(www.vknews.in) : ಪುತ್ತೂರು ಕ್ಷೇತ್ರದಲ್ಲಿ ಯುವಕರನ್ನು ಬಡಿದೆಬ್ಬಿಸಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಮಾಡಿಸಿ ಅವರಿಗೆ ಯುವ ನಾಯಕತ್ವದ ಪಾಠ ಹೇಳಿ ಕೊಟ್ಟು ಅಸಂಖ್ಯಾತ ಯುವಕರನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿಸಿದ ಕೀರ್ತಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಯವರಿಗೆ ಸಲ್ಲ ಬೇಕು.
ದೆಹಲಿಯಲ್ಲಿ ನಡೆದ ಯಂಗ್ ಇಂಡಿಯಾ ಕೆ ಬೋಲೋ ಸ್ಪರ್ಧೆಯಲ್ಲಿ ಭಾಗವಹಿಸಿ AICC ನಾಯಕರಿಂದ ಶಹಬ್ಬಾಸ್ ಗಿರಿ ಪಡೆದು ತಾಯ್ನಾಡಿಗೆ ಮರಳಿದಾಗ ಯುವ ಸಮೂಹದಿಂದ ಸಿಕ್ಕಿದ ಗೌರವಾರ್ಪಣೆ ಅಷ್ಟಿಷ್ಟಲ್ಲ.
ಶ್ರೀ ಪ್ರಸಾದ್ ರವರು ನಿರಂತರವಾಗಿ ಪಕ್ಷಕ್ಕಾಗಿ ದುಡಿದು ತಳ ಮಟ್ಟದಿಂದ ಯುವ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಕಾರಣ ಮತ್ತು ಅವರ ಯಶಸ್ವೀ ನಾಯಕತ್ವವನ್ನು ಮನಕಂಡ ಕಾಂಗ್ರೆಸ್ ಪಕ್ಷದ ನಾಯಕರು ಶ್ರೀಪ್ರಸಾದ್ ರವರಿಗೆ ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಹುದ್ದೆ ನೀಡಿ ಇಡೀ ರಾಜ್ಯದಲ್ಲಿ ಯುವ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸುವ ಅಧಿಕಾರ ನೀಡಿತು. ಇನ್ನು ಬರುವಂತಹ ಯುವಕರಿಗೆ ತನ್ನ ಸ್ಥಾನವನ್ನು ಬಿಟ್ಟು ಕೊಡಲೇ ಬೇಕು ಎಂಬ AICC ತೀರ್ಮಾನಕ್ಕೆ ಬದ್ಧರಾಗಿ ಕಾಂಗ್ರೆಸ್ ಪಕ್ಷದ ಶಿಸ್ತನ್ನು ಮೈಗೂಡಿಸಿ ಕೊಂಡ ಶ್ರೀ ಪ್ರಸಾದ್ ರವರು ಅಸಂಖ್ಯಾತ ಯುವ ಸಮೂಹದ ಒತ್ತಾಯದ ಮೇರೆಗೆ ಇಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ.
ಸೌಮ್ಯ ಸ್ವಭಾವದ ಶ್ರೀ ಪ್ರಸಾದರು ಹತ್ತಾರು ಸಂಘಸಂಸ್ಥೆಗಳಲ್ಲಿ ದುಡಿದು ಎಲ್ಲಾ ಜಾತಿ ಮತ ಧರ್ಮ ಪಂಗಡದವರೊಂದಿಗೆ ಅನ್ಯೋನ್ಯವಾಗಿ ಕಾರ್ಯನಿರ್ವಹಿಸುವವರಾಗಿದ್ದಾರೆ. ಅವರು ಎಂಟು ವರ್ಷಗಳ ತನಕ ಶಿಕ್ಷಕ ವ್ರತ್ತಿ ನಡೆಸಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು.
ಕಾಂಗ್ರೆಸ್ ಪಕ್ಷ ಯಾರನ್ನು ಬೇಕಾದರೂ ಯಾವುದೇ ಚುನಾವಣೆಯಲ್ಲೂ ಅಭ್ಯರ್ಥಿಯನ್ನಾಗಿ ಮಾಡಲಿ ತನ್ನ ಯುವ ಸಮೂಹದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದೇ ಬಿಡುತ್ತಾರೆ. ಧರ್ಮ ಜಾತಿ ಪಂಗಡ ಆ ಬಣ ಈ ಬಣ ನೋಡದೇ ಅಭ್ಯರ್ಥಿಗಳ ವಿಜಯಕ್ಕಾಗಿ ರಾತ್ರಿ ಹಗಲು ಕಾಲಿಗೆ ಚಕ್ರ ಕಟ್ಟಿಕೊಂಡು ಸ್ವಂತ ಖರ್ಚಿನಲ್ಲಿ ಪಕ್ಷದ ಅಭ್ಯರ್ಥಿಗಳ ವಿಜಯಕ್ಕಾಗಿ ದುಡಿಯುವಂತಹ ಶ್ರೀ ಪ್ರಸಾದ್ ರವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಳ್ಳಲೇಬೇಕು.
ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಶ್ರೀ ಪ್ರಸಾದ್ ರವರು ರಾಜ್ಯ ಯುವ ಸಮೂಹದ ನೇತ್ರತ್ವ ಶ್ರೀಪ್ರಸಾದರ ಕೈಗೆ ಬರ ಬೇಕು ಯುವಕರಿಗೆ ಎಲ್ಲಾ ತರಹದ ಅಧಿಕಾರ ಸಿಗಬೇಕಾದರೆ ಶ್ರೀ ಪ್ರಸಾದರನ್ನು ಗೆಲ್ಲಿಸುವ ಮೂಲಕ ಪುತ್ತೂರು ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಿ.
ಎಲ್ಲಾ ಯುವ ಸಮೂಹದ ನಾಯಕರು ಕಾರ್ಯಕರ್ತರು ಶ್ರೀ ಪ್ರಸಾದರ ಗೆಲುವಿಗಾಗಿ ರಾಜ್ಯದ ಮೂಲೆ ಮೂಲೆಗೂ ಹೋಗಿ ಮತ ಯಾಚಿಸಿ ಅವರನ್ನು ಗೆಲ್ಲಿಸಿ, ಅವರ ಗೆಲುವು ಯುವಕರ ಗೆಲುವಾಗಿದೆ. ಶ್ರೀಪ್ರಸಾದರಿಗೆ ಜಯವಾಗಲಿ..
✍️ ಅದ್ದು ಪಡೀಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.