(www.vknews.in) ; ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ವತಿಯಿಂದ ಸ.ಹಿ.ಪ್ರಾ. ಶಾ. ಇರ್ದೆ ಇಲ್ಲಿ ಆಯೋಜಿಸಿದ್ದ ಪುತ್ತೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದ.ಕ.ಜಿ.ಪಂ. ಹಿ. ಪ್ರಾ. ಶಾಲೆ ಪಾಪೆಮಜಲು ಇಲ್ಲಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಗಳಿಸಿ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ.
ಶ್ರೀಮತಿ ಉಮಾ ನಾಯಕ್ ದೈಹಿಕ ಶಿಕ್ಷಕರು ಇವರಿಂದ ರಚನೆಗೊಂಡು ತರಬೇತಿ ಪಡೆದ ತಂಡವು ಪ್ರಸಕ್ತ ಸಾಲಿನಲ್ಲಿ ಶ್ರೀಮತಿ ಪ್ರವೀಣ ರೈ. ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇವರ ತರಬೇತಿ ಮತ್ತು ಮಾರ್ಗದರ್ಶನದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಕೆ.ವಿ. ಲಾಸ್ಯ ( ನಾಯಕಿ), ಶಿಫಾಲಿ, ಸಿಂಚನ, ಖುಷಿ, ಚೈತನ್ಯ, ಯಶಸ್ವಿನಿ, ಹರ್ಷಿನಿ ಭಾಗವಹಿಸಿ ತಂಡದ ಯಶಸ್ಸಿಗೆ ಕಾರಣರಾಗಿರುತ್ತಾರೆ. ಕೆ. ವಿ ಲಾಸ್ಯ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾಗಿದ್ದು, ಶಿಕ್ಷಣ ಇಲಾಖೆಯಿಂದ ನಡೆದ ಚೆಸ್ ಪಂದ್ಯಾವಳಿಯಲ್ಲಿ ಇವರು ತಮ್ಮ ಶಾಲೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ. ವಿದ್ಯಾರ್ಥಿನಿಯರ ಸಾಧನೆಯನ್ನು ಶ್ರೀಮತಿ ಶಶಿಕಲಾ ಎಂ. ಮುಖ್ಯಶಿಕ್ಷಕಿಯವರು, ಶ್ರೀ ದಿನೇಶ್ ಕುಮಾರ್ ಮರತಮೂಲೆ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಶಿಕ್ಷಕಿಯರ ವೃಂದ ಅಭಿನಂದಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.