ಮಂಗಳೂರು (www.vknews.in) : ಮಂಗಳೂರು ಉತ್ತರ ವಿಧಾನಸಭಾ ಶಾಸಕರಾದ ಡಾ. ಭರತ್ ಶೆಟ್ಟಿ ಯವರ ದೇಹ ಭಾರತದಲ್ಲಿ ಇದ್ದು ಮೆದುಳು ಮಾತ್ರ ಪಾಕಿಸ್ತಾನದಲ್ಲಿ ಇದೆ. ಇತ್ತೀಚೆಗೆ ಮಂಗಳೂರಿನ ಅಡ್ಡೂರು ಪ್ರದೇಶವನ್ನು ಭರತ್ ಶೆಟ್ಟಿ ಮಿನಿ ಪಾಕಿಸ್ತಾನ ಎಂದು ಸಂಭೋಧಿಸಿರುವುದು ದೇಶ ದ್ರೋಹದ ಹೇಳಿಕೆ.ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಬೇಕಿದೆ.
ಇತ್ತೀಚೆಗೆ ಭರತ್ ಶೆಟ್ಟಿಯವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಅಧಿಕವಾಗಿದ್ದು, ತನ್ನ ಕ್ಷೇತ್ರದ ಕಂದಾಯ ಗ್ರಾಮವಾದ ಅಡ್ಡೂರು ಎಂಬ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆಯುವುದು ಅವರಿಗೆ ಬಹುಷ್ಯ ಪೆಗ್ ಏರಿಸುವಷ್ಟು ನಶೆ ಸೃಷ್ಟಿ ಆಗುತ್ತದೆ ಎಂದು ನಂಬಬೇಕಿದೆ. ಭರತ್ ಶೆಟ್ಟಿಯ ಮೆದುಳು ಪಾಕಿಸ್ತಾನದಲ್ಲಿ ಇರುವುದರಿಂದ ಶಾಸಕರು ತನ್ನ ಕ್ಷೇತ್ರದ ಜನರನ್ನು ಭಯಗೊಳಿಸುವ ಉದ್ದೇಶದಿಂದ ತನ್ನ ನೈಜ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ.
ಅಡ್ಡೂರು ಗ್ರಾಮಸ್ತರ ತೆರಿಗೆಯಿಂದ ತನ್ನ ವೇತನ ಪಡೆಯುವ ಭರತ್ ಶೆಟ್ಟಿ , ಅಡ್ಡೂರು ಪ್ರದೇಶದ ಜನರು ಚಲಾವಣೆ ಗೊಳಿಸುವ ಕರೆನ್ಸಿ ನೋಟುಗಳು ಯಾವ ದೇಶದ್ದು ಎಂದು ಭರತ್ ಶೆಟ್ಟಿಯ ಮೆದುಳು ವಿವೇಚಿಸಿ ಹೇಳಲಿ. ಡಾಕ್ಟರ್ : ಭರತ್ ಶೆಟ್ಟಿ ಇನ್ನಾದರೂ ತನ್ನ ಮೆದುಳನ್ನು ಪಾಕಿಸ್ತಾನದಿಂದ ಮಂಗಳೂರಿಗೆ ಟ್ರಾಸ್ಪ್ಲಾಂಟ್ ಗೊಳಿಸಿ ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಲಿ.
ಕೆ.ಅಶ್ರಫ್ ( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.