ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ. ಕಾರವಾರ ಎಸ್ಡಿಎಂಸಿ ಸಮನ್ವಯ ವೇದಿಕೆ ,ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಬಸವರಾಜ್ ಗುರಿಕಾರ್ ರಿಗೆ ಸಂಪೂರ್ಣ ಬೆಂಬಲ:ಮೊಯಿದಿನ್ ಕುಟ್ಟಿ

(www.vk news.in)  ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷರಾದ ಮೊಯಿದಿನ್ ಕುಟ್ಟಿ, ಕಾರವಾರ ಜಿಲ್ಲಾಧ್ಯಕ್ಷ ಶಾಂತಿ ಬಾಯಿ ,ಬೀರಣ್ಣ ನಾಯಕ್ ಮತ್ತು ತಂಡ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಾನ್ಯ ಬಸವರಾಜ್ ಗುರಿಕಾರ್ ಪರವಾಗಿ ಅಂಕೋಲಾ, ಕಾರವಾರದಲ್ಲಿ ಮತದಾರರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು,

 

ಬೆಳಿಗ್ಗೆ ಅಂಕೋಲಾ ದಲ್ಲಿ ರಾಜ್ಯಾಧ್ಯಕ್ಷ ರ ನೇತೃತ್ವದಲ್ಲಿ ಸುದ್ದಿಗೋಷ್ಠಿ ಕರೆದು ಬಸವರಾಜ್ ಗುರಿಕಾರ್ ಪರ ಮತಯಾಚನೆ ಮಾಡುವ ಅಗತ್ಯತೆ ಬಗ್ಗೆ ,ಹಾಗೂ ಸರಕಾರಿ ಶಾಲೆಗಳ ಉಳಿಯುವಿಕೆಯ ಅಗತ್ಯತೆ ಹಾಗೂ ಅದಕ್ಕಾಗಿ ಈ ಅಭ್ಯರ್ಥಿಯು ವಿಜಯಿ ಯಾಗುವುದರ ಅನಿವಾರ್ಯತೆ ಯನ್ನು ವಿವರಿಸಿದರು, ಸುದ್ದಿಗೋಷ್ಠಿಯಲ್ಲಿ ಬೀರನ್ನ ನಾಯಕ್ ಸ್ವಾಗತವನ್ನು ಮಾಡಿ ಉಡುಪಿ ಜಿಲ್ಲೆಯ ಜ್ಯೋತಿ ಶೆಟ್ಟಿ ಧನ್ಯವಾದ ಅರ್ಪಿಸಿದರು, ಕೆರಾಘವೇಂದ್ರ ಗಾಣಿಗ ಮತ್ತು ಹರೀಶ್. ಉಪಸ್ಥಿತರಿದ್ದರು.

ಸುದ್ದಿ ಗೋಷ್ಠಿ ಯ ನಂತರ ಅಂಕೋಲಾ ದಲ್ಲಿ ಹಲವು ಕಾಲೇಜುಗಳಿಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದರು.

ಅಂಕೋಲಾ ದಿಂದ ಕಾರವಾರಕ್ಕೆ ಭೇಟಿ ಕೊಟ್ಟ ರಾಜ್ಯಾಧ್ಯಕ್ಷರ ತಂಡ ಶಾಂತಿ ಬಾಯಿ ಯವರೊಂಡಿಗೆ ಕಾರವಾರ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ರಾಘು ನಾಯ್ಕ್ ರವರನ್ನು ಭೇಟಿಯಾಗಿ ಅವರೊಂದಿಗೆ ಅವರ ಸಹಕಾರವನ್ನು ಕೋರಿದೆವು.

ಅಲ್ಲಿಂದ ಸರಕಾರಿ ಪಾಲಿಟೆಕ್ನಿಕ್

ಮತ್ತು ಶಿವಾಜಿ ಕಾಲೇಜು ಕಾರವಾರದಲ್ಲಿ

ಅಲ್ಲಿಯ ಶಿಕ್ಷಕ ವೃಂದದ ಸಹಕಾರವನ್ನು ಮತ್ತು ನಮಗೆ ಬಸವರಾಜ್ ಗುರಿಕಾರ್ ರಂತಹ ಅಭ್ಯರ್ಥಿ ಗಳ ಆವಶ್ಯಕತೆ ಯ ಬಗ್ಗೆ ವಿವರಿಸಿ ಸಹಕಾರ ಮತ್ತು ಮತದಾನ ಮಾಡುವಂತೆ ವಿನಂತಿಸ ಲಾಯಿತು.

