ಸೌದಿ ಅರೇಬಿಯಾ:5000 ದಾಟಿದ ಕೊವಿಡ್ ಮರಣ ಸಂಖ್ಯೆ; ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಇಳಿಮುಖ

ಜೆದ್ದಾ(www.Vknews.in): ಕಳೆದ ಒಂದು ತಿಂಗಳಿನಿಂದ ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಮುಖ ಕಂಡು ಬರುತ್ತಿದ್ದು, ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದ ದೈನಂದಿನ ಕೊವಿಡ್ ಪ್ರಕರಣಗಳು ಇದೀಗ 500ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಇಂದು 405 ಹೊಸ ಕೊವಿಡ್ ಪ್ರಕರಣಗಳು ಹಾಗೂ 455 ಹೊಸ ರೋಗಮುಕ್ಕಿ ದಾಖಲಾಗುವುದರೊಂದಿಗೆ ಇದುವರೆಗೂ ದಾಖಲಾದ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 338944ಕ್ಕೂ, ಒಟ್ಟು ರೋಗಮುಕ್ತಿ ಸಂಖ್ಯೆಯು 324737 ಕ್ಕೂ ಏರಿಕೆಯಾಗಿದೆ. ಅದಾಗ್ಯೂ ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 22 ಮಂದಿ ಕೊವಿಡ್ ಗೆ ಬಲಿಯಾಗುವುದರೊಂದಿಗೆ ಸೌದಿಯಲ್ಲಿ ಕೊವಿಡ್ ಮರಣ ಸಂಖ್ಯೆ 5018ಕ್ಕೆ ಏರಿದೆ.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...