ಗೌರಿ ಲಂಕೇಶ್ ಹತ್ಯೆ ಪ್ರಕರಣ:ಆರೋಪಿಗಳು ಸನಾತನ ಸಂಸ್ಥೆಯ ಪುಸ್ತಕಗಳಿಂದ ಪ್ರೇರಿತರಾದರು,ಕರ್ನಾಟಕ ಎಸ್.ಐ.ಟಿ


ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಖ್ಯಾತ ಹೋರಾಟಗಾರ್ತಿ-ಪತ್ರಕರ್ತೆ ಗೌರಿ ಲಂಕೇಶ್ ರನ್ನು ಗುಂಡಿಕ್ಕಿ ಕೊಂದ ಆರೋಪಿಗಳು ಸನಾತನ ಸಂಸ್ಥೆ ಮತ್ತು ಹಿಂದೂ ಜಾಗೃತಿ ಸಮಿತಿ ಸದಸ್ಯರಾಗಿದ್ದು,ಸನಾತನ ಸಂಸ್ಥೆಯ ಕ್ಷಾತ್ರ ಧರ್ಮ ಸಾಧನ ಎಂಬ ಕೃತಿಯಿಂದ ಪ್ರೇರಣೆ ಪಡೆದಿದ್ದರು ಮತ್ತು ಅವರಿಗೆ ಸಾಧಕ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಕೃತಿಯನ್ನು ನೀಡಲಾಗಿತ್ತು ಎಂದು ವಿಶೇಷ ತನಿಖಾ ತಂಡ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ತಂಡ ಕೂಡ ಭಯೋತ್ಪಾದನಾ ಚಟುವಟಿಕೆಗಳಿಗೆ 12 ಮಂದಿ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದು,ಯು.ಎ.ಪಿ.ಎ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿದೆ. ಸನಾತನ ಸಂಸ್ಥೆಯ ಸದಸ್ಯರು ವಶಿ,ಥಾಣೆ,ಪಾನ್ವೆಲ್ ಆಡಿಟೋರಿಯಂ ಗಳಲ್ಲಿ ಜೋಧಾ ಅಕ್ಬರ್ ಚಿತ್ರ ಪ್ರಸಾರ ಸಂದರ್ಭ ಸ್ಪೋಟ ಸಂಚು ಹೂಡಿದ ಆರೋಪವನ್ನೂ ಎದುರಿಸುತ್ತಿದೆ.ಆದರೆ ಸನಾತನ ಸಂಸ್ಥೆ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು,ತಮ್ಮನ್ನು ಕರ್ನಾಟಕದ ಪೋಲೀಸರು ಗುರಿಯಾಗಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಹಿಂದೂ ಜಾಗೃತಿ ಸಮಿತಿಯ ವಕ್ತಾರ,ರಮೇಶ್ ಶಿಂಧೆ ವೀಡಿಯೋ ಸಂದೇಶವೊಂದರಲ್ಲಿ,ನಮಗಿನ್ನೂ ಎಸ್.ಐ.ಟಿ ಚಾರ್ಜ್ ಶೀಟ್ ದೊರೆತಿಲ್ಲ,ಆದರೂ ಸುದ್ದಿಗೋಷ್ಠಿ ಪ್ರಕಾರ ಕ್ಷಾತ್ರ ಧರ್ಮ ಕೃತಿಯಿಂದ ಆರೋಪಿಗಳು ಪ್ರೇರಿತರಾಗಿದ್ದಾರೆ.ಒಂದು ಪುಸ್ತಕದಿಂದ ಹತ್ಯೆಯವರೆಗೂ ಸಾಗುವುದಾದರೆ,ಜಿಹಾದಿಗಳು-ನಕ್ಸಲರಿಗೆ ಯಾವ ಪುಸ್ತಕ ಪ್ರೇರಣೆ ಎಂದು ಪ್ರಶ್ನಿಸಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...