(www.vknews. in) ; ಅಕ್ಕರಂಗಡಿ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ದೇಶದ 78ನೇ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಕ್ಕರಂಗಡಿ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಗೂ ಉಪಾಧ್ಯಕ್ಷರಾದ ಬಶೀರುದ್ದೀನ್ ಅನ್ವರ್ ದ್ವಜಾರೋಹಣ ಮಾಡಿದರು.
ಖತೀಬರಾದ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರ ಪ್ರಾರ್ಥನೆ ನಿರ್ವಹಿಸಿದರು. ಹಿದಾಯತುಲ್ ಇಸ್ಲಾಂ ಮದ್ರಸ ಸ್ವದರ್ ಉಸ್ತಾದ್ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರು. ಸ್ವಾತಂತ್ರೋತ್ಸವದ ಪ್ರಯುಕ್ತ SKSBV ವತಿಯಿಂದ ನಡೆಸಲಾದ ಬಾವುಟ ರಚನಾ ಸ್ಪರ್ಧೆ, ರಾಷ್ಟ್ರ ಗೀತೆ ಆಲಾಪಣೆ ಮತ್ತು ಕೊಲೇಶ್ ನಿರ್ಮಾಣ ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು. ಅಬ್ದುಲ್ ಲತೀಫ್ ಅಝ್ಹರಿ, ಅಬ್ಬೊನಾಕ ಹಾಗೂ ಇನ್ನಿತರ ಊರಿನ ಗಣ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಇ. ಕೆ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿದರು. ಕೊನೆಯಲ್ಲಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಧನ್ಯವಾದಗಳು ಹೇಳಿದರು. ಸಿಹಿತಿಂಡಿ ವಿತರಣೆಯ ನಂತರ ಮೂರು ಸಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.