ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಸರ್ಕಾರದಿಂದ ಅನುಮತಿ ಸಿಕ್ಕಿದ ಬೆನ್ನಲ್ಲೇ ಉಡುಪಿ ಜಿಲ್ಲೆಯಾದ್ಯಂತ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದೆ. ಹೀಗಾಗಿ ಮದ್ಯ ಕೊಂಡುಕೊಳ್ಳವ ಸಾಲು ಕಿ. ಮೀ ಗಟ್ಟಲೆ ದೂರ ಬಿರು ಬಿಸಿಲಿನಲ್ಲೂ ನಿಂತು ಖರೀದಿಸುವ ದ್ರಶ್ಯ ಕಂಡು ಬಂತು. ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ತನಕ ಸಮಯ ಸೀಮಿತಗೊಳಿಸಲಾಗಿತ್ತು,ಬೆಳಿಗ್ಗೆ 5 ಗಂಟೆಯಿಂದಲೇ ಜನರು ಮದ್ಯದಂಗಡಿಗಳ ಮುಂದೆ ಕ್ಯೂ ನಿಂತ ದೃಶ್ಯ ಸಾಮಾನ್ಯವಾಗಿತ್ತು. ವೈನ್ ಶಾಪ್ ಎದುರು ಸಾಮಾಜಿಕ ಅಂತರ ಕೆಲವೆಡೆ ಮರೆಯಾಗಿದ್ದರೂ, ಮದ್ಯಪ್ರಿಯರು ಶಾಂತಚಿತ್ತದಿಂದಲೇ ಸಾಲುದ್ದ ಕ್ಯೂ ನಿಂತಿದ್ದರು. ಕೆಲವೆಡೆ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರ್ಕ್ ಮಾಡಿದ ಜಾಗದಲ್ಲಿ ನಿಂತು ಖರೀದಿಸಬೇಕಾಯಿತು . ಮಣಿಪಾಲ್ – ಮಧ್ಯ ಖರೀದಿಯಲ್ಲಿ ಹುಡುಗೀರದ್ದೇ ಸಿಂಹ ಪಾಲು:ಹೇಳಿ ಕೇಳಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ದೇಶದ್ಯಾಂತ ಜನಪ್ರಿಯ ಪಡೆದಿದೆ ,ಮೆಡಿಕಲ್ ಇ೦ಜಿನಿಯರ್ನಿಗ್ ಕೂಡಾ ತವರು ಮನೆ ಕೂಡಾ ಹೌದು.
ಬಹುಪಾಲು ವಿದ್ಯಾರ್ಥಿಗಳು ಓದಿಗಾಗಿ ಹೊರದೇಶ ದಿಂದ ಮಾತ್ರ ವಲ್ಲದೇ ಹೊರ ರಾಜ್ಯದಿಂದ ಆಗಮಿಸ್ತಾರೆ ,ಪಾಶ್ಚ್ಯಾತ್ಯ ಸಂಸ್ಕೃತಿಗೆ ಹೆಸರುವಾಸಿಯೂ ಹೌದು ಈ ನಿಟ್ಟಿನಲ್ಲಿ ಸುಮಾರು ನಲವತ್ತು ದಿನಗಳಿಂದ ಮದ್ಯದ ರುಚಿಯಿಂದ ಹೊರಗಿದ್ದ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನೀಯರು ಮದ್ಯಕ್ಕಾಗಿ , ಬಿಸಿಲ ಝಳ ತಪ್ಪಿಸಲು ಕೊಡೆ ,ಫುಲ್ ಮಾಸ್ಕ್ ಧರಿಸಿ ,ಸಾಲಿನಲ್ಲಿ ನಿಂತ ದ್ರಶ್ಯವೂ ಕಂಡೂ ಬಂತು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.