ಕಾವಳಕಟ್ಟೆ (www.vknews.in) : 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾವಳ ಮೂಡೂರು ಬ್ರಾಂಚ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್ಡಿಪಿಐ ಕಾವಳ ಮೂಡೂರು ಬೂತ್ ಸಮಿತಿ ಅಧ್ಯಕ್ಷರುಗಳಾದ ಇಮ್ರಾನ್ ದೂಮಲಿಕೆ ಹಾಗೂ ಇರ್ಫಾನ್ ಕಾವಳ ಕಟ್ಟೆ ಧ್ವಜಾರೋಹಣ ಮಾಡಿದರು.
ದುವಾವನ್ನು ಎ ಎಂ ಆದಂ ಉಸ್ತಾದ್ ಖತೀಬರು ಬಿ ಜೆ ಎಂ ದೂಮಲಿಕೆ ನಿರ್ವಹಿಸಿದರು. ಬಿಸ್ಮಿಲ್ಲಾ ಮದರಸ ದೂಮಲಿಕೆಯ ಸದರ್ ಉಸ್ತಾದ್ ಕೆ ಪಿ ಬದ್ರುದ್ದೀನ್ ಫೈಝಿ ಸಂದೇಶ ಭಾಷಣ ಮಾಡಿದರು.
ಎಸ್ಡಿಪಿಐ ಸರಪಾಡಿ ಬ್ಲಾಕ್ ಉಪಾಧ್ಯಕ್ಷರಾದ ಉಸ್ಮಾನ್ ಅಲಂಗಾಲು ಪ್ರಸ್ತಾವಿಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯಿತ್ ಸದಸ್ಯರಾದ ಸಫಾ ಸಲ್ಮಾ ಕಾವಲ್ ಕಟ್ಟೆ ದೂಮಲಿಕೆ ಮಸೀದಿ ಅಧ್ಯಕ್ಷರಾದ ಹುಸ್ ನಾರ್. ರಝಕ್ ಉಸ್ತಾದ್. ಸಾಧಿಕ್ ದೂಮಲಿಕ ಹಾಗೂ ಕಾವಳ ಕಟ್ಟೆ ಬ್ರಾಂಚ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂದಿದ್ದರು. ಈ ಕಾರ್ಯಕ್ರಮವನ್ನು ಎಸ್ಡಿಪಿಐ ಕಾವಳ ಮೂಡೂರು ಬೂತ್ ಸಮಿತಿ ಕಾರ್ಯದರ್ಶಿ ಸಾದಿಕ್ ದೂಮಲಿಕೆ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.