ್ಕೆ ಪಡೆದ ವಿಟ್ಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.