(www.vknews.in) ; ಮಂಗಳೂರಿನಲ್ಲಿ ಅಂದು ಎನ್ ಆರ್ ಸಿ ವಿಷಯದಲ್ಲಿ ಜಮಾವಣೆ ಆದ ಅಪ್ರಚೋದಿತ ಜನರ ಮೇಲೆ ಮಂಗಳೂರು ಪೊಲೀಸರು ಗುಂಡುಹಾರಿಸಿ ಕೊಂದ ತಪ್ಪನ್ನು ಮುಚ್ಚಿ ಹಾಕಲು ವಿಧಾನ ಸಭೆಯಲ್ಲಿ ಪೊಲೀಸರ ಪರವಾಗಿ ಸುಳ್ಳು ಹೇಳಿದ ವೇದವ್ಯಾಸ ಕಾಮತ್ ರವರು ಇಂದಿನ ತನ್ನ ಹೇಳಿಕೆಯಲ್ಲಿ ಪೊಲೀಸರನ್ನು ಅಂದು ರಕ್ಷಿಸಿದ್ದು ಬಿಜೆಪಿ ಎಂದು ಹೇಳಲು ನಾಚಿಕೆ ಆಗಬೇಕು.
ಅಂದು ಪೊಲೀಸರು ಮಾಡಿದ ತಪ್ಪನ್ನು ಇಂದು ವೇದವ್ಯಾಸ ಕಾಮತ್ ತನ್ನ ಇತ್ತೀಚೆಗಿನ ಹೇಳಿಕೆಯಲ್ಲಿ ಬಹಿರಂಗ ಪಡಿಸಿದ್ದಾರೆ. ವೇದವ್ಯಾಸ ಕಾಮತ್ ಗೋಲಿಬಾರ್ ನಂತರ ಸದನದಲ್ಲಿ ಚರ್ಚೆಯ ವೇಳೆ, ಮಂಗಳೂರಿನ ಪೊಲೀಸ್ ಗೋಲಿಬಾರ್ ಘಟನೆಯನ್ನು ಶಾಂತವಾಗಿದ್ದ ಸಾರ್ವಜನಿಕರನ್ನು ಪ್ರಚೋದನೆ ಗೊಳಿಸಿ ಪೊಲೀಸರು ಬಂದರು ಪ್ರದೇಶದತ್ತ ಜಮಾಯಿಸಿ ಅಮಾಯಕ ಯುವಕರ ಮೇಲೆ ಗುಂಡು ಹಾರಿಸಿ ಕೊಂದ ಪೊಲೀಸರ ತಪ್ಪನ್ನು ಮುಚ್ಚಿಕೊಂಡು,ಗೋಲಿಬಾರ್ ನಲ್ಲಿ ಬಲಿಯಾದ ವ್ಯಕ್ತಿಗಳು ನಗರದಲ್ಲಿ ಗಲಭೆ ನಡೆಸಿ ಪೋಲೀಸು ಸ್ಟೇಶನ್ ಹೊತ್ತಿಸಲು ಬಂದ ಉದ್ದೇಶಿತ ಗಲಭೆ ಕೋರರು ಎಂದು ವ್ಯಾಖ್ಯಾನಿಸಿ ಸದನಕ್ಕೆ ಮತ್ತು ರಾಜ್ಯದ ಜನರಿಗೆ ಸುಳ್ಳು ಸಂದೇಶ ಹೇಳಿಕೆ ನೀಡಿದ್ದನ್ನು ಇಂದೂ ಕೂಡಾ ಜನ ಮರೆತಿಲ್ಲ. ಅದೇ ವೇದವ್ಯಾಸರು ಇಂದು ವೇದಪಠಿಸಿ ಅಂದು ಗಾಳ ಇಕ್ಕಿದ್ದಾರೆ ಎಂಬುದನ್ನು ರಾಜ್ಯದ ಜನರು ಇಂದು ಅರ್ಥೈಸಬೇಕಿದೆ.
ಕೆ.ಅಶ್ರಫ್( ಮಾಜಿ ಮೇಯರ್) ಮಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.