ಹರೇಕಳ (www.vknews.in) ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ದೇರಳಕಟ್ಟೆ ಬ್ಲಾಕ್ ಸಮಿತಿಯ ಆಂತರಿಕ ಚುಣಾವನೆ ದಿನಾಂಕ 09/08/2024 ಶುಕ್ರವಾರ ಹರೇಕಳ ಗ್ರಾಮ ಪಂಚಾಯತ್ ಮಹಾತ್ಮಗಾಂಧಿ ಸಭಾಂಗಣದಲ್ಲಿ ಬ್ಲಾಕ್ ಅಧ್ಯಕ್ಷರಾದ MK ಕಮರುದ್ದೀನ್ ಮಲಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ರವರು ಸರ್ವರಿಗೂ ಸ್ವಾಗತಕೋರಿ,ಬ್ಲಾಕ್ ಸಮಿತಿಯ ಪೂರ್ಣಾವಧಿಯ ವರದಿಯನ್ನು ರಹ್ಮಾನ್ ಹಾಗೂ ಸಿರಾಜ್ ಅರ್ಕಾಣರವರು ಮಂಡಿಸಿದರು.ಚುಣಾವನಾ ಮೇಲುಸ್ತುವಾರಿ (R O) ಆಗಿ ಆಗಮಿಸಿದ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಅಡ್ಡೂರ್ ರವರು ನಾಯಕತ್ವ,ಜವಾಬ್ದಾರಿ ಹಾಗೂ ಅದರ ನಿರ್ವಹಣೆಯ ಬಗ್ಗೆ ನೂತನ ನಾಯಕರನ್ನುದ್ದೇಶಿಸಿ ಮಾತನಾಡಿದರು.
“ಮುನ್ನೂರು,ಅಂಬ್ಲಮೊಗರು,ಹರೇಕಳ,ಕೊಣಾಜೆ,ಬೆಲ್ಮ,ಪಾವೂರು,ಬೋಳಿಯಾರ್,ಪಜೀರ್,ಸಜಿಪ ನಡು” ಗ್ರಾಮ ಸಮಿತಿಯ ಮುಖ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ದೇರಳಕಟ್ಟೆ ಬ್ಲಾಕ್ ಸಮಿತಿಯ ಚುಣಾವನೆ ನಡೆಯಿತು.ದೇರಳಕಟ್ಟೆ ಬ್ಲಾಕ್ ನೂತನ ಅಧ್ಯಕ್ಷರಾಗಿ MK ಕಮರುದ್ದೀನ್ ಮಲಾರ್,ಉಪಾಧ್ಯಕ್ಷರಾಗಿ ನವಾಝ್ ಸಜಿಪ,ಕಾರ್ಯದರ್ಶಿಯಾಗಿ ಝೈನುದ್ದೀನ್ ಹರೇಕಳ,ಜೊತೆ ಕಾರ್ಯದರ್ಶಿಯಾಗಿ ಶಮೀರ್ ಟಿಪ್ಪುನಗರ, ಕೋಶಾಧಿಕಾರಿಯಾಗಿ ಜಾಫರ್ ಪಾನೇಳ ಆಯ್ಕೆಯಾದರು,ನೂತನ ಸಮಿತಿಯ ಸದಸ್ಯರುಗಳಾಗಿ ರಹ್ಮಾನ್ ಬೋಳಿಯಾರ್,ನವಾಝ್ ಕುತ್ತಾರ್,ಅಝೀಝ್,ಇಬ್ರಾಹಿಮ್ ಹರೇಕಳ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಮರುದ್ದೀನ್ ರವರು ನಾಯಕರನ್ನುದ್ದೇಶಿಸಿ ಹಿತವಚನ ನೀಡಿದರು.ಕಾರ್ಯದರ್ಶಿ ಝೈನುದ್ದೀನ್ ಹರೇಕಳ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.