(www.vknews.in) ; ಮೈಸೂರಿನಲ್ಲಿ ನಡೆದ ಬಾಲಕರ ಕರ್ನಾಟಕ ರಾಜ್ಯ ವೈಟ್ಲಿಪ್ಟಿಂಗ್ ಚಾಂಪಿಯನ್ಷಿಪ್ 2024-25ರಲ್ಲಿ ಮುನಾಫ್ ರಹ್ಮಾನ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಹಾಗೂ ಸೀನಿಯರ್ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕರ್ನಾಟಕ ರಾಜ್ಯ ವೈಟ್ಲಿಫ್ಟರ್ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ವೈಟ್ಲಿಫ್ಟರ್ ಸಂಸ್ಥೆ, ದೈಹಿಕ ಶಿಕ್ಷಕರ ಅಕಾಡೆಮಿ ವತಿಯಿಂದ ಮೈಸೂರಿನ ಮಹಾಜನ ಡಿಗ್ರಿ ಕಾಲೇಜು ಕ್ರೀಡಾಂಗಣದಲ್ಲಿ ಆಗಸ್ಟ್ 17-18ರಂದು ನಡೆದ ರಾಜ್ಯಮಟ್ಟದ ಚಾಂಪಿಯನ್ಷಿಪ್ನಲ್ಲಿ ಜೂನಿಯರ್ 61 ಕೆ.ಜಿ. ವಿಭಾಗದಲ್ಲಿ ಮುನಾಫ್ ರಹ್ಮಾನ್ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ತೃತೀಯ ಬಿ ಕಾಮ್ ವಿದ್ಯಾರ್ಥಿಯಾಗಿರುವ ಮುನಾಫ್ ರಹ್ಮಾನ್, ಉಸ್ಮಾನ್ ಪೆರ್ನೆ ಹಾಗೂ ಆಯಿಷಾ ದಂಪತಿಗಳ ಮಗನಾಗಿದ್ದು ಸಂತ ಫಿಲೋಮಿನ ಕಾಲೇಜಿನ ತರಬೇತು ದಾರರಾಗಿರುವ ಎಲಿಯಾಸ್ ಪಿಂಟೋ ಹಾಗೂ ಅಶ್ವಥ್ ರವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.