(www.vknews.in) : ಸುಳ್ಯದ ಶಿಕ್ಷಣ ಪ್ರೇಮಿಗಳ ಬಹು ವರ್ಷಗಳ ಅಭಿಲಾಷೆಗಳಲ್ಲಿ ಒಂದಾದ ಪೋಷಕರು ಹಾಗು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಮಾಹಿತಿ ನೀಡುವ ಕೇಂದ್ರ ಆಗಸ್ಟ್ 11, ಭಾನುವಾರ ಬೆಳಿಗ್ಗೆ 9.15ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಇಂಷಾ ಅಲ್ಲಾಹ್.
ಕೆಲವು ಸಮಾನ ಮನಸ್ಕ ವೃತ್ತಿಪರ ಯುವಕರ ತಂಡ ಕಳೆದ 4 ವರ್ಷದಿಂದ ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗೃತಿಗೊಳಿಸುವ ಮತ್ತು ವಿದ್ಯಾರ್ಥಿಗಳಿಗೆ ತರಬೇತು ನೀಡುವ ಕಾರ್ಯವನ್ನು nLight ಅಕೆಡಮಿ ಮೂಲಕ ನಡೆಸಿಕೊಂಡು ಬಂದಿದೆ. ಆಗಸ್ಟ್ 11 ರಂದು ನೋಂದಾವಣಿ ಹೊಂದಿದ nLight ಎಜುಕೇಷನಲ್ ಸರ್ವಿಸಸ್ ನ ಕಚೇರಿಯ ಉದ್ಘಾಟನೆ, ಸಂಸ್ಥೆಯ ಲೋಕಾರ್ಪಣೆ ಹಾಗು ಮಾಹಿತಿ ಕಾರ್ಯಾಗಾರ ಸುಳ್ಯ ಗಾಂಧಿನಗರದ ಪಿ.ಎ ಆರ್ಕೆಡ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಮುಖ ಸದಾತುಗಳು, ಉಲೇಮಾಗಳು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ನಾಯಕರು ಹಾಗು ಶಿಕ್ಷಣ ಕ್ಷೇತ್ರದ ಸಾಧಕರು ಪಾಲ್ಗೊಳ್ಳಲಿದ್ದಾರೆ. ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭೆಗಳಿಗೆ ಪುರಸ್ಕಾರ, ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ, ಸಂವಾದ ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.