(www.vknews. in) ; ಜ್ಞಾನ ಭಾರತಿ ಶಾಲೆಯ LKG ಯಂದ SSLC ವರೆಗೆ ಸುಮಾರು 500 ಕ್ಕಿಂತಲೂ ಹೆಚ್ಚು ಮಕ್ಕಳು 78 ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು. ಶಾಲೆಯ ಸಂಚಾಲಕರಾದ ರವೂಫ್ ಯು ಟಿ ಮತ್ತು ಪಿಟಿಎ ಅಧ್ಯಕ್ಷರಾದ ಇಕ್ಬಾಲ್ ಜೋಗಿಬೆಟ್ಟು ಮತ್ತು ಉಪಾದ್ಯಕ್ಷರಾದ ಶುಕೂರು ಮೇದರಬೆಟ್ಟು ಮತ್ತು ಇತರ ಪಿಟಿಎ ಸದಸ್ಯರು ಮತ್ತು ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಸ್ವಾತಂತ್ರ್ಯ ದಿನದ ವಿಶೇಷವಾಗಿ ಕಿರುಭಾಷಣ ಮಾಡಿದರು ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶಝೀನಾ ಮತ್ತು ತಂಡದಿಂದ ಪ್ರಾರ್ಥನೆಯಿಂದ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ನಾಯಕಿ ನಿಹಮ ಫಾತಿಮ ಕಾರ್ಯಕ್ರಮದ ಧ್ವಜಾರೋಹಣ ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ಸಂಯೋಜಣೆಯನ್ನು ಹತ್ತನೇ ತರಗತಿಯ ಮುಫ್ಶೀರ್ ನೆರವೇರಿಸಿದರು. ಎಲ್ಲರನ್ನು ಸೆಹರಿಶ್ ಶರವತ್ ಸ್ವಾಗತಿಸಿದರು. ಮಕ್ಕಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿದ್ಯಾರ್ಥಿಗಳಾದ ಫಾತಿಮ ಶನುಮ್ , ಫಾತಿಮ ಸಲ್ವ ,ರುಖಯ್ಯ ಅನಿಶಾ , ಸಅದಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಂಡಿಸಿದರು. ಮುಂದುವರಿದು ಅಮ್ಜದ್ ಮತ್ತು ತಂಡವು ದೇಶಭಕ್ತಿಗೀತೆಯನ್ನು ಹಾಡಿದರು .ಜುಮೈಲಾ ತಂಡವು ಹಿಂದಿಯಲ್ಲಿ ದೇಶಭಕ್ತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾಗಿ ಅರುಣಾ ಮೇಡಮ್ ಮತ್ತು ತಾಹಿರ ಮೇಡಂ ಭಾಗವಹಿಸಿದರು. ಇತರ ಎಲ್ಲ ಶಿಕ್ಷಕರು ಭಾಗವಹಿಸಿದರು. 10 ನೇ ತರಗತಿ ಯೂಸುಫ್ ಕೈಸ್ ಎಲ್ಲರಿಗೂ ಅಭಿನಂದಿಸಿದರು. ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.