ಮಾಲೂರು (www.vknews.in) : ಚಿನ್ನದ ಜಿಲ್ಲೆ ಕೋಲಾರದ ಮಾಲೂರು ತಾಲ್ಲೂಕಿನ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ಆವರಣದಲ್ಲಿ ಮೊದಲನೇಯ ಶ್ರಾವಣ ಶನಿವಾರದ ಪ್ರಯುಕ್ತ ಶ್ವೇತಾಂಜಲಿ ಭರತನಾಟ್ಯ ಶಾಲೆಯು ಪ್ರತಿ ವರ್ಷದಂತೆ ಈ ವರ್ಷವೂ ಸಹ ಐದನೇ ವರ್ಷದ ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುವ “ಭರತನಾಟ್ಯ ನೃತ್ಯ ಪ್ರದರ್ಶನ” ಮಕ್ಕಳಿಗೆ ನಾಟ್ಯಕಲಾ ಜ್ಯೋತಿ ಪ್ರಶಸ್ತಿ ಪ್ರದಾನ, ವಿಶ್ವದಾಖಲೆ ಸಮರ್ಪಣೆ, ಹಾಗೂ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಸೆಲ್ವಮಣಿ ರವರು ಮಾತನಾಡುತ್ತಾ “ಭಾರತೀಯ ಸಂಸ್ಕೃತಿಯ ಪ್ರತೀಕಾ ಭರತನಾಟ್ಯ, ಈ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಶ್ವೇತಾಂಜಲಿ ಭರತನಾಟ್ಯ ಶಾಲೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ.
ಪ್ರತಿ ವರ್ಷದ ಶ್ರಾವಣ ಶನಿವಾರದಲ್ಲಿ ತಿರುಪತಿ ತಿಮ್ಮಪ್ಪನಿಗೆ ಗೌರವ ಸಲ್ಲಿಸಲು ವೆಂಕಟರಾಮಣಸ್ವಾಮಿ ದೇವರ ಗೀತೆಗಳನ್ನು ಆಯ್ದು ನಿರಂತರ ಅಭ್ಯಾಸದೊಂದಿಗೆ ನೃತ್ಯ ಸಂಯೋಜನೆ ಮಾಡಿ ಸುಮಾರು ನಾಲ್ಕು ಗಂಟೆಗಳ ಕಾಲ ಮಕ್ಕಳ ನೃತ್ಯವನ್ನು ಮಾಡಿಸುವುದು ನಿಜಕ್ಕೂ ಸಂತಸದ ವಿಚಾರ. ವಿವಿಧ ರಾಜ್ಯ, ಮೂಲೆ ,ಮೂಲೆಗಳಿಂದ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಅದ್ಬುತ ಸಾಂಸ್ಕೃತಿಕ ಕಾರ್ಯಕ್ರಮ ನೀಡಿರುವುದು ಅಭಿನಂದನೀಯ ವಿಚಾರ” ಎಂದರು.
ಇದೇ ಪ್ರಮುಖ ವೇದಿಕೆಯಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿ.ಕೆ.ಎಫ್ ವತಿಯಿಂದ 2023-2024 ನೇ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪುರಸ್ಕೃತರಾಗಿ ಪ್ರಶಸ್ತಿ ಸ್ವೀಕರಿಸಿದ ಡಾ.ಜ.ಮು ಚಂದ್ರ ರವರು ಮಾತನಾಡುತ್ತಾ “ಕನ್ನಡ ನಾಡಿನಲ್ಲಿ ಕಲೆಯನ್ನು ನಾಟ್ಯದ ಮೂಲಕ ಶ್ರೀಮಂತಗೋಳಿಸುತ್ತಿರುವ ಶ್ವೇತಾಂಜಲಿ ಭರತನಾಟ್ಯ ಶಾಲೆ ಇಂದು ನಮ್ಮನ್ನು ಗುರ್ತಿಸಿ ಮೌಲ್ಯತ್ಮಕವಾದ ಹಾಗೂ ರಾಜ್ಯದ ಪ್ರಮುಖ ಪ್ರಶಸ್ತಿಯಾದ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿರುವುದು ನನ್ನ ಮುಂದಿನ ಎಲ್ಲಾ ಕಾರ್ಯಗಳಿಗೆ ಸ್ಪೂರ್ತಿ, ಜವಾಬ್ದಾರಿ ಹೆಚ್ಚಳವಾಗಿದೆ.
ರಕ್ತದಾನ, ನೇತ್ರದಾನ ಹಾಗೂ ಸಮಾಜ ಸೇವೆ ಉತ್ತಮ ಕಾರ್ಯ ಮಾಡುತ್ತಿರುವ ವಿ.ಕೆ.ಎಫ್ ನ ಈ ಕಾರ್ಯ ಮಹತ್ತರವಾದದ್ದು, ಈ ಸಂಸ್ಥೆಯ ಎಲ್ಲಾ ಕಾರ್ಯ ಚಟುವಟಿಕೆಗಳ ಜೊತೆಗೆ ಸದಾ ನಾವು ಕೈ ಜೋಡಿಸುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿ.ಕೆ.ಎಫ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡುತ್ತಾ “ಶ್ವೇತಾಂಜಲಿ ಭರತನಾಟ್ಯ ಶಾಲೆ ಗ್ರಾಮೀಣ ಪ್ರದೇಶದಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಈ ನಾಡಿಗೆ, ಈ ರಾಷ್ಟ್ರಕ್ಕೆ ಮುಖ್ಯವಾಹಿನಿಗೆ ತರುವ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡುತ್ತಿರುವುದು ಎಲ್ಲಾರಿಗೂ ತಿಳಿದಿದೆ. ಈ ಹಾದಿಯಲ್ಲಿ ನಮ್ಮ ಭಾರತೀಯ ಸಂಸ್ಕ್ರತಿಯನ್ನು ವಿಶ್ವದೆಲ್ಲೆಡೆ ಪ್ರಚುರಪಡಿಸುವ ಮೂಲಕ ಉತ್ತಮ ಸಾಧಕರನ್ನಾಗಿ ಮಾಡುವ ಮೂಲಕ ಪ್ರಗತಿ ಮಾಡಲಾಗುವುದು. ನಿಮ್ಮ ಮಕ್ಕಳನ್ನು ಸಹ ನಮ್ಮ ಶ್ವೇತಾಂಜಲಿ ಭರತನಾಟ್ಯ ಶಾಲೆಗೆ ಸೇರಿಸಬಹುದು” ಎಂದರು.
ಶ್ವೇತಾಂಜಲಿ ಭರತನಾಟ್ಯ ಶಾಲೆ ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ನಿರಂತರವಾಗಿ ಭರತನಾಟ್ಯ ನೃತ್ಯ ಪ್ರದರ್ಶನವನ್ನು ಮಾಲೂರು, ಲಕ್ಕೂರು, ಚಿಕ್ಕತಿರುಪತಿ ಹಾಗೂ ದುನ್ನಸಂದ್ರ ಕ್ರಾಸ್ ಮಕ್ಕಳಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ಎಸ್.ಎಲ್.ವಿ ಟೆಂಟ್ ಹೌಸ್ ಮಾಲೀಕರಾದ ಶಂಕರ್ , ಲಕ್ಕೂರು ಪೋಲಿಸ್ ಠಾಣೆಯ ವೇಕೋಂಬ್ ರಾವ್, ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪೋಷಕರು, ಮಕ್ಕಳು, ಭಕ್ತಧಿಗಳು, ಚಿಕ್ಕತಿರುಪತಿಯ ಗ್ರಾಮಸ್ಥರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.