(www.vknews.in) ; ಕಾರಂದೂರ್ ಮರ್ಕಝ್ ನಲ್ಲಿ ಅಡ್ಯಾರ್ ಪದವು ಮುಹಿಯುದ್ದಿನ್ ಜುಮ್ಮಾ ಮಸೀದಿಯ ಕಮಿಟಿ ಪದಾಧಿಕಾರಿಗಳು ಮತ್ತು ಮಸೀದಿ ಖತೀಬರನ್ನೊಳಗೊಂಡ ತಂಡವು ತಾ 21/08/2024ರಂದು ಸಂಜೆ ಸಮಯ 6 ಗಂಟೆಗೆ ಬಹು!ಎಪಿ ಉಸ್ತಾದರನ್ನು ಭೇಟಿಯಾಗಿ ಖಾಝಿ ಸ್ವೀಕಾರ ನೆರವೇರಿಸಲಾಯಿತು!!
ನಮ್ಮ ಖಾಝಿಯಾದ ಬಹುಮಾನ್ಯ ಕುರ್ರತ್ ಸಾದಾತ್ ಕೂರ ತಂಗಳ್ ರ ವಫಾತ್ ನಿಂದ ತೆರವಾದ ಆ ಸ್ಥಾನಕ್ಕೆ ಬಹುಮಾನ್ಯ ರಾದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ನೇಮಕ ಗೊಳಿಸಲು ತಾ 14/08/2024ರ ಕಮೀಟಿ ಸಭೆಯಲ್ಲಿ ಸರ್ವಾನು ಮತದಿಂದ ಅಂಗೀಕರಿಸಲಾಗಿತ್ತು!! ಮೊತ್ತ ಮೊದಲಾಗಿ ಈ ಜಮಾತ್ ನಲ್ಲಿ ಮರ್ಹೂಂ ತಾಜುಲ್ ಉಲಮಾ ಉಲ್ಲಾಲ ತಂಗಳ್ (ಖಸಿ)ಮಹಾನರು ಖಾಝಿಯಾಗಿದ್ದರು,
ಅವರ ವಫಾತ್ ನಂತರ ಅವರ ಸುಪುತ್ರ ಕೂರ ತಂಗಳ್ ರವರನ್ನು ಖಾಝಿಯಾಗಿ ಸ್ವೀಕರಿಸಲಾಯಿತು ಇದೀಗ ಇವರ ವಫಾತ್ ನಂತರ ಬಹುಮಾನ್ಯರಾದ ಎಪಿ ಉಸ್ತಾದರನ್ನು ನೇಮಕ ಗೊಳಿಸಲು ತಾ 16/08/2024 ಶುಕ್ರವಾರದಂದು ಅಧ್ಯಕ್ಷರು ಜುಮ್ಮಾ ನಮಾಜ್ ನಂತರ ಖಾಝಿ ಸ್ವೀಕಾರದ ಬಗ್ಗೆ ಜಮಾತಿಗೆ ಮಾಹಿತಿ ನೀಡಿ ಸರ್ವರೂ ತಕ್ಬೀರ್ ನೊಂದಿಗೆ ಅಂಗೀಕರಿಸಿದ್ದರು!!
ಅದರಂತೆ ಇಂದು ತಾ 21/08/2024ರಂದು ಸಂಜೆ 6 ಗಂಟೆಗೆ ಮಸೀದಿ ಖತೀಬರಾದ ಬಹು: ಇಸ್ಮಾಯಿಲ್ ಬುಖಾರಿ ಮದನಿ ಯವರು ಹಾಗೂ ಕಮಿಟಿ ಅಧ್ಯಕ್ಷರಾದ ಬಿಎ ಸೆಲೀಂ, ಕಾರ್ಯದರ್ಶಿ ಮುಫೀದ್, ಕೋಶಾಧಿಕಾರಿ ಎಪಿ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಸತ್ತಾರ್ ಸಖಾಫಿ, ಹಾಗೂ ಮೆಂಬರ್ ರಿಯಾಜ್ ಮತ್ತು ರಫೀಕ್ ರವರ ಸಮ್ಮುಖದಲ್ಲಿ ಖಾಝಿ ಸ್ವೀಕಾರ ಸ್ವೀಕರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.