(www.vknews. in) ಅಮೆಮ್ಮಾರ್ ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ವತಿಯಿಂದ ‘ಇಶ್ಕೇ ಮಿಲಾದ್” ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ, ಸಮಾರೋಪ ಸಮಾರಂಭ
ಫರಂಗಿಪೇಟೆ, ಸೆ.15: ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮ್ಮಾರ್ ವತಿಯಿಂದ “ಇಶ್ಕೇ ಮಿಲಾದ್” ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಮತ್ತು ಸಮಾರೋಪ ಸಮಾರಂಭ ಮಸೀದಿ ಅಧ್ಯಕ್ಷ ಅಬೂಸ್ವಾಲಿಹ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು
ಮಸೀದಿ ಖತೀಬ್ ಸಿದ್ದೀಕ್ ಫೈಝಿ ಉದ್ಘಾಟನೆಗೈದರು, ಉಪಾಧ್ಯಕ್ಷ ಖಾದರ್ ಎಫ್ಎ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಜೊತೆ ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಇಕ್ಬಾಲ್, ಲೆಕ್ಕ ಪರಿಶೋಧಕ ಅಝೀಝ್ ಎಎಸ್ಬಿ, ಸದಸ್ಯರಾದ ಬಶೀರ್ ತಂಡೇಲ್, ಅಕ್ತರ್ ಹುಸೈನ್, ಅಬ್ದುಲ್ ರಜಾಕ್, ಜಮಾಲ್, ಇಬ್ರಾಹಿಂ, ಶೆರೀಫ್, ಝುಬೇರ್, ಫರ್ವಿಜ್ ಹನೀಫ್ ಸುಲೈಮಾನ್ ಅಶ್ರಫ್ ಉಸ್ಮಾನ್, ಶಾಕೀರ್ ಹಾಗೂ ಮದರಸ ಅದ್ಯಾಪಕರಾದ ಸಿದ್ದೀಕ್ ದಾರಿಮಿ, ಇಕ್ಬಾಲ್ ಆಶ್ರಫಿ, ಅಬ್ದುಲ್ ಹಮೀದ್ ಅರ್ಷದಿ, ಅಬ್ದುಲ್ ಮಜೀದ್ ಮುಸ್ಲಿಯಾರ್, ಸ್ವಾದಿಕ್ ಫೈಝಿ, ಅಬೂಬಕರ್ ಮದನಿ, ಇಸ್ಮಾಯಿಲ್ ಯಮಾನಿ ಮತ್ತಿತರರು ಉಪಸ್ಥಿತರಿದ್ದರು ಮಸೀದಿ ಆಡಳಿತ ಸಮಿತಿ ನೂತನ ಅಧ್ಯಕ್ಷರಾದ ಅಬೂಸ್ವಾಲಿಹ್ ಉಸ್ತಾದ್ ಮತ್ತು ಉಪಾಧ್ಯಕ್ಷ ಖಾದರ್ ಎಫ್ಎ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.