ಕೊನೆಗೆ ಕಾರವಾರದ ಪತ್ರಿಕಾ ಭವನದಲ್ಲಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ,ವಿದ್ಯಾರ್ಥಿ ಒಕ್ಕೂಟದ ಅದ್ಯಕ್ಷರು ಮತ್ತು ಎಸ್ಡಿಎಂಸಿ ಸಿ ಎಫ್ ತಂಡವು ಸುದ್ದಿಗೋಷ್ಠಿಯನ್ನು ಕರೆದು ಸರಕಾರಿ ಶಾಲೆಗಳ ಸಬಲೀಕರಣ ಕ್ಕಾಗಿ ಮಾನ್ಯ ಪಶ್ಚಿಮ ಪದವೀಧರ ಕ್ಷೇತ್ರ ಅಭ್ಯರ್ಥಿ ಹಲವು ವಿಷಯಗಳ ಬಗ್ಗೆ ತಮ್ಮ ಅಜೆಂಡಾ ದಲ್ಲಿ ಹೆಸರಿಸಿದ್ದು ಅದರಲ್ಲಿ ಸಬಲೀಕರಣ ಸಮಿತಿಯ ವರದಿಯಲ್ಲಿ ರುವ ಹಲವು ವಿಷಯಗಳು,ಅದೇ ರೀತಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಶಾಲೆಗಳಲ್ಲಿ ಜಾರಿಗೊಳಿಸುವ ಬಗ್ಗೆ ಆಶ್ವಾಸನೆಯನ್ನು ಕೊಟ್ಟಿರುವುದರಿಂದ,ಮತ್ತು ಈಗಾಗಲೇ ಎಸ್ಡಿಎಂಸಿ ಸಮನ್ವಯ ವೇದಿಕೆಗೆ ಹಲವು ರೀತಿಯ ಸಲಹೆ ಸಹಕಾರಗಳನ್ನು ಕೊಟ್ಟಿರುವುದರಿಂದ , ಅದಲ್ಲದೆ ಅವರು ಪಕ್ಷಾತೀತ ಮತ್ತು ಪಕ್ಷೇತರ ಅಭ್ಯರ್ಥಿ ಆಗಿರುವ ಕಾರಣ ಸಮನ್ವಯ ವೇದಿಕೆಯು ಬೆಂಬಲವನ್ನು ಸೂಚಿಸುತ್ತಿದೆ.

ಅದೇ ರೀತಿ ಪದವೀಧರ ಮತದಾರರು ಪಕ್ಷವನ್ನು ಬಿಟ್ಟು ಚಿಂತಿಸಿ ರಾಜಕೀಯ ರಹಿತ ,ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಹೋರಾಟ ಮಾಡುತ್ತಿರುವ ಸಮರ್ಥ ನಾಯಕನಿಗೆ ಮತವನ್ನು ನೀಡಿ ವಿಜಯಿಸಬೇಕಾಗಿ ಅಪೇಕ್ಷಿಸಿದರು.

ಅದಲ್ಲದೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ರಾಘು ನಾಯ್ಕ್ ಮಾತನಾಡಿ ಈ ಸಲ ನಮ್ಮ ಮತ ಅರ್ಹ ಶಿಕ್ಷಣ ಪ್ರೇಮಿಗೆ ಕೊಡುತ್ತಿದ್ದು,ಅವರಿಂದ ಪದವೀಧರ ರ ಸಮಸ್ಯೆಗಳು ಖಂಡಿತವಾಗಿಯೂ ಪರಿಹಾರ ಆಗಬಹುದು, ಅವರು ನಮ್ಮ ದ್ವನಿಯಾಗಿ ವಿಧಾನ ಪರಿಷತ್ ನಲ್ಲಿ ಇರಬೇಕಾಗಿದೆ. ಅವರಿಗೆ ಎಲ್ಲಾ ಪದವೀದರ ಬಂದುಗಳು ಮತ ನೀಡಬೇಕಾಗಿ ಕೇಳಿಕೊಂಡು,ವಿದ್ಯಾರ್ಥಿ ಒಕ್ಕೂಟವು ಪೂರ್ಣ ಸಹಕಾರವನ್ನು ಕೊಡುತ್ತಿದೆ ಎಂದು ಹೇಳಿದರು.

ಶಾಂತಿ ಮೇಡಂ ರವರು ಸ್ವಾಗತ ಮಾಡಿ, ರಾಘವೇಂದ್ರ ಗಾಣಿಗರು ಧನ್ಯವಾದ ಸಮರ್ಪಿಸಿದರು, ಜ್ಯೋತಿ ಶೆಟ್ಟಿ ಮತ್ತು ಹರೀಶ್ ಕೆ ಉಪಸ್ಥಿತರಿದ್ದರು

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...