ಅಬುಧಾಬಿ (www.vknews.in) : ಕೆ.ಸಿ.ಎಫ್. (ಕರ್ನಾಟಕ ಕಲ್ಚರಲ್ ಫೌಂಡೇಶನ್) ಅಬುಧಾಬಿ ಝೋನ್ ವತಿಯಿಂದ ಆಯೋಜಿಸಲ್ಪಡುವ ವಿಶ್ವ ಪ್ರವಾದಿ ಪೈಗಂಬರ್ ಸ.ಅ.) ರ 1499ನೇ ಮೀಲಾದ್ ಸಮಾವೇಶದ ಯಶಸ್ವಿಗೆ ಸ್ವಾಗತ ಸಮಿತಿ ಯನ್ನು ಇತ್ತೀಚೆಗೆ ಅಬುಧಾಬಿ ಕೆಸಿಎಫ್ ಸಭಾಭವನದಲ್ಲಿ ಆರಿಸಲಾಯಿತು.
ಸ್ವಾಗತ ಸಮಿತಿ ಚೇರ್ಮ್ಯಾನ್: ಅಬ್ದುಲ್ ರಝಾಕ್ ಹಾಜಿ ಜಲ್ಲಿ, ಕನ್ವಿನರ್:ಉಮರ್ ಈಸ್ವರಮಂಗಲ, ಕೋಶಾಧಿಕಾರಿ: ಸಿದ್ದೀಕ್ NK. ಸಲಹೆಗಾರರಾಗಿ – ಅಬ್ದುಲ್ ಹಮೀದ್ ಸಅದಿ, ಪಿ.ಒಂ.ಎಚ್ ಈಸ್ವರಮಂಗಲ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಕೆ.ಎಚ್ ಸಖಾಫಿ ಈಸ್ವರಮಂಗಲ, ಹಾಜಿ ಮುಹಮ್ಮದ್ ಅಲಿ ವಳವೂರ್, ಇಬ್ರಾಹಿಂ ಬ್ರೈಟ್ ಮಾರ್ಬಲ್, ಇಕ್ಬಾಲ್ ಕುಂದಾಪುರ. ಕಾರ್ಯ ನಿರ್ವಾಹಕರಾಗಿ ಮುಹಮ್ಮದ್ ಹಸನ್ ಹಾಜಿ, ಸಿದ್ದೀಕ್ ಕೆ.ಎಚ್. ಇತರ ಕಾರ್ಯಕ್ರಮದ ಯಶಸ್ವಿಗಾಗಿ ಹಕೀಂ ತುರ್ಕಲಿಕೆ,ಹಸೈನಾರ್ ಅಮಾನಿ ಅಜ್ಜಾವರ, ಕಬೀರ್ ಬಾಯಂಬಾಡಿ, ನವಾಝ್ ಹಾಜಿ, ಹಾರಿಸ್ ಸಅದಿ, ಅಶ್ರಫ್ ಮುಸ್ಲಯಾರ್ ಕನ್ಯಾಡಿ. ನಿಝಾರ್ ಕುಂಬ್ಳೆ , ಇಂಜಿನಿಯರ್ ಅರ್ಶದ್, ಶರೀಫ್ ಕಾಜೂರ್, ಫಾರುಕ್ ಸಖಾಫಿ, ಹಾಫಿಲ್ ಸಈದ್ ಹನೀಫಿ, ಅಮೀರ್ ಚಿಕ್ಕಮಂಗಳೂರ್, ಮುಸ್ತಫಾ ಸಖಾಫಿ, ರಜಬ್ ನಾವುಂದ, ಶರೀಫ್ ಬೊಳ್ಮಾರ್, ಸುಹೈಲ್ ಬಜ್ಪೆ, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಹಿದಾಯತ್ ಕೊಡಗು ಒಳಗೊಂಡ ಮೀಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
“ಮುತ್ತು ನಬಿ ಮನುಕುಲದ ಮಾರ್ಗದರ್ಶಿ” ಎಂಬ ಶೀರ್ಷಿಕೆಯೊಂದಿಗೆ ಸೆಪ್ಟೆಂಬರ್ ತಿಂಗಳ 8 ರಂದು ಸಂಜೆ ಅಬುಧಾಬಿ ನಗರದ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇರಳದ ಪ್ರಮುಖ ಸಯ್ಯದ್ ಹಾಗೂ ವಿದ್ವಾಂಸರಾದ ” ಸಯ್ಯಿದ್ ಅಬ್ದುರ್ರಹ್ಮಾನ್ ಆಟ್ಟೀರಿ ತಂಗಳ್” ಭಾಗವಹಿಸಲಿದ್ದು ಸಾಮಾಜಿಕ ಧಾರ್ಮಿಕ ಮತ್ತು ಉದ್ಯಮ ಕ್ಷೇತ್ರದ ಹಲವು ನಾಯಕರು ಸೇರಿದಂತೆ ಸಾವಿರಾರು ಪ್ರವಾದಿ ಪ್ರೇಮಿಗಳು ಭಾಗವಹಿಸಲಿದ್ದಾರೆ.
ಕಳೆದ ಒಂದು ದಶಕದಿಂದ ಅನಿವಾಸಿಗಳ ಜೀವನಾಡಿಯಾಗಿರುವ ಕೆಸಿಎಫ್, ಕನ್ನಡದ ನೆಲದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗು ಸೇವಾ ಕ್ಷೇತ್ರದಲ್ಲಿ ಶ್ಲಾಘನೀಯ ಕ್ರಾಂತಿಯನ್ನು ಮಾಡುತ್ತಿದೆ. ಅನಿವಾಸಿ ಕನ್ನಡಿಗರ ಒಕ್ಕೂಟ ಒಕ್ಕೂಟವಾಗಿರುವ KCF, ಗಲ್ಫ್ ರಾಷ್ಟ್ರಗಳನ್ನೂ ದಾಟಿ ವಿವಿಧ ದೇಶಗಳನ್ನೂ, ಖಂಡಗಳನ್ನೂ ತಲುಪಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.