ಬೆಂಗಳೂರು (www.vknews.in) : ಸೃಷ್ಟಿ ಕಲಾ ವಿದ್ಯಾಲಯದ 7 ನೇ ಯಕ್ಷೋತ್ಸವದ ಅಂಗವಾಗಿ ಮದ್ದಳೆ ವಾದಕ ಅಕ್ಷಯ ಆಚಾರ್ ಬಿದ್ಕಲ್ ಕಟ್ಟೆ ಅವರಿಗೆ ಸೃಷ್ಟಿ ಕಲಾ ಭೂಷಣ ಪ್ರಶಸ್ತಿಯನ್ನು ಆ. 25 ರಂದು ಸಂಜೆ 5 ಗಂಟೆಗೆ ಎನ್.ಆರ್.ಕಾಲೊನಿಯ ಅಶ್ವತ್ಥ್ ಕಲಾ ಭವನದಲ್ಲಿ ಪ್ರದಾನ ಮಾಡಲಾಗುವುದು.
ಹಿರಿಯ ಸಾಹಿತಿ ದೊಡ್ಡರಂಗೇ ಗೌಡ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾಯಕರಾದ ವಿದ್ಯಾಭೂಷಣ ಮೊದಲಾದ ಗಣ್ಯರಿಗೆ ಈ ಹಿಂದೆ ಈ ಪ್ರಶಸ್ತಿ ಪ್ರದಾನಮಾಡಲಾಗಿತ್ತು. ಈ ಬಾರಿ ಯುವ ಪ್ರತಿಭಾನ್ವಿತ ಅಕ್ಷಯ ಆಚಾರ್ ಬಿದ್ಕಲ್ ಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸೃಷ್ಟಿ ಅಧ್ಯಕ್ಷ ಛಾಯಾಪತಿ ಕಂಚಿಬೈಲು ತಿಳಿಸಿದ್ದಾರೆ.
ಬೆಂಗಳೂರು ಮಾಜಿ ಮೇಯರ್ ಕಟ್ಟೆ ಸತ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೃಷ್ಟಿ ಗೌರವ ಅಧ್ಯಕ್ಷ ಶ್ರೀಕಾಂತ್ ಎಂ.ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಸೃಷ್ಟಿ ಯಕ್ಷೋತ್ಸವದಲ್ಲಿ ಅಧ್ವರತ್ರಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
2ದಿನ ಯಕ್ಷೋತ್ಸವ: ಸುಬ್ರಾಯ ಹೆಬ್ಬಾರ್ ಹಾಗೂ ಭರತ್ ರಾಜ್ ಪರ್ಕಳ ಅವರ ನಿರ್ದೇಶನದಲ್ಲಿ, ನಿತ್ಯಾನಂದ ನಾಯಕ್ ಅವರ ವೇಷಭೂಷಣದಲ್ಲಿ ಆ.24 ಸಂಜೆ 4 ಗಂಟೆಗೆ ದಕ್ಷಾಧ್ವರ ಹಾಗೂ 25 ಆ. ಭಾನುವಾರ ಸಂಜೆ 4 ಗಂಟೆಗೆ ಮಾರಣಾಧ್ವರ ಬಳಿಕ ರಾಜಸೂಯಾಧ್ವರ ಯಕ್ಷಗಾನ ಪ್ರದರ್ಶನ ಸೃಷ್ಟಿ ಕಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆಯಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.