ಬಂಟ್ವಾಳ, ಪಾಂಡವರಕಲ್ಲು (www.vknews.in) ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ 78 ನೇ ಸ್ವಾತಂತ್ರ್ಯ ದಿನದ ಭಾಗವಾಗಿ ಧ್ವಜಾಹೋಹಣ ಕಾರ್ಯಕ್ರಮವು ಪಾಂಡವರಕಲ್ಲಿನ ಕೊಮಿನಡ್ಕದಲ್ಲಿ ನಡೆಯಿತು.
ಕಾರ್ಯಕ್ರದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್ ಡಿ ಪಿ ಐ ಸರಪಾಡಿ ಬ್ಲಾಕ್ ಇದರ ಜೊತೆ ಕಾರ್ಯದರ್ಶಿ ಮಹಮ್ಮದ್ ಶಾಕಿರ್ ಮಾತನಾಡಿ ” ದೇಶವು ಬ್ರಿಟಿಷರ ಕಪಿಮುಷ್ಟಿಯಿಂದ ಸ್ವಾತಂತ್ರ್ಯಗೊಂಡ ಹಾಗೆ ಇಲ್ಲಿರುವ ಕೆಲವು ಕೋಮುವಾದಿ ದುಷ್ಟಶಕ್ತಿಗಳ ವಿರುದ್ಧ ಇನ್ನೂ ಭಾರತ ಸ್ವಾತಂತ್ರ್ಯಗೊಳ್ಳ ಬೇಕಾಗಿದೆ” ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಮಾತುಗಳನ್ನಾಡಿದ ಬಡಗ ಕಜೆಕಾರು ಗ್ರಾಮ ಪಂಚಾಯತ್ ಇದರ ಸದಸ್ಯರಾದ ಅತಾವುಲ್ಲಾ, ” ದೇಶದ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಲ್ಲಿರುವ ನೈಜ ಭಾರತೀಯರು ಪಕ್ಷ, ಜಾತಿ , ಆಶಯ ಎಲ್ಲವನ್ನು ಬದಿಗಿಟ್ಟು ಸನ್ನದ್ಧರಾಗಬೇಕು” ಎಂಬ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂದೇಶ ಭಾಷಣವನ್ನು ಮಾಡಿದ ಹಾಫಿಳ್ ಮುಸ್ತಫ ಉಸ್ತಾದ್ ಭಾರತ ದೇಶಕ್ಕೆ ಮುಸಲ್ಮಾನರ ಕೊಡುಗೆಯ ಬಗ್ಗೆ ಸವಿಸ್ತಾರ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ SDPI ಸರಪಾಡಿ ಬ್ಲಾಕ್ ಕೋಶಾಧಿಕಾರಿಯಾದ ಮಹಮ್ಮದ್ ಹನೀಫ್ , SSF ಪಾಂಡವರಕಲ್ಲು ಶಾಖೆಯ ಅಧ್ಯಕ್ಷರಾದ ಸಂಶುದ್ದೀನ್ ಪಾದೆ, NIWA ಗಲ್ಫ್ ಕಮಿಟಿ ಪಾಂಡವರಕಲ್ಲು ಇದರ ಮಾಜಿ ಅಧ್ಯಕ್ಷರಾದ ಆದಂ ಬೊಟ್ಟು, NIYA ಪಾಂಡವರಕಲ್ಲು ಇದರ ಅಧ್ಯಕ್ಷರಾದ ರಝಾಕ್ ಚಾನ್ಸ್ , NIYA ಪಾಂಡವರಕಲ್ಲು ಇದರ ಮಾಜಿ ಅಧ್ಯಕ್ಷರಾದ ಮುರ್ಶಿದ್ ಕುದುರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು SDPI ಪಾಂಡವರಕಲ್ಲು ಬ್ರಾಂಚ್ ಕಾರ್ಯದರ್ಶಿ ಇಮ್ರಾನ್ ಸ್ವಾಗತಿಸಿ , ನಿರೂಪಿಸಿ, ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.