ಆಗಸ್ಟ್ 24ರ ಮೊದಲು ಸ್ಪರ್ಧಾರ್ಥಿಗಳನ್ನು ಲೈಕ್ಸ್ ನೀಡುವ ಮೂಲಕ ಪ್ರೋತ್ಸಾಹಿಸಬಹುದು
(ವಿಶ್ವ ಕನ್ನಡಿಗ ನ್ಯೂಸ್) : ಫೆಸ್ರ ಮೀಡಿಯಾ ಆಯೋಜಿಸಿರುವ ಅರೇಬಿಕ್ ಕ್ಯಾಲಿಗ್ರಫಿ ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸ್ಪರ್ಧಾರ್ಥಿಗಳ ವಿಡಿಯೋಗಳನ್ನು ಫೆಸ್ರ ಮೀಡಿಯಾ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ವಿಡಿಯೋಗೆ ಬರುವ ಲೈಕ್ಸ್ ಗಳೂ ಕೂಡ ತೀರ್ಪಿನ ಒಂದು ಭಾಗವಾಗಿ ಇರುವುದರಿಂದ ಸಾರ್ವಜನಿಕರು ವಿಡಿಯೋಗೆ ಲೈಕ್ ಕೊಡುವ ಮೂಲಕ ಸ್ಪರ್ಧಾರ್ಥಿಗಳನ್ನು ಪ್ರೋತ್ಸಾಹಿಸಬಹುದು.
ಆಗಸ್ಟ್ 24ರ ಒಳಗೆ ಬರುವ ಲೈಕ್ಸ್ ಗಳನ್ನು ಮಾತ್ರ ತೀರ್ಪು ನೀಡುವ ಸಂದರ್ಭದಲ್ಲಿ ಪರಿಗಣಿಸಲಾಗುವುದು. ಆಗಸ್ಟ್ 26ರಂದು ವಿಜೇತರನ್ನು ಘೋಷಿಸಲಾಗುವುದು.
ಫೆಸ್ರ ಮೀಡಿಯಾ ಕ್ಯಾಲಿಗ್ರಪಿ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವ ಕ್ರಮ
1. ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ 3 ತೀರ್ಪುಗಾರರು ತೀರ್ಪು ನೀಡಲಿದ್ದಾರೆ ಮತ್ತು ಒಟ್ಟು 100 ಅಂಕಗಳಾಗಿರುತ್ತದೆ.. 2. ಎರಡು ತೀರ್ಪುಗಾರರು ಸ್ಪರ್ಧಾರ್ಥಿಗಳ ಕ್ಯಾಲಿಗ್ರಫಿ ಪರಿಶೀಲಿಸಿ ತಲಾ 35 ಅಂಕಗಳೊಂದಿಗೆ ಅಂಕವನ್ನು ನೀಡುತ್ತಾರೆ ಹಾಗು 3ನೇ ತೀರ್ಪುಗಾರರಾಗಿ ಫೆಸ್ರ ಮೀಡಿಯಾ ಟೀಮ್ 30 ಅಂಕಗಳೊಂದಿಗೆ ಅಂಕ ನೀಡುತ್ತಾರೆ. (ಯೂಟ್ಯೂಬ್ ವಿಡಿಯೋ ಲೈಕ್ಸ್ 20 ಅಂಕ ಹಾಗು ಸ್ಪರ್ಧಾರ್ಥಿಗಳ ವಿಡಿಯೋ ಪರ್ಫಾಮನ್ಸ್ 10 ಅಂಕ ಆಗಿರುತ್ತದೆ.) 3. ಅಂಕಗಳು ಸಮಬಲವಾದಲ್ಲಿ ತೀರ್ಪುಗಾರರು ಪುನರ್ ಪರಿಶೀಲನೆ ಮಾಡಿ ವಿಜಯಿಯನ್ನು ತೀರ್ಮಾನಿಸುತ್ತಾರೆ.. 4. ತೀರ್ಪುಗಾರ ತೀರ್ಮಾನವೇ ಅಂತಿಮವಾಗಿರುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.