ಬಂಟ್ವಾಳ (www.vknews. in) : ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ ದಾವಣಗೆರೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರೋಗ್ಯ ಇಲಾಖೆಯ ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರಾದ ಸಂತೋಷ್ ಕುಮಾರ್ ಎಂ ರವರು ಮಹಾತ್ಮ ಗಾಂಧೀಜಿ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಲಾಲ್ ಬಹದ್ದೂರ್ ಬಹದ್ದೂರ್ ಶಾಸ್ತ್ರಿ ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಲಾಲ್ ಬಹುದ್ದೂರ್ ಶಾಸ್ತ್ರಿ ಜಿ, ಸುಭಾಷ್ ಚಂದ್ರ ಬೋಸ್, ಇನ್ನಿತರ ಮಹನೀಯರು ಅವರ ತ್ಯಾಗ ಬಲಿದಾನದಿಂದ ಇಂದು ನಮ್ಮೆಲ್ಲರಿಗೂ ಕೂಡ ಸ್ವಾತಂತ್ರ್ಯ ಸಿಕ್ಕಿದೆ ಹಾಗಾಗಿ ಅವರೆಲ್ಲರನ್ನು ನಾವು ಪ್ರತಿದಿನವೂ ಸ್ಮರಿಸಲೇಬೇಕು ಯಾಕೆಂದರೆ ಇಷ್ಟು ನಾವು ಸ್ವತಂತ್ರವಾಗಿ ಹೋಡಾಡುತ್ತಿದ್ದೇವೆ ಎಂದರೆ ಅದಕ್ಕೆ ಎಲ್ಲಾ ಮಹನೀಯರೇ ಕಾರಣ ಎಂದರು.
ಹಾಗೂ ಸಮುದಾಯದಲ್ಲಿರುವ ಮನೋರೋಗಿಗಳಿಗೆ ಮಾನಸಿಕ ಚಿಕಿತ್ಸೆ, ಆಪ್ತ ಸಮಾಲೋಚನೆ, ಮಾನಸಧಾರ ಕೇಂದ್ರದಲ್ಲಿ ಸಿಗುತ್ತಿರುವ ಕೌಶಲ್ಯ ತರಬೇತಿಗಳನ್ನು ಮತ್ತು ಸರ್ಕಾರದ ಸೌಲಭ್ಯಗಳನ್ನು ನೀವೆಲ್ಲರೂ ಎಂದು ಸರಿಯಾಗಿ ಪಡೆಯುತ್ತಿರೋ ಅಂದು ನಿಮಗೆ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ.
ಹಾಗಾಗಿ ಪ್ರತಿದಿನವೂ ಕೂಡ ತಾವೆಲ್ಲರೂ ತರಬೇತಿ ಸಂಸ್ಥೆಗೆ ಹಾಜರಾಗಿ ಇಲ್ಲಿನ ತರಬೇತಿಗಳನ್ನು ಪಡೆದುಕೊಂಡು ತಾವೆಲ್ಲರೂ ಕೂಡ ಯಾವುದಾದರೂ ಒಂದು ಕೌಶಲ್ಯದಲ್ಲಿ ತೊಡಗಿಕೊ ಳ್ಳಬೇಕು ಆಗ ನೀವು ಸ್ವಾತಂತ್ರ್ಯರಾಗುತ್ತೀರಿ. ಮತ್ತು ಸ್ವಾತಂತ್ರ್ಯವಾಗಿ ನಿಮಗೆ ಸಿಕ್ಕಂತಾಗುತ್ತದೆ ಎಂದು ಕಿವಿ ಮಾತನ್ನು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಲ್ಲೇಶಪ್ಪ ವಹಿಸಿದ್ದರು, ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಶ್ರೀಮತಿ ಜಯಲಕ್ಷ್ಮಿ , ಸಂಸ್ಥೆಯ ನಿರ್ದೇಶಕರಾದ ದಿವ್ಯ ಸಂತೋಷ್, ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಚಂದನ್, ಎಪಿಡಿ ಸಂಸ್ಥೆಯ ಸಿಬ್ಬಂದಿಯಾದ ಶಂಕ್ರಮ್ಮನವರು , ಮಾನಸಧಾರ ಸಂಸ್ಥೆಯ ಸಿಬ್ಬಂದಿಗಳಾದ ಹರೀಶ್, ಮಂಜುನಾಥ್, ವಿಜಯ, ದಿನೇಶ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.