(www.vknews. in) ; ಕುಶಾಲನಗರದ ನೂರೇ ಮದೀನ ಹಿಫ್ಳುಲ್ ಖುರ್ಆನ್ ಕಾಲೇಜು ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಬೆಳಿಗ್ಗೆ 7:30 ಗಂಟೆಗೆ ನೂರೇ ಮದೀನ ಎಜುಕೇಷನ್ ಟ್ರಸ್ಟಿನ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟಿನ ಮುಖ್ಯೋಪದೇಶಕರಾದ ಅಬ್ದುಲ್ ಅಜೀ಼ಜ಼್ ಎಂ. ಐ. ಧ್ವಜಾರೋಹಣ ನೆರವೇರಿಸಿ ಕಾಲೇಜಿನ ಪ್ರಾಂಶುಪಾಲರಾದ ಹಾಫಿಳ್ ಮುಹಮ್ಮದ್ ನಾಸಿಹ್ ಝೈನಿಯವರು ಪ್ರಾರ್ಥನೆ ಸಲ್ಲಿಸಿದರು.
ಸಮಿತಿಯ ಜೊತೆಕಾರ್ಯದರ್ಶಿ ಅಬ್ದುಲ್ ರಶೀದ್ ಹಳ್ರಮಿಯವರು ಸ್ವಾಗತಿಸಿ, ಅಧ್ಯಕ್ಷರಾದ ಅಬ್ದುಲ್ಲ ಮದನಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ನೇತಾರರ ತ್ಯಾಗವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ನೀಡಿದ SჄS ಕುಶಾಲನಗರ ಯುನಿಟ್ಟಿನ ಅಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ರವರು ಸ್ವಾತಂತ್ರ್ಯದ ಅನಿವಾರ್ಯತೆ ಮತ್ತು ಸ್ವಾತಂತ್ರ್ಯದ ದುರುಪಯೋಗದ ಬಗ್ಗೆ ಸ್ಪುಟವಾಗಿ ವಿವರಿಸಿದರು.
ನೂರೇ ಮದೀನ ಹಿಫ್ಳುಲ್ ಖುರ್ಆನ್ ಕಾಲೇಜಿನ ವಿದ್ಯಾರ್ಥಿಗಳು ಇಂಪಾದ ದೇಶ ಭಕ್ತಿ ಗೀತೆ ಹಾಡಿದರು. ನೂರೇ ಮದೀನ ಸಮಿತಿಯ ವ್ಯವಸ್ಥಾಪಕರಾದ ಅಬ್ದುಲ್ ರಝಾಕ್, ಉಪಾಧ್ಯಕ್ಷರುಗಳಾದ ಹುಸೈನ್ ಸಿ. ಕೆ. ಹಸೈನಾರ್ ಟಿ. ಎಂ. ಸಮಿತಿ ಸದಸ್ಯರಾದ ಇಂತಿಯಾಜ಼್, ಇಬ್ರಾಹಿಂ ಕೊಟ್ಟಮುಡಿ, ಹನೀಫ ಎಂ. ಹೆಚ್. ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ನ ಕಾರ್ಯಕರ್ತರು ಮತ್ತು ನೂರೇ ಮದೀನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಂಝ ಮಾನಿ ವಂದಿಸಿ ಸಿಹಿ ಹಂಚಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ವರದಿ: ಹಂಝ ಮಾನಿ. ಕುಂಜಿಲ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.