ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ನಿಲ್ಲುವ ಹಾಗಿಲ್ಲ ಇಂದು ಬರೋಬ್ಬರಿ 204 ಮಂದಿಯಲ್ಲಿ ಸೋಂಕು ಕಾಣಿಸಿ ಕೊಂಡಿದೆ . ನಿನ್ನೆ 93 ಮಂದಿಯಲ್ಲಿ ಸೋಂಕು ದೃಢ ಪಟ್ಟಿತ್ತು ಇಂದು ವೇಗ ದುಪ್ಪಟ್ಟಾಗಿದೆ ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 768 ಕ್ಕೆ ಏರಿಕೆಯನ್ನು ಕಂಡಿದೆ .
203 ಮಹಾರಾಷ್ಟ್ರದಿಂದ ಬಂದವರು ಹಾಗೂ ಒಂದು ಪೊಲೀಸ್ ಪೇದೆ ಸೇರಿದ್ದಾರೆ . ಸೋಂಕಿತರಲ್ಲಿ 157 ಜನ ಪುರುಷರು 40 ಮಹಿಳೆಯರು ಮತ್ತು 7 ಮಕ್ಕಳು ಸೇರಿದ್ದಾರೆ. ಇಂದಿನ ವರದಿಗಾಗಿ 2000ಕ್ಕಿಂತ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 204 ಪಾಸಿಟಿವ್ ಪತ್ತೆಯಾಗಿದೆ. ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.