ಮೈಸೂರು (www.vknews.com) : ಕರೋನ ಲಾಕ್ ಡೌನ್ ಹಿನ್ನೆಲೆ ಪ್ರೇಮಿಗಳಿಬ್ಬರು ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಲ್ಕುಣಿಕೆ ಗ್ರಾಮದಲ್ಲಿ ನಡೆದಿದೆ. ತಮ್ಮ ಗೆಳಯ ಗೆಳತಿಯರ ಸಹಾಯ ಪಡೆದು ವಿವಾಹ ವಾಗಿರುವ ಕಲ್ಕುಣಿಕೆ ಗ್ರಾಮದ ಅನುಷಾ ಹಾಗೂ ಕೇಶವ್ ನವ ಜೋಡಿಗಳು.
ಇನ್ನೂ ಇವರ ಪ್ರೀತಿಗೆ ಹುಡುಗ ಮತ್ತು ಹುಡುಗಿ ಎರಡೂ ಮನೆಯವರ ವಿರೋಧದ ನಡುವೆ ವಿವಾಹ ವಾಗಿದ್ದು, ಈ ಪ್ರೇಮಿಗಳಿಗೆ ಗ್ರಾಮದ ಚಂದ್ರಶೇಖರ್ ಹಾಗೂ ಬಿ.ಎನ್.ಜಯರಾಂ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು , ನಮಗೆ ರಕ್ಷಣೆ ನೀಡಲು ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನೂ ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವರದಿ : ನಯನ್ ಮಹೇಶ್