(www.vknews.in) ; ಅಶ್ವತ್ತಡಿ ಕಾವು ಖಿಲ್ರಿಯ ಮಸ್ಜಿದ್ ಹಾಗೂ ನೂರುಲ್ ಇಸ್ಲಾಂ ಮದರಸ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಮದರಸ ಹಾಗೂ ಮಸ್ಜಿದ್ ಕಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಧ್ವಜಾರಣ ಕಾರ್ಯಕ್ರಮವನ್ನು ಮಸ್ಜಿದ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಎ ಹಾಗೂ ಮಾಡನೂರು ಜಮಾತ್ ಕಮಿಟಿಯ ಖಜಾಂಜಿಯವರಾದ ಯೂಸುಫ್ ಹಾಜಿ ಹಾಗೂ ಅಬ್ಬಾಸ್ ಹಾಜಿ ಅವರು ನೆರವೇರಿಸಿದರು. ಸದರ್ ಉಸ್ತಾದ್ ಹಾಜಿ ಮಹಮ್ಮದ್ ಮುಸ್ಲಿಯರ್ ಸ್ವಾಗತವನ್ನು ಕೋರಿದರು.
ಈ ಸಂದರ್ಭದಲ್ಲಿ ಬಹು ಅಬೂಬಕರ್ ಮುಸ್ಲಿಯರ್ ಹಾಗೂ ಪಿ .ಎ ತಾಂತ್ರಿಕ ಕಾಲೇಜಿನ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಇಸ್ಮಾಯಿಲ್ ಶಾಫಿ ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ಹಾಗೂ ಮುಂದಿನ ಪೀಳಿಗೆ ದೇಶದ ಸಮಗ್ರತೆ ಸಾಮರಸ್ಯತೆ ಹಾಗೂ ಅಭಿವೃದ್ಧಿಯಲ್ಲಿ ವಹಿಸಬೇಕಾದ ಪಾತ್ರದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಸುಲೇಮಾನ್ ನೆರೆದವರಿಗೆಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದರು ಕಾರ್ಯಕ್ರಮದ ಕೊನೆಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.