(www.vknews. in) ; ಜ್ಞಾನ ಭಾರತಿ ಆಂಗ್ಲಮಾದ್ಯಮ ಶಾಲೆ ಇಳಂತಿಳ ವಿದ್ಯಾನಗರ ಉಪ್ಪಿನಂಗಡಿ : ಇಲ್ಲಿ “say” No to drugs” ಕಾರ್ಯ ಕ್ರಮ ನಡೆಯಿತು. ಕಾನೂನು ಬಾಹಿರ ಡ್ರಗ್ಸ್ ಬಗ್ಗೆ ಮಕ್ಕಳ ಜಾಗ್ರತಿ ಮೂಡಿಸುವ ಕಾರ್ಯ ಕ್ರಮ ನಡೆಯಿತು. ಮಕ್ಕಳು ಭಾಷಣ ಮತ್ತು ಡ್ರಗ್ಸ್ ವಿರೋಧಿ ಘೊಷವಾಕ್ಯದ ಮೂಲಕ ಗಮನ ಸೆಳೆದರು. ಮಕ್ಕಳಿಗೆ ಡ್ರಗ್ಸ್ ವಿರೊದಿ ಅಭಿಯಾನದ ಮೂಲಕ ಎಚ್ಚರಿಕೆಯ ನೀಡಿದ ಸಂಚಾಲಕರಾದ ರವೂಫ್ ಯು ಟಿ ಅದು ಜೀವನವನ್ನು ನಾಶಗೊಳಿಸುತ್ತದೆ ಎಂದು ಮಕ್ಕಳಿಗೆ ವಿವರಿಸದರು
ಶಾಲೆಯ ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಕಾನೂನು ಬಾಹಿರ ಡ್ರಗ್ಸ್ ವಿರುದ್ಧ ಹೋರಾಟ ಮಾಡಿ ಸಮಾಜದಲ್ಲಿ ಇರುವ ಈ ರೀತಿಯ ಪಿಡುಗುಗಳನ್ನು ಹೋಗಲಾಡಿಸಬೇಕು ಅದರಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು .ನಿಮ್ಮ ಮನೆ ಶಾಲೆ ಪರಿಸರದಲ್ಲಿ ಜನರಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಗಣಿತ ಶಿಕ್ಷಕಿ ಪಾತಿಮ ಡ್ರಗ್ಸ್ ವಿರೊಧಿ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಇತರ ಸಹ ಶಿಕ್ಷಕರು ಉ಼ಷಾ ಅರುಣಾ ನೇತ್ರ ಮತ್ತು ಶಮೀಮಾ ಕಾರ್ಯ ಕ್ರಮದಲ್ಲಿ ಇದ್ದುಎಲ್ಲಾ ಮಕ್ಕಳಿಗೆ ಪ್ರೊತ್ಸಾಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.