ಕಡಬ ಗೃಹರಕ್ಷಕದಳದ ಘಟಕದ ಮಾಜಿಘಟಕಾಧಿಕಾರಿ ಗೊಪಾಲ್ ರವರಿಗೆ ಬೀಳ್ಕೂಡುಗೆ ಕಾರ್ಯಕ್ರಮ

(www.vknews.in) ಕಡಬ:- ಕಡಬ ಗೃಹರಕ್ಷಕದಳ ಘಟಕದ ವತಿಯಿಂದ ದಿನಾಂಕ 30-8-2020 ರ ಆದಿತ್ಯವಾರದಂದು ಇಲ್ಲಿನ ಕಡಬ ಘಟಕಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಭೇಟಿ ನೀಡಿದರು ಈ ವೇಳೆಗೆ ಇದೇ ತಿಂಗಳ 26 ರಂದು ನಿವೃತ್ತಿ ಹೊಂದಿದ ಕಡಬದ ಮಾಜಿ ಘಟಕಾಧಿಕಾರಿ ಗೊಪಾಲ್ ರವರನ್ನು ಘಟಕದ ವತಿಯಿಂದ ಕಡಬ ಮಾದರಿ ಶಾಲಾ ಆವರಣದಲ್ಲಿ ಘಟಕದ ಎಲ್ಲಾ ಗೃಹರಕ್ಷಕರ ಸಮ್ಮುಖದಲ್ಲಿ ಸಮಾದೇಷ್ಠರು ಫಲ,ಪುಷ್ಪ ನೀಡಿ ಸನ್ಮಾನಿಸಿದರು

ಈ ವೇಳೆ ಮಾತನಾಡಿದ ಸಮಾದೇಷ್ಠರು ಗೊಪಾಲ್ ರವರ ಸೇವೆಯನ್ನು ಇಲಾಖೆ ಸ್ಮರಿಸುತ್ತದೆ ಇನ್ನೂ ಮುಂದೆ ನಿವೃತ್ತ ಜೀವನ ಸುಖವಾಗಿ ,ಆರೋಗ್ಯವಂತರಾಗಿರಿ ಎಂದು ಶುಭ ಹಾರೈಸಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಘಟಕಾಧಿಕಾರಿ ಗೋಪಾಲ್ ರವರು ನನ್ನ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಗೃಹರಕ್ಷಕರು, ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರು,ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್, ಹಿರಿಯ ಗೃಹರಕ್ಷಕರಾದ ಸುಂದರ್,ಜಯಪ್ರಕಾಶ್ ಉಪಸ್ಥಿತರಿದ್ದರು ಪ್ರಭಾರ.ಘಟಕಾಧಿಕಾರಿ ತೀರ್ಥೇಶ್ ಸ್ವಾಗತಿಸಿದರು ಹಿರಿಯ ಗೃಹರಕ್ಷಕ ಸುಂದರ್ ವಂದಿಸಿದರು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